ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ, ಜು. ೧೫: ಸೋಮವಾರಪೇಟೆ ತಾಲೂಕಿನ ಬೆಳ್ಳಾರಳ್ಳಿ, ಹಂಡ್ಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಆಫ್ರಿಕನ್ ಶಂಖಹುಳುಗಳ ನಿಯಂತ್ರಣ ಕ್ರಮಕ್ಕೆ ಮುಂದಾಗಬೇಕೆAದು ಕಾಫಿ ಬೆಳೆಗಾರರು ಕಾಫಿ ಮಂಡಳಿಗೆ ಮನವಿ ಮಾಡಿದ್ದಾರೆ.
ಮಳೆಗಾಲ ಪ್ರಾರಂಭವಾದೊಡನೆ ಸುತ್ತಲಿನ ಕಾಫಿಗಿಡ, ಕರಿಮೆಣಸು ಬಳ್ಳಿ, ಬಾಳೆ, ಅಡಿಕೆ, ಶುಂಠಿ ಗಿಡದಲ್ಲೆಲ್ಲ ಶಂಖದAತೆ ನೇತಾಡುತ್ತಾ ಆರೇಳು ವರ್ಷಗಳಿಂದ ರೈತರಿಗೆ ತಲೆನೋವಾಗಿ ಪರಿಣಮಿಸುತ್ತಿರುವ ಈ ಆಫ್ರಿಕನ್ ದೈತ್ಯ ಶಂಖ ಹುಳುಗಳು ಈ ವರ್ಷವೂ ತಲೆನೋವಾಗಿ ಪರಿಣಮಿಸಿದೆ.
ಮೂಲತಃ ಪೂರ್ವ ಆಫ್ರಿಕಾದ ಈ ಹುಳು ಭಾರತದಲ್ಲಿ ೧೮೪೭ರಲ್ಲಿ ಕಾಣಿಸಿಕೊಂಡಿದ್ದು, ಆಫ್ರಿಕನ್ ಮೂಲವಾದ್ದರಿಂದ ಇದನ್ನು ಆಫ್ರಿಕನ್ ದೈತ್ಯ ಶಂಖ ಹುಳುವೆಂದು ಕರೆಯಲಾಗುತ್ತದೆ. ‘ಅಖಾಟಿನಿಡೆ’ ಕುಟುಂಬಕ್ಕೆ ಸೇರಿದ್ದು, ‘ಅಖಾಟಿನಫೂಲಿಕ’ ಎಂದು ವೈಜ್ಞಾನಿಕ ಹೆಸರಿನಿಂದ ಕರೆಯ ಲಾಗುತ್ತದೆ. ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಾಫಿ ತೋಟಗಳಲ್ಲಿ ಮಳೆಗಾಲದಲ್ಲಿ ಹೇರಳವಾಗಿ ಕಾಣಸಿಗುವ ಈ ಹುಳುಗಳು ರಾತ್ರಿವೇಳೆಯಲ್ಲಿ ಹೆಚ್ಚು ಚುರುಕಾಗಿ ಹಗಲಿನ ವೇಳೆಯಲ್ಲಿ ಮರಗಳ ಮೇಲೆ ಬಿದ್ದಿರುವ ಮರದ ತುಂಡುಗಳಲ್ಲಿ, ಕಸದ ರಾಶಿಯಲ್ಲಿ ಅಡಗಿಕೊಂಡಿರುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಇವುಗಳ ಕಾರ್ಯ ಚಟುವಟಿಕೆ ಆರಂಭಗೊಳ್ಳುತ್ತವೆ.
ಪಪ್ಪಾಯ, ರಬ್ಬರ್, ಕೊಕೊ, ಬಾಳೆ, ಅಡಿಕೆ ಸೇರಿದಂತೆ ೫೦೦ಕ್ಕೂ ಹೆಚ್ಚು ವಿವಿಧ ಜಾತಿಗಳ ಸಸ್ಯಗಳಲ್ಲಿ ಮೊಟ್ಟೆ ಇಟ್ಟು ಮರಿಮಾಡುತ್ತವೆ. ಇದರ ಜೀವಿತಾವಧಿ ಸುಮಾರು ೧೦ ವರ್ಷಗಳವರೆಗೂ ಇದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
೨೦೧೫ರಿಂದ ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕಿನ ಕೆಲವೆಡೆ ಮಳೆಗಾಲ ಪ್ರಾರಂಭ ವಾದೊಡನೆ ಕಂಡುಬರುತ್ತಿರುವ ಈ ಹುಳುವನ್ನು ನಿಯಂತ್ರಿಸಲು ಚೆಟ್ಟಳ್ಳಿ ಕಾಫಿ ಮಂಡಳಿ ತಜ್ಞರು ಹಾಗೂ ವಿಸ್ತರಾಣಾಧಿಕಾರಿಗಳು ಪ್ರತೀವರ್ಷ ವಿವಿಧ ತೋಟಗಳಿಗೆ ತೆರಳಿ ಪರಿಶೀಲಿಸುತ್ತಾರೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಮುಖ್ಯ ಕಾಫಿ ಸಂಶೋಧನಾ ಕೇಂದ್ರ ಹಾಗೂ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಸಂಶೋಧನೆ ನಡೆಸಿ ಸಿದ್ಧಗೊಂಡಿರುವ ಕ್ರಿಮಿನಾಶಕ ಹಾಗೂ ‘ಕ್ಯಾಚ್ ಆ್ಯಂಡ್ ಕಿಲ್ಲ್’ ಮುಖಾಂತರ ಇವುಗಳ ಸಂಖ್ಯೆಯನ್ನು ಗಣನೀಯವಾಗಿ ನಿಯಂತ್ರಣಕ್ಕೆ ತರಬಹುದಾಗಿದೆ.
ತೋಟಗಳಲ್ಲಿ ಅನಗತ್ಯ ಕಳೆ, ಗಿಡಗಂಟೆಗಳು, ಮರದ ತುಂಡುಗಳು ಶಂಖಹುಳುಗಳಿಗೆ ಆಶ್ರಯ ನೀಡುವುದರಿಂದ ಅಂತಹ ಆಶ್ರಯ ತಾಣಗಳನ್ನು ತೆಗೆದು ಹಾಕಿ ಚಿಪ್ಪಿನ ಸುಣ್ಣದಪುಡಿ, ಬ್ಲೀಚಿಂಗ್ ಪೌಡರ್ ಅಥವಾ ಉಪ್ಪನ್ನು ಶಂಖಹುಳುಗಳು ಹೆಚ್ಚಾಗಿರುವ ಕಡೆಗಳಲ್ಲಿ ಬಳಸುವುದು, ತೋಟದಲ್ಲಿ ಪಪ್ಪಾಯ ಗಿಡದ ಕಾಂಡ/ ಎಲೆ ಅಥವಾ ತೇವವಿರುವ ಗೋಣಿಚೀಲವನ್ನು ಇಡುವುದರಿಂದ ಹುಳುಗಳು ಆಕರ್ಷಿತವಾಗುತ್ತÀವೆ. ಈ ರೀತಿ ಆಕಷÀðಣೆಗೊಂಡ ಹುಳುಗಳನ್ನು ನಾಶಪಡಿಸಬೇಕಿದೆ.
ರಾಸಾಯನಿಕಗಳ ಬಳಕೆ:
೧೬೦-೨೪೦ ಗ್ರಾಂ ಲಾರ್ವಿನ್ ಪುಡಿಯನ್ನು ೬೦ ಕೆ.ಜಿ ಅಕ್ಕಿ ತೌಡಿನೊಂದಿಗೆ ಮಿಶ್ರಮಾಡಿ ನಂತರ ೬ ಕೆ.ಜಿ. ಬೆಲ್ಲವನ್ನು ೫ ಲೀಟರ್ ಬಿಸಿ ನೀರಿನಲ್ಲಿ ನಿಧಾನವಾಗಿ ಕರಗಿಸಿ ಮತ್ತು ಬೆಲ್ಲದ ದ್ರಾವಣಕ್ಕೆ ೩೦೦ ಮಿಲಿ ಹರಳೆಣ್ಣೆ ಮಿಶ್ರಣ ಮಾಡಿ ಈ ಬೆಲ್ಲದ ದ್ರಾವಣವನ್ನು ನಿಧಾನವಾಗಿ ತೌಡುಲಾರ್ವಿನ್ ಮಿಶ್ರಣದೊಂದಿಗೆ ಚೆನ್ನಾಗಿ ಕಲಸಿ ಅಗತ್ಯವಿದ್ದಲ್ಲಿ ನೀರನ್ನು ಸೇರಿಸಿ ಮಿಶ್ರಣ ತುಂಬಾ ತೇವ ಅಥವಾ ಗಟ್ಟಿಯಾಗದಂತೆ ನೋಡಿಕೊಳ್ಳಬೇಕು. ಒಂದು ಎಕÀರೆ ಪ್ರದೇಶದಲ್ಲಿ ೧೫೦೦ ಗ್ರಾಂ ಮಿಶ್ರಣದ ಉಂಡೆಯನ್ನು ೪೦೦ ಜಾಗಗಳಲ್ಲಿ ಪ್ರತೀ ನಾಲ್ಕು ಗಿಡಗಳ ಮಧ್ಯೆ ಇರಿಸುವುದು, ಶಂಖಹುಳುಗಳ ಓಡಾಟ ಕಂಡುಬAದ ಜಾಗ (ಗಿಡಗಳ ಬುಡ) ದಲ್ಲಿ ೫% ಮೆಟಾಲ್ಡಿಹೈಡ್ ಹರಳುಗಳನ್ನು ಹರಡಬೇಕೆಂದು ತಜ್ಞರು ಹೇಳುತ್ತಾರೆ.
ಸಾಮಾನ್ಯವಾಗಿ ಶಂಖ ಹುಳುಗಳು ಹಗಲು ನಿಷ್ಕಿçಯ ವಾಗಿದ್ದು, ರಾತ್ರಿ ವೇಳೆ ಆಹಾರವನ್ನು ಹುಡುಕುತ್ತಾ ಕ್ರಿಯಾಶೀಲವಾಗಿರುತ್ತದೆ. ಹಾಗಾಗಿ ಮೇಲಿನ ಔಷಧೀಯ ಉಂಡೆಗಳನ್ನು ಸಂಜೆ ವೇಳೆ ಬಳಸಬೇಕು. ಮಾರನೆಯ ದಿನ ಬೆಳಿಗ್ಗೆ ಸತ್ತ ಹುಳಗಳನ್ನು ನಾಶಪಡಿಸಬೇಕು. ಔಷಧಿಗಳನ್ನು ತಯಾರಿಸುವಾಗ, ಬಳಸುವಾಗ, ಹುಳಗಳನ್ನು ಆಯುವಾಗ ಕೈಕವಚನ್ನು ಧರಿಸಬೇಕು. ಇತರೆ ಪ್ರದೇಶಗಳಿಗೆ ಈ ಹುಳಗಳು ಹರಡದಿರಲು ಬಾಧಿತ ಪ್ರದೇಶ ಗಳಿಂದ ಮಣ್ಣು, ಕೊಟ್ಟಿಗೆ ಗೊಬ್ಬರ, ನರ್ಸರಿ ಗಿಡಗಳನ್ನು ತೆಗೆದು ಕೊಳ್ಳಬಾರದು. ಆದರೆ ಆಫ್ರಿಕನ್ ಶಂಖ ಹುಳಗಳು ನಿಯಂತ್ರಣವಾಗ ಬೇಕೆಂದರೆ ಕಾಫಿ ಬೆಳೆಗಾರರೆಲ್ಲರು ಮುಂದಾಗಬೇಕು. ಈ ಹಿಂದೆ ಶಂಖಹುಳುಗಳ ನಾಶಕ್ಕೆ ತಗಲುವ ವೆಚ್ಚವನ್ನು ಕಾಫಿ ಬೆಳೆಗಾರರ ಸಂಘ ಬೆಳೆಗಾರರಿಗೆ ನೀಡಿತ್ತು. ಕಾಫಿ ಮಂಡಳಿ ಕಳೆದ ೭ ವರ್ಷಗಳಿಂದ ನಿಯಂತ್ರಣ ಕಿಟ್ ಅನ್ನು ನೀಡುತ್ತಿಲ್ಲ. ಶಂಖಹುಳುಗಳ ನಾಶಕ್ಕೆ ಈ ಬಾರಿಯಾದರೂ ಕಾಫಿಮಂಡಳಿ ಕಿಟ್ ಇಲ್ಲವೇ ಸಹಾಯಧನ ನೀಡುವಂತೆ ಬೆಳೆಗಾರರು ಒತ್ತಾಯಿಸಿದ್ದಾರೆ.