ನಾಪೋಕ್ಲು, ಜು. ೧೫: ಸಮೀಪದ ಬಲ್ಲಮಾವಟಿ ಗ್ರಾಮದ ಕೂಲಿ ಕಾರ್ಮಿಕ ವಾಸು ಅವರ ಪುತ್ರ ಯೋಗೇಶ್ ಎಂಬಾತನ ಮೇಲೆ ಗ್ರಾಮದ ಕಾಫಿ ಬೆಳೆಗಾರ ರೊಬ್ಬರು ಹಲ್ಲೆ ಮಾಡಿದ್ದು, ಈ ಸಂಬAಧ ಪೊಲೀಸ್ ಮೊಕದ್ದಮೆ ದಾಖಲಾಗಿದೆ.
ಬಲ್ಲಮಾವಟಿ ಗ್ರಾಮದ ಕಾಫಿ ಬೆಳೆಗಾರ ತಾಪಂಡ ವರುಣ್ ಸುಬ್ಬಯ್ಯ ಅವರ ಮನೆಯಲ್ಲಿ ವಾಸು ಅವರ ಇಬ್ಬರು ಹೆಣ್ಣು ಮಕ್ಕಳು ಅನಧಿಕೃತವಾಗಿ ಕೂಲಿ ಕೆಲಸ ನಿರ್ವಹಿಸುತ್ತಿದ್ದುದು ಗಮನಕ್ಕೆ ಬಂದಿದ್ದು, ಕೆಲಸದ ಸಂಬAಧ ವಿಚಾರಿಸಿದಕ್ಕೆ ವರುಣ್ ಸುಬ್ಬಯ್ಯ ತನ್ನ ಮಗನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ವಾಸು ದೂರು ನೀಡಿದ್ದು, ಮೊಕದ್ದಮೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬAಧಪಟ್ಟAತೆ ಎಎಸ್‌ಪಿ ಸುಂದರ್ ರಾಜ್, ಡಿವೈಎಸ್ಪಿ ಗಂಗಾಧರಪ್ಪ, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಕ್ರೆöÊಂ ಪಿಎಸ್‌ಐ ಶ್ರೀಧರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.