ಮಡಿಕೇರಿ, ಜು. ೧೫: ಅಂಡರ್ ೨೩ ಮಂಗಳೂರು ವಲಯ ಕ್ರಿಕೆಟ್ ತಂಡಕ್ಕೆ ಕೊಡಗು ಜಿಲ್ಲೆಯ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ತಾ.೧೯ ರಂದು ಮಂಗಳೂರು ಲಾಲ್ ಬಾಗ್ನಲ್ಲಿರುವ ಸಾಯ್ ಬೀನ್ ಕಾಂಪ್ಲೆಕ್ಸ್ ನ ೨೨ ಯಾರ್ಡ್ಸ್ ಇಂಡೋರ್ ಕ್ರಿಕೆಟ್ ಫೆಸಿಲಿಟಿಯಲ್ಲಿ ನಡೆಯಲಿದೆ. ೨೦೦೧ ಸೆಪ್ಟೆಂಬರ್ ೧ ರಂದು ಹಾಗೂ ನಂತರದಲ್ಲಿ ಜನಿಸಿರುವ, ೧೯ ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಂದು ಬೆಳಿಗ್ಗೆ ವೈಟ್ ಜರ್ಸಿ, ಶೂಸ್ನೊಂದಿಗೆ ಜನನ ಪ್ರಮಾಣ ಪತ್ರದೊಂದಿಗೆ ಬೆ. ೮ ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕೆಂದು ಕೆ.ಎಸ್.ಸಿ.ಎ ಮಂಗಳೂರು ವಲಯ ಸಂಚಾಲಕ ರತನ್ ಕುಮಾರ್ ಅವರು ತಿಳಿಸಿದ್ದಾರೆ.