ಕಣಿವೆ, ಜು. ೧೫: ಜೀವ ನದಿ ಕಾವೇರಿಯ ಮಡಿಲಿಗೆ ಮನ ಬಂದAತೆ ಎಸೆಯುವ ತ್ಯಾಜ್ಯಗಳ ರಾಶಿ ತುಂಬಿ ಹರಿವ ನದಿಯಲ್ಲಿ ರಾಶಿ ರಾಶಿಯಾಗಿ ತೇಲುತ್ತಿವೆ.
ಹೀಗೆ ತೇಲಿ ಬಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಣಿವೆ ರಾಮಲಿಂಗೇಶ್ವರ ಸನ್ನಿಧಿಯ ಮುಂಬದಿಯಲ್ಲಿರುವ ದೇವತಾ ವೃಕ್ಷವೊಂದು ನದಿಯ ತ್ಯಾಜ್ಯವನ್ನು ಹಿಡಿದಿಟ್ಟ ರೀತಿಯಲ್ಲಿ ನೂರಾರು ಸಂಖ್ಯೆಯ ನೀರಿನ ಖಾಲಿ ಬಾಟಲ್ಗಳು ಸಂಗ್ರಹವಾಗಿದ್ದ ಚಿತ್ರಣ ಸೋಮವಾರ ಸಂಜೆ ಗೋಚರಿಸಿತು.
ಜೀವನದಿ ಕಾವೇರಿ ಒಡಲಿಗೆ ಕಸ ತ್ಯಾಜ್ಯಗಳನ್ನು ಹಾಕದಿರಿ. ಹಾಕಿದರೆ, ಕುಷ್ಟರೋಗ ಬರುತ್ತದೆ ಎಂಬಿತ್ಯಾದಿ ಮನವಿ ಹಾಗೂ ಎಚ್ಚರಿಕೆಗಳ ಫಲಕಗಳನ್ನು ಅಳವಡಿಸಿದಾಗ್ಯೂ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲ್ಗಳು ನದಿಯೊಳಗೆ ಹೇಗೆ ಬಂದವು? ಎಲ್ಲಿಂದ ಬಂದವು? ನದಿಗೆ ಎಸೆದವರಾರು? ಎಂಬ ಪ್ರಶ್ನೆಗಳು ನೋಡುಗರಲ್ಲಿ ಮೂಡುವುದು ಸಹಜ.