ಮಡಿಕೇರಿ, ಜು. ೧೫: ಜಿಲ್ಲೆಯಲ್ಲಿ ವಾಯು - ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ ಗೊಂಡAತಾಗಿದೆ. ಧಾರಾಕಾರ ಮಳೆ ಸುರಿಯುತ್ತಿರುವುದರೊಂದಿಗೆ ಗಾಳಿಯ ರಭಸವೂ ಹೆಚ್ಚಿದ್ದು, ಕೊಡಗು ಮಳೆಗಾಲದ ನೈಜ ಅನುಭವವನ್ನು ಕಾಣುತ್ತಿದೆ. ಕಾವೇರಿ - ಲಕ್ಷö್ಮಣತೀರ್ಥ ಸೇರಿದಂತೆ ಎಲ್ಲಾ ನದಿ ತೊರೆಗಳು ಉಕ್ಕಿ ಹರಿಯಲಾರಂಭಿಸಿದ್ದರೆ, ಜಲಪಾತಗಳು ಭೋರ್ಗೆರೆದು ಧುಮ್ಮಿಕ್ಕುತ್ತಿವೆ. ಎಲ್ಲೆಡೆ ನೀರಿನ ಮಟ್ಟ ಹೆಚ್ಚಳವಾಗಿದ್ದು, ಕೆಲವಾರು ಆಯಕಟ್ಟಿನ ಪ್ರದೇಶಗಳಲ್ಲಿ ಪ್ರವಾಹ ಭೀತಿಯೂ ಎದುರಾಗಿದೆ.

ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು ಕಂಡು ಬಂದಿದೆ. ಸೋಮವಾರದಂದು ಬೆಳಿಗ್ಗೆ ಜಲಾಶಯದಿಂದ ೨೦ ಸಾವಿರ ಕ್ಯೂಸೆಕ್ಸ್ನಷ್ಟು ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಯಬಿಡಲಾಗಿದೆ. ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾವೇರಿ ನೀರಾವರಿ ನಿಗಮದಿಂದ ನಿನ್ನೆಯೇ ಪ್ರವಾಹ ಮುನ್ನೆಚ್ಚರಿಕೆಯನ್ನು ನೀಡಲಾಗಿದ್ದು, ಜನರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ರಭಸದ ಗಾಳಿ - ಮಳೆಯ ಕಾರಣದಿಂದಾಗಿ ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ಸೋಮವಾರದಂದು ರಜೆ ಘೋಷಿಸಲ್ಪಟ್ಟಿತ್ತು. ಮಳೆಯಿಂದಾಗಿ ಎಲ್ಲೆಡೆ ಜನಸಂಚಾರವೂ ವಿರಳವಾಗಿದೆ. ಪ್ರಸ್ತುತ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ನಗರ - ಪಟ್ಟಣ ಪ್ರದೇಶಗಳಲ್ಲಿಯೂ ಆಗಾಗ್ಗೆ ವಿದ್ಯುತ್ ವ್ಯತ್ಯಯ ಉಂಟಾ ಗುತ್ತಿದೆ. ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಮರಗಳು ಬಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೆ, ತಂತಿಗಳು ದುರಸ್ತಿಗೀ ಡಾಗಿವೆ. ಇದರಿಂದಾಗಿ ಸೆಸ್ಕ್ಗೆ ಭಾರೀ ನಷ್ಟ ಉಂಟಾಗಿದೆ. ಇಲಾಖಾ ಸಿಬ್ಬಂದಿಗಳು ಆಗಿರುವ ಹಾನಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಹಲವೆಡೆಗಳಲ್ಲಿ ರಸ್ತೆಗೆ ಮರಗಳು ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದ್ದು, ಇದನ್ನು ಸಂಬAಧಿತ ಇಲಾಖಾ ಸಿಬ್ಬಂದಿಗಳು, ಸಾರ್ವಜನಿಕರು ತೆರವುಗೊಳಿಸಿದ್ದಾರೆ.

ಭಾಗಮಂಡಲ ಸಂಗಮ ಭರ್ತಿಯಾಗಿದ್ದು, ಬೇತ್ರಿ, ನಾಪೋಕ್ಲು, ಸಿದ್ದಾಪುರ, ಕರಡಿಗೋಡು, ಕುಶಾಲನಗರ, ಕಣಿವೆ ವಿಭಾಗದಲ್ಲಿ ಕಾವೇರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಮತ್ತೊಂದು ಪ್ರಮುಖ ನದಿಯಾದ ಲಕ್ಷö್ಮಣತೀರ್ಥದಲ್ಲೂ ನೀರಿನ ಮಟ್ಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ.

ಜಿಲ್ಲೆಯಲ್ಲಿ ಸರಾಸರಿ ೪೭.೫೨ ಇಂಚು

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈತನಕ ೪೭.೫೨ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೩ ಇಂಚು ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ೨೪.೫೨ ಇಂಚುಗಳಷ್ಟು ಅಧಿಕ ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ೬೯.೫೬ ಇಂಚು

ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈತನಕ ೬೯.೫೬ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೪೩.೫೬ ಇಂಚಿನಷ್ಟಾಗಿದ್ದು, ಈ ಬಾರಿ ೨೬ ಇಂಚು ಅಧಿಕ ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲೂ ಈ ಬಾರಿ ಮಳೆ ಅಧಿಕವಾಗಿದೆ. ಕಳೆದ ವರ್ಷ ೧೮.೫೮ ಇಂಚು ಮಳೆಯಾಗಿದ್ದರೆ, ಈ ಬಾರಿ ೪೮.೮೫ ಇಂಚಿನಷ್ಟಾಗಿದ್ದು, ಸುಮಾರು ೩೦ ಇಂಚುಗಳಷ್ಟು ಅಧಿಕವಾಗಿದೆ.

ಪೊನ್ನಂಪೇಟೆ ತಾಲೂಕಿನಲ್ಲಿ ಜನವರಿಯಿಂದ ಈ ತನಕ ೪೫.೩೦ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ (ಮೊದಲ ಪುಟದಿಂದ) ಕೇವಲ ೧೫.೭೭ ಇಂಚಿನಷ್ಟಾಗಿದ್ದು, ಈ ಬಾರಿ ೨೯.೫೩ ಇಂಚು ಅಧಿಕವಾಗಿದೆ.

ಸೋಮವಾರಪೇಟೆ

ಸೋಮವಾರಪೇಟೆ ತಾಲೂಕಿ ನಲ್ಲೂ ಮಳೆಯ ಪ್ರಮಾಣ ಹೆಚ್ಚಿದೆ. ಕಳೆದ ವರ್ಷ ತಾಲೂಕಿನಲ್ಲಿ ಜನವರಿಯಿಂದ ಈ ತನಕದ ಅವಧಿಯಲ್ಲಿ ೧೯.೩೯ ಇಂಚು ಮಳೆಯಾಗಿದ್ದು, ಈ ವರ್ಷ ೪೧.೪೪ ಇಂಚಿನಷ್ಟಾಗಿದೆ. ತಾಲೂಕಿನಲ್ಲೂ ೨೨ ಇಂಚಿನಷ್ಟು ಅಧಿಕ ಮಳೆ ಸುರಿದಿದೆ.

ಕುಶಾಲನಗರ

ಕುಶಾಲನಗರ ತಾಲೂಕಿಗೆ ಪ್ರಸಕ್ತ ವರ್ಷ ೩೨.೪೪ ಇಂಚು ಮಳೆಯಾಗಿವೆ. ಕಳೆದ ಬಾರಿ ೧೭.೭೧ ಇಂಚಿನಷ್ಟಾಗಿದ್ದು, ಈ ವರ್ಷ ೧೪.೭೩ ಇಂಚು ಹೆಚ್ಚಾಗಿದೆ.

೨೪ ಗಂಟೆಯಲ್ಲಿ ಸರಾಸರಿ ೨.೩೫ ಇಂಚು

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೨.೩೫ ಇಂಚು ಮಳೆಯಾಸಿದ್ದಾಪುರ: ಚೆನ್ನಯ್ಯನಕೋಟೆ ಗ್ರಾಮದ ಹೆಚ್.ಕೆ. ಉದಯ ಎಂಬವರ ಮನೆಯ ಗೋಡೆಗಳು ಗಾಳಿ ಮಳೆಗೆ ಸಿಲುಕಿ ಸಂಪೂರ್ಣವಾಗಿ ಕುಸಿದಿದ್ದು, ಮನೆಯ ಒಳಗಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಪ್ರವೀಣ್, ಗ್ರಾಮ ಪಂಚಾಯಿತಿ ಸದಸ್ಯೆ ಶೀಲಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆ ವತಿಯಿಂದ ನಷ್ಟಗೊಂಡಿರುವ ಮನೆ ಮಾಲೀಕರಿಗೆ ಪರಿಹಾರ ನೀಡಬೇಕೆಂದು ಶೀಲಾ ಮನವಿ ಮಾಡಿದ್ದಾರೆ.ಗಿದೆ. ಮಡಿಕೇರಿ ತಾಲೂಕಿನಲ್ಲಿ ೩.೫೩, ವೀರಾಜಪೇಟೆ ೧.೯೩, ಪೊನ್ನಂಪೇಟೆ ೧.೩೨, ಸೋಮವಾರಪೇಟೆ ೩.೦೭ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೯೧ ಇಂಚು ಮಳೆ ೨೪ ಗಂಟೆಗಳಲ್ಲಿ ಬಿದ್ದಿದೆ.

ಶಾಂತಳ್ಳಿಗೆ ಅಧಿಕ

ಕಳೆದ ೨೪ ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ ೫.೬೦ ಇಂಚಿನಷ್ಟು ಭಾರೀ ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲಿ ೪.೮೦ ಇಂಚು ಮಳೆಸುರಿದಿದೆ. ಉಳಿದಂತೆ ಮಡಿಕೇರಿ ೩.೫೫, ನಾಪೋಕ್ಲು ೨.೨೦, ಸಂಪಾಜೆ ೩.೫೬, ವೀರಾಜಪೇಟೆ ೧.೯೨, ಅಮ್ಮತ್ತಿ ೧.೯೪, ಪೊನ್ನಂಪೇಟೆ ೧.೬೮, ಶ್ರೀಮಂಗಲ ೧.೫೨, ಹುದಿಕೇರಿ ೧.೫೦, ಬಾಳೆಲೆ ಹೋಬಳಿಯಲ್ಲಿ ೦.೭೨ ಇಂಚು ಮಳೆಯಾಗಿದೆ. ಸೋಮವಾರಪೇಟೆ ೩.೭೭, ಶನಿವಾರಸಂತೆ ೧.೯೮, ಕೊಡ್ಲಿಪೇಟೆ ೧.೦೮, ಸುಂಟಿಕೊಪ್ಪ ೨.೬೪ ಹಾಗೂ ಕುಶಾಲನಗರ ಹೋಬಳಿಯಲ್ಲಿ ೧.೧೮ ಇಂಚು ಮಳೆ ದಾಖಲಾಗಿದೆ.

ಕಣಿವೆ : ಹೌದು, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಆಗಸ್ಟ್ ತಿಂಗಳಿನಲ್ಲಿ ಸುರಿದ ಆಶ್ಲೇಷಾ ಮಳೆಗೆ ಜಿಲ್ಲೆಯ ನದಿಗಳು ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗಿತ್ತು.

ಆದರೆ ಈ ಬಾರಿ ಆಶ್ಲೇಷಾಕ್ಕಿಂತ ಪುನರ್ವಸು ಮಳೆ ತೋರುತ್ತಿರುವ ಉಗ್ರ ಪ್ರತಾಪಕ್ಕೆ ಜಿಲ್ಲೆಯ ನದಿ ಪಾತ್ರದ ಮಂದಿ ಹೈರಾಣಾಗಿ ಹೋಗಿದ್ದಾರೆ. ಅಂದರೆ, ಜಿಲ್ಲೆಯಾದ್ಯಂತ ಅಲ್ಲಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಹಳ್ಳ ಕೊಳ್ಳ ಗಳು ತುಂಬಿ ಹರಿಯುತ್ತಿವೆ.

ಕಳೆದ ೨೦೧೭ ರಿಂದ ಈಚಿನ ಪ್ರತೀ ವರ್ಷದ ಮಳೆಗಾಲದಲ್ಲಿ ಆಶ್ಲೇಷಾ ಮಳೆ ಹಾಗೂ ಆಗಸ್ಟ್ ತಿಂಗಳು ಸನ್ನಿಹಿತವಾದರೆ ಕಾವೇರಿ ನದಿ ತಗ್ಗು ಪ್ರದೇಶಗಳ ಮಂದಿಗೆ ಪ್ರಯಾಸಕ್ಕೆ ಸಿಲುಕುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜುಲೈ ತಿಂಗಳಾರ್ಧದಲ್ಲಿಯೇ ಪುನರ್ವಸು ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಕಾರಣ, ಮಳೆಗೆ ಕಾವೇರಿ ಉಕ್ಕಿ ಹರಿದು ಅನಾಹುತ ಸೃಷ್ಟಿಸುವುದರಿಂದ ನದಿ ಪಾತ್ರದ ತಗ್ಗುಪ್ರದೇಶಗಳು ಜಲಾವೃತ ಗೊಳ್ಳುವುದಾಗಿದೆ.

ಕಳೆದ ಮೂರ್ನಾಲ್ಕು ಬಾರಿಯೂ ಇದೇ ಮಳೆಗಾಲದಲ್ಲಿ ಆಗಸ್ಟ್ ತಿಂಗಳಿನ ಆಶ್ಲೇಷಾ ಮಳೆಯಲ್ಲಿಯೇ ಕಾವೇರಿ ನದಿ ಕಾವು ಏರಿ ಹರಿವ ಕಾರಣ ತಗ್ಗು ಪ್ರದೇಶಗಳ ಮನೆಗಳು ಜಲಾವೃತವಾಗುವುದು ಹಾಗೂ ನದಿ ಪಾತ್ರದಲ್ಲಿ ರೈತರು ಕೈಗೊಳ್ಳುವ ಕೃಷಿ ಚಟುವಟಿಕೆಗಳು ಕೂಡ ಮುಳುಗಡೆಯಾಗುವ ಕಾರಣ ಮಂದಿ ಸಹಜವಾಗಿಯೇ ಆತಂಕಕ್ಕೆ ಒಳಗಾಗುತ್ತಾರೆ.

ಕೋಡಿ ಮಠ ಶ್ರೀಗಳ ಹೇಳಿಕೆ?

ಇತ್ತೀಚಿಗಷ್ಟೆ ಕೊಡಗು ಜಿಲ್ಲೆಗೆ ಧಾವಿಸಿದ್ದ ಅರಸೀಕೆರೆ ತಾಲ್ಲೂಕಿನ ಕೋಡಿ ಮಠದ ಶ್ರೀಗಳು, ಈ ಬಾರಿಯೂ ಕೊಡಗಿನಲ್ಲಿ ಜಲಪ್ರವಾಹವಾಗುತ್ತದೆ. ಸಾಕಷ್ಟು ನಷ್ಟ ಸಂಭವಿಸುತ್ತದೆ ಎಂಬ ಶ್ರೀಗಳ ಹೇಳಿಕೆಯೂ ಸಹಜವಾಗಿ ನದಿ ದಂಡೆಯ ವಾಸಿಗಳ ನಿದ್ದೆಗೆಡಿಸಿದೆ.

ಏಕೆಂದರೆ, ಕಳೆದ ಐದು ವರ್ಷಗಳ ಹಿಂದೆ ಅಂದರೆ ೨೦೧೮ ರಲ್ಲಿ ಸುರಿದ ಆಶ್ಲೇಷಾ ಮಳೆಗೆ ಕೊಡಗಿನ ಪಶ್ಚಿಮ ಘಟ್ಟ ಶ್ರೇಣಿಗಳ ಬೆಟ್ಟ ಗುಡ್ಡಗಳ ರುದ್ರನರ್ತನದಿಂದಾಗಿ ಜಿಲ್ಲೆಯಲ್ಲಿ ವ್ಯಾಪಕವಾದ ಆಸ್ತಿ ಪಾಸ್ತಿ ಹಾಳಾಗಿತ್ತು. ೨೦೧೮ ಆಗಸ್ಟ್ ತಿಂಗಳ ೧೫ ರಿಂದ ೧೮ ರ ವರೆಗೆ, ೨೦೧೯ ರ ಆಗಸ್ಟ್ ತಿಂಗಳ ೭ ರಿಂದ ೯ ರವರೆಗೂ ಹಾರಂಗಿ ಹಾಗೂ ಕಾವೇರಿ ನದಿಗಳು ಅಪಾಯದ ಮಟ್ಟ ಮೀರಿ ಹರಿದ ಹಾರಂಗಿ ನದಿಯ ಸೆಳೆತಕ್ಕೆ ಅಪಾರ ಅಸ್ತಿ - ಪಾಸ್ತಿ, ಜನ ಹಾಗೂ ದನಗಳೂ ಸೇರಿದಂತೆ ಇನ್ನಿತರ ಅಮಾಯಕ ಪ್ರಾಣಿಗಳು ಜೀವ ತೆತ್ತಿದ್ದವು.

೨೦೧೮ ರಲ್ಲಿ ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಗರಿಷ್ಠ ಮಳೆ ಸುರಿದು ಜಲಪ್ರವಾಹ ಸೃಷ್ಟಿಯಾದರೆ, ೨೦೧೯ ರಲ್ಲಿ ತಲಕಾವೇರಿಯ ಬ್ರಹ್ಮಗಿರಿ ಶ್ರೇಣಿಯಲ್ಲಿ ಬೆಟ್ಟಗಳೇ ಕುಸಿದು ನೆಲಸಮ ಮಾಡುವಷ್ಟರ ಮಟ್ಟಿಗೆ ವರುಣ ತನ್ನ ಉಗ್ರ ಪ್ರತಾಪ ತೋರಿಸಿತ್ತು.

ಕುಶಾಲನಗರ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ

ಹಾರಂಗಿ ಜಲಾಶಯದ ಇತಿಹಾಸದಲ್ಲಿಯೇ ಮೊದಲು ಎಂಬAತೆ ಜಲಾಶಯದಿಂದ ಹೊರಗೆ ಹರಿಬಿಟ್ಟ ೮೦ ಸಾವಿರ ಕ್ಯೂಸೆಕ್ಸ್ ಅತ್ಯಂತ ಗರಿಷ್ಠ ಪ್ರಮಾಣದ ನೀರು ನದಿಯಲ್ಲಿ ಹರಿಯಲಾಗದೇ ನದಿ ತೀರದ ತಗ್ಗು ಪ್ರದೇಶಗಳನ್ನು ಸೀಳಿ ಸಾಗಿತ್ತು.

ಅಷ್ಟೇ ಅಲ್ಲ, ಹಾರಂಗಿಯಿAದ ಕೂಡಿಗೆಯವರೆಗೆ ಸರಿ ಸುಮಾರು ೮ ಕಿಮೀ ಕ್ರಮಿಸಿದ ಹಾರಂಗಿ ಪ್ರವಾಹ ಹಳೆಯ ಕೂಡಿಗೆ ಬಳಿಯ ಕಾವೇರಿ ನದಿಗೆ ಮಿಲನವಾಗುವ ರಭಸದಿಂದಾಗಿ ಕಾವೇರಿ ನದಿಯಲ್ಲಿ ಹರಿಯುತ್ತಿದ್ದ ನೀರು ಕುಶಾಲನಗರದ ಮಾದಾಪಟ್ಟಣದವರೆಗೂ ಮತ್ತದೇ ಏಳೆಂಟು ಕಿಮೀ ನಷ್ಟು ಹಿಂದಕ್ಕೆ ಹರಿದು ಗಂಧದಕೋಟೆ, ಬೈಚನಹಳ್ಳಿ, ಕುಶಾಲನಗರದ ಹತ್ತಾರು ಬಡಾವಣೆಗಳೂ ಸೇರಿದಂತೆ ಮುಳ್ಳುಸೋಗೆಯ ತಗ್ಗು ಪ್ರದೇಶದ ಜನವಸತಿ ಪ್ರದೇಶ ಸಂಪೂರ್ಣ ಜಲಾವೃತಗೊಂಡು ನೂರಾರು ಮನೆಗಳು ಕಾವೇರಿ ನದಿಯ ನೀರಿನಿಂದ ಮುಚ್ಚಲ್ಪಟ್ಟು ಅಪಾರ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಹಾನಿಯಾಗಿದ್ದವು.

ಈ ಬಾರಿ ಪುನರ್ವಸು ಮಳೆ ಆಶ್ಲೇಷಾ ಮಳೆಯ ರುದ್ರ ನರ್ತನಕ್ಕಿಂತ ನಾನೇನು ಕಡಿಮೆ ಎಂಬAತೆ ಆರ್ಭಟಿಸಿದಂತೆ ಕಾಣುತ್ತಿದೆ. ಪುನರ್ವಸು ತನ್ನ ಮೊದಲ ಪಾದದಲ್ಲಿ ಆರ್ಭಟಿಸದ ಕಾರಣ ಈ ಹಿಂದಿನ ಮಳೆಯಲ್ಲಿ ಬಂದಿದ್ದ. ಕಾವೇರಿ ನದಿಯ ಪ್ರವಾಹ ಇಳಿಮುಖವಾಗಿತ್ತು. ಆದರೆ ಪುನರ್ವಸು ಮಳೆಯ ಮೂರನೇ ಪಾದ ಜಿಲ್ಲೆಯ ಮಂದಿಯಲ್ಲಿ ನಡುಕ ಮೂಡಿಸುವಂತಿದೆ. ಅಂದರೆ ಜಿಲ್ಲಾದ್ಯಂತ ಉತ್ತಮವಾದ ಮಳೆ ಸುರಿಯುತ್ತಿರುವ ಕಾರಣ ನದಿಗಳು, ಕೊಲ್ಲಿಗಳು ತುಂಬಿ ಹರಿಯುತ್ತಿವೆ. ಕೆರೆ ಕಟ್ಟೆಗಳು ಈಗಾಗಲೇ ಭರ್ತಿಯಾಗಿ ಕಟ್ಟೆ ಒಡೆದಿವೆ.

ಭಯದ ಬದುಕಿಗೆ ಕೊನೆ ಎಂದು ?

ಪ್ರತೀ ವರ್ಷದ ಮಳೆಗಾಲದಲ್ಲಿಯೂ ನದಿ ಪಾತ್ರದ ತಗ್ಗು ಪ್ರದೇಶಗಳ ಮಂದಿಯ ಸಂಕಟಕ್ಕೆ ಮುಕ್ತಿಯೇ ಇಲ್ಲವೇ ಎಂಬ ಪ್ರಶ್ನೆಗೆ ಆಡಳಿತಾರೂಢರು ಉತ್ತರಿಸಬೇಕಿದೆ. ಏಕೆಂದರೆ ಸಾಲ ಸೋಲ ಮಾಡಿ ಕಟ್ಟಿದ ಮನೆಗಳು ಮಳೆಗಾಲದಲ್ಲಿ ಜಲಾವೃತವಾದರೆ ಮನೆ ಮಂದಿಯ ಪರಿಸ್ಥಿತಿ ಏನಾಗಬೇಡ? ಇನ್ನು ವಯೋವೃದ್ದರ ಮಕ್ಕಳ ಗತಿ ಮತ್ತೇನು? ಎಂಬ ಆತಂಕ, ದುಗುಡ ದುಮ್ಮಾನಗಳಲ್ಲಿಯೇ ಮಳೆಗಾಲದ ಬದುಕು ಕಟ್ಟುವ ಮಂದಿಗೆ ಆಳುವವರು ಧ್ವನಿಯಾಗಬೇಕಿದೆ.

ಕುಶಾಲನಗರದ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆಗಳಲ್ಲಿ ಸ್ಥಳೀಯ ನೆರೆ ಸಂತ್ರಸ್ತರ ಕೋರಿಕೆ ಮೇರೆಗೆ ಕಾವೇತಿ ನೀರಾವರಿ ನಿಗಮದ ವತಿಯಿಂದ ಜನವಸತಿಗೆ ನದಿಯ ಪ್ರವಾಹ ಬಾರದಂತೆ ನದಿಗೆ ತಡೆಗೋಡೆ ಕಟ್ಟುತ್ತಿದ್ದಾರೆ. ಆದರೆ ಆ ಕಾಮಗಾರಿ ಸಕಾಲದಲ್ಲಿ ಆರಂಭವಾಗದೇ ಆಮೆ ಗತಿಯಲ್ಲಿ ಸಾಗಿರುವುದು ಹಾಗೂ ಅವೈಜ್ಞಾನಿಕವಾಗಿ ಕೂಡಿದೆ ಎಂಬುದು ಅಲ್ಲಿನ ಜನವಸತಿ ಪ್ರದೇಶದ ನೆರೆ ಸಂತ್ರಸ್ತರ ಅಳಲಾಗಿದೆ. ಈ ಬಾರಿ ಮತ್ತದೇ ಜಲಪ್ರವಾಹ ಸಂಭವಿಸುತ್ತದೆ ಎಂಬ ಭವಿಷ್ಯ ನುಡಿದಿರುವ ಕೋಡಿ ಮಠದ ಶ್ರೀಗಳ ಹೇಳಿಕೆ ಕಾವೇರಿ ಹಾಗೂ ಹಾರಂಗಿ ನದಿಯ ತಗ್ಗು ಪ್ರದೇಶಗಳ ಮಂದಿಯ ನಿದ್ದೆಗೆಡಿಸಿದೆ.ಕೂಡಿಗೆ: ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ತಂಡ ಹಾರಂಗಿ ಸೇರಿದಂತೆ ನದಿ ದಂಡೆಯ ವಿವಿಧೆಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಲೂಕು ವ್ಯಾಪ್ತಿಯ ಕಣಿವೆ, ಹಾರಂಗಿ, ಹೆಬ್ಬಾಲೆ, ಕೂಡಿಗೆ, ಮುಳ್ಳುಸೋಗೆ, ಕುವೆಂಪು ಬಡಾವಣೆ ಸೇರಿದಂತೆ ಕಾವೇರಿ ನದಿ ನೀರು ನುಗ್ಗುವ ವಿವಿಧ ತಗ್ಗು ಪ್ರದೇಶದ ಸ್ಥಳಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸ್ಥಳೀಯರಿಗೆ ತಿಳುವಳಿಕೆ ನೀಡಿದರು. ಅಲ್ಲದೇ ಹಾರಂಗಿ ಅಣೆಕಟ್ಟೆಗೆ ಭೇಟಿ ನೀಡಿ ಮುಂಭಾಗದ ಕಿರು ಸೇತುವೆಯ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆಯ ಮೇಲೆ ಯಾರು ಸಂಚರಿಸಿದAತೆ ನೋಡಿಕೊಳ್ಳಲು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದರು.ಸಿದ್ದಾಪುರ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯು ಎರಡನೇ ಬಾರಿಗೆ ಮೈದುಂಬಿ ಹರಿಯುತ್ತಿದೆ. ಕಾವೇರಿ ನದಿ ತೀರದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶ ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳಿಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಹಾಗೂ ಅಮ್ಮತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದರು. ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಇದೀಗ ಮತ್ತೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಕರಡಿಗೋಡು ಭಾಗದ ತಗ್ಗು ಪ್ರದೇಶಗಳ ಮನೆಗಳ ಬಳಿ ಜಲಾವೃತಗೊಳ್ಳುವ ಸಾಧ್ಯತೆ ಕಂಡು ಬಂದಿದೆ. ಈ ಹಿಂದೆ ೨೦೧೯ರಲ್ಲಿ ಪ್ರವಾಹಕ್ಕೆ ಸಿಲುಕಿ ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳ ನದಿ ತೀರದ ಹಲವಾರು ಮನೆಗಳು ನೆಲಸಮಗೊಂಡಿದ್ದವು. ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ಆಶ್ರಯ ಪಡೆಯಲು ಈಗಾಗಲೇ ಸಮುದಾಯ ಭವನ ಸಭಾಂಗಣಗಳು ಹಾಗೂ ಶಾಲಾ ಕೊಠಡಿಗಳನ್ನು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ರಾಮಚಂದ್ರ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರ ಗುಂಡಿ, ಬೆಟ್ಟದ ಕಾಡು ಭಾಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಇತ್ತೀಚೆಗೆ ಜಿಲ್ಲಾ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ನದಿ ತೀರದ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲಾಗಿದೆ. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ತು ಆಶ್ರಯ ಪಡೆಯಲು ನದಿ ತೀರದ ನಿವಾಸಿಗಳಿಗೆ ಸಭಾಂಗಣ ಹಾಗೂ ಸಮುದಾಯ ಭವನವನ್ನು ಗುರುತಿಸಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸನ್ನು ಕೂಡ ಜಾರಿ ಮಾಡಲಾಗಿದೆ.

ಸಿದ್ದಾಪುರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಬಾಡಗ ಕೆರೆಯಿಂದ ಉಕ್ಕಿ ಹರಿಯುವ ತೋಡಿಗೆ ಮುಖ್ಯರಸ್ತೆಯ ತಿರುವಿನಲ್ಲಿ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್ ಡ್ಯಾಂ ಕುಸಿಯುವ ಸ್ಥಿತಿಯಲ್ಲಿದ್ದು ಇದರಿಂದಾಗಿ ಗ್ರಾಮಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಈ ರಸ್ತೆಯಲ್ಲಿ ಶಾಲಾ ವಾಹನಗಳು ಕೂಲಿ ಕಾರ್ಮಿಕರ ವಾಹನಗಳು ಹೆಚ್ಚಾಗಿ ಓಡಾಡುತ್ತಿದ್ದು, ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಸುಂಟಿಕೊಪ್ಪ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದ ಬಹುತೇಕ ಕಾಫಿ ತೋಟಗಳಲ್ಲಿ ಮರಗಳು ಧರೆಗೆ ಉರುಳಿವೆ. ಇದರಿಂದ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಬಹುತೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಏಳನೇ ಹೊಸಕೋಟೆಯಿಂದ ಮಂಜಿಕೆರೆಗೆ ತೆರಳುವ ರಸ್ತೆಯಲ್ಲಿ ಭಾರೀ ಗಾತ್ರದ ಮರ ಬಿದ್ದಿದೆ.ವೀರಾಜಪೇಟೆ: ವೀರಾಜಪೇಟೆ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮೈತಾಡಿ ಗ್ರಾಮದ ನಿವಾಸಿ ಒಕ್ಕಲಿಗರ ರಾಮಯ್ಯ ಅವರ ಪುತ್ರ ತಿಮ್ಮಯ್ಯ ಅವರ ವಾಸದ ಮನೆಯ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಯಾವುದೇ ಜೀವಹಾನಿಯಾಗಿರುವುದಿಲ್ಲ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸುಧೀರ್ ಲಮಾಣಿ, ಕಂದಾಯ ಪರಿವೀಕ್ಷಕ ಹರೀಶ್ ಎಂ.ಎಲ್., ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೂಡಿಗೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಹಾರಂಗಿ ಕಾವೇರಿ ನದಿ ಸಂಗಮದ ಸ್ಧಳದಿಂದ ಮುಂದೆ ಹರಿಯುವ ಕಾವೇರಿ ನದಿ ದಂಡೆಯ ವ್ಯಾಪ್ತಿಯ ಗದ್ದೆಗಳು ಜಲಾವೃತಗೊಂಡಿವೆ.

ಕೂಡಿಗೆ- ಕಣಿವೆ ಮಧ್ಯಭಾಗದ ತಗ್ಗು ಪ್ರದೇಶದ ಗದ್ದೆಗಳಿಗೆ ನೀರು ನುಗ್ಗಿದೆ. ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ಹರಿಸಿದ ಹಿನ್ನೆಲೆಯಲ್ಲಿ ಹಾರಂಗಿ ನದಿ ದಂಡೆಯ ತಗ್ಗು ಪ್ರದೇಶಗಳಾದ ಹುದುಗೂರು, ಮದಲಾಪುರ ಗ್ರಾಮಗಳ ಕೆಲ ಪ್ರದೇಶದಲ್ಲಿ ನಾಟಿ ಕಾರ್ಯಕ್ಕೆ ಸಿದ್ಧತೆ ಗೊಂಡಿದ ಗದ್ದೆಗಳು ಜಲಾವೃತಗೊಂಡಿವೆ.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವತ್ತೂರು ಗ್ರಾಮದ ಲಕ್ಷಿö್ಮ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿತಗೊಂಡಿದೆ.

ಸ್ಥಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಲೆಕ್ಕಾಧಿಕಾರಿ ಗುರುದರ್ಶನ್, ಗ್ರಾಮ ಪಂಚಾಯತಿ ಸದಸ್ಯೆ ಫಿಲೋಮಿನ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. (೪ನೇ ಪುಟಕ್ಕೆ)