ಮಡಿಕೇರಿ, ಜು. ೧೫: ಬಿಳಿಗೇರಿ ಹಾಗೂ ಅರ್ವತ್ತೋಕ್ಲು ಪ್ಲಾಂಟರ್ಸ್ ಕ್ಲಬ್ ವತಿಯಿಂದ ಮಡಿಕೇರಿ ಹೊರವಲಯದ ಬಿಳಿಗೇರಿ ಗ್ರಾಮದ ತುಂತಜ್ಜೆ ಕುಟುಂಬಸ್ಥರ ಗz್ದೆಯಲ್ಲಿ ಹಿಂದೂ ಸಮುದಾಯ ಬಾಂಧವರಿಗಾಗಿ ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದ ೪ನೇ ವರ್ಷದ ಮುಕ್ತ ಕೆಸರುಗz್ದÉ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿತು. ಕೆಸರು ಗz್ದÉಯಲ್ಲಿ ಕ್ರೀಡಾ ಪ್ರೇಮಿಗಳು ತಮ್ಮ ಕ್ರೀಡಾ ಪ್ರತಿಭೆಗಳನ್ನು ಹೊರ ಹಾಕಿದರು.

ಕ್ರೀಡಾಪಟುಗಳು ಕೆಸರಿನ¯್ಲÉ ಕ್ರಿಕೆಟ್ ಆಡುವ ಮೂಲಕ ತಮ್ಮ ವಿಶೇಷ ಪ್ರತಿಭೆಗಳನ್ನು ಹೊರಹಾಕಿದರು. ಆಟಗಾರರ ಏಳುಬೀಳುಗಳು ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವನ್ನು ನೀಡಿತು. ಮಳೆಯ ಸಿಂಚನದಲ್ಲಿ ಮೊಣಕಾಲಿನವರೆಗೆ ನೀರು ತುಂಬಿದ ಕೆಸರು ಗz್ದÉಯಲ್ಲಿ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಓಟದ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು.

ಬಿಳಿಗೇರಿ ಹಾಗೂ ಅರ್ವತ್ತೋಕ್ಲು ಪ್ಲಾಂಟರ್ಸ್ ಕ್ಲಬ್‌ನ ಪ್ರಮುಖರಾದ ಉಮೇಶ್ ಅಪ್ಪಣ್ಣ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ, ಕ್ಲಬ್ ವತಿಯಿಂದ ೪ನೇ ವರ್ಷದ ಅಂಗವಾಗಿ ಕ್ರಿಕೆಟ್, ಓಟದ ಸ್ಪರ್ಧೆ, ವಾಲಿಬಾಲ್, ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ (೨೨, ೧೨ಬೋರ್ ವಿಭಾಗದಲ್ಲಿ) ಹಮ್ಮಿಕೊಳ್ಳಲಾಗಿತ್ತು. ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಭತ್ತದ ಗz್ದÉಗಳು ನಶಿಸಿ ಹೊಗುತ್ತಿವೆ. ಅದರ ಉಳಿವಿನ ಜತೆಗೆ ಯುವಕರಲ್ಲಿ ಗ್ರಾಮೀಣ ಕ್ರೀಡೆಗಳ ಅರಿವು ಮೂಡಿಸುವ ಉz್ದÉÃಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟ ಉತ್ತಮವಾಗಿ ಮೂಡಿಬಂದಿದೆ. ಕ್ರೀಡಾಭಿಮಾನಿಗಳು ಮಳೆಯ ನಡುವೆ ಆಗಮಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದು ಶ್ಲಾಘನೀಯ ಎಂದರು.