ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ-ಗಾಳಿಯಿಂದಾಗಿ ಬಹುತೇಕ ಜಿಲ್ಲೆಯಾದ್ಯಂತ ವಿದ್ಯುತ್ ಸಮಸ್ಯೆ ಎದುರಾಗಿದೆ. ಮಳೆ-ಗಾಳಿಯಿಂದಾಗಿ ಜಿಲ್ಲೆಯ ೧೧ ಉಪಕೇಂದ್ರಗಳ ವ್ಯಾಪ್ತಿಯಲ್ಲಿಯೂ, ಕೆಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಮರಬಿದ್ದು ಹಾನಿಗೀಡಾಗಿರುವ ಪ್ರಕರಣಗಳು ಸೇರಿದಂತೆ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದು, ತಂತಿಗಳು ತುಂಡರಿಸಿರುವದರಿAದಲೂ ವಿದ್ಯುತ್ ವ್ಯತ್ಯಯವಾಗುತ್ತಿದೆ. ಕಳೆದ ಏಪ್ರಿಲ್ ತಿಂಗಳಿನಿAದ ಈತನಕ ೧೪೯೬ ಕಂಬಗಳು ಹಾನಿಗೀಡಾಗಿವೆ. ಶುಕ್ರವಾರದಿಂದ ಈಚೆಗೆ ಸುಮಾರು ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ೧೩೫ ಕಂಬಗಳು ಜಖಂಗೊAಡಿವೆ. ಸೋಮವಾರದಂದು ಒಂದೇ ದಿನ ೮೬ ಕಂಬಗಳು ಹಾನಿಗೀಡಾಗಿದ್ದು, ಇದೀಗ ಹಾನಿಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿರುವುದಾಗಿ ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಗಮ ಅಧ್ಯಕ್ಷರ ಪರಿಶೀಲನೆ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾಗಿರುವ ರಮೇಶ್ ಬಂಡಿ ಸಿದ್ದೇಗೌಡ ಅವರು ಭಾನುವಾರ ಹಾಗೂ ಸೋಮವಾರದಂದು ಜಿಲ್ಲೆಯಲ್ಲಿ ಹಾಜರಿದ್ದು, ಮಡಿಕೇರಿಯ ಸುತ್ತಮುತ್ತಲು ಹಾಗೂ ಕುಶಾಲನಗರ ವಿಭಾಗದಲ್ಲಿ ಆಗಿರುವ ಹಾನಿಯನ್ನು ಪರಿಶೀಲಿಸಿದರು. ಸೆಸ್ಕ್ನ ಕಾರ್ಯಪಾಲಕ ಅಭಿಯಂತರರಾದ ಅನಿತಾ ಬಾಯಿ, ಸಹಾಯಕ ಅಭಿಯಂತರ ದಿಲೀಪ್, ಇತರ ಸಿಬ್ಬಂದಿಗಳು ಹಾನಿಯ ಬಗ್ಗೆ ವಿವರ ನೀಡಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ೨೩೫ ಸಿಬ್ಬಂದಿಗಳಿದ್ದು, ಇದೀಗ ಮೈಸೂರು, ಹಾಸನ, ಹುಣಸೂರು ವಿಭಾಗದಿಂದ ಹೆಚ್ಚುವರಿಯಾಗಿ ೪೦ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ನಿರ್ವಹಣೆ ಕಾರ್ಯ ನಡೆಯುತ್ತಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿನ
(ಮೊದಲ ಪುಟದಿಂದ) ಹಾನಿಯನ್ನು ಸರಿಪಡಿಸಲಾಗಿದೆ. ಗ್ರಾಮೀಣ ಭಾಗಗಳು ಸೇರಿದಂತೆ ಕಂಬಗಳು ಜಖಂಗೊAಡು ಸಮಸ್ಯೆಯಾಗಿರುವ ಕಡೆಗಳಲ್ಲಿ ಇದೀಗ ನಿರ್ವಹಣಾ ಕೆಲಸ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ-ಗಾಳಿಯಿಂದಾಗಿ ಇಲಾಖೆಗೆ ಭಾರೀ ನಷ್ಟ ಸಂಭವಿಸಿದೆ. ಅಧಿಕಾರಿಗಳ ಸಭೆ
ಚಾ.ವಿ.ಸ.ನಿ.ನಿ ಕಂಪೆನಿಯ ಮಂಡಳಿ ಅಧ್ಯಕ್ಷ ಎ.ಬಿ. ರಮೇಶ್ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕಿ ಶೀಲಾ, ಕಂಪೆನಿಯ ತಾಂತ್ರಿಕ ನಿರ್ದೇಶಕ ಮುನಿಗೋಪಾಲ್ ರಾಜ್, ಚಾಮರಾಜನಗರ ಕೊಡಗು ವೃತ್ತದ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್ ಹಾಗೂ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅನಿತಾ ಎಸ್. ಬಾಯಿ ಅವರು ಮಡಿಕೇರಿ ವಿಭಾಗದಲ್ಲಿ ಮಳೆಗಾಲದ ತುರ್ತು ದುರಸ್ತಿ ಕಾರ್ಯ ಹಾಗೂ ವಿಭಾಗದ ವಿವಿಧ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯನ್ನು ಮಡಿಕೇರಿ ಉಪ ವಿಭಾಗದ ಅಧಿಕಾರಿಗಳ ಮಟ್ಟದಲ್ಲಿ ನಡೆಸಿದರು. ಮಡಿಕೇರಿ ವಿಭಾಗೀಯ ಉಗ್ರಾಣದಲ್ಲಿ ಲಭ್ಯವಿರುವ ನಿರ್ವಹಣಾ ಸಾಮಗ್ರಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಮಡಿಕೇರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ವಹಣಾ ಸಿಬ್ಬಂದಿಗಳು ಹಾಗೂ ಇತರ ವಿಭಾಗಗಳಿಂದ ನಿಯೋಜಿಸಿರುವ ನಿರ್ವಹಣಾ ಸಿಬ್ಬಂದಿಗಳೊAದಿಗೆ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ ಸಿಬ್ಬಂದಿಗಳ ಕುಂದು ಕೊರತೆಯ ಬಗ್ಗೆ ಅಧಿಕಾರಿಗಳು ವಿಚಾರಿಸಿದರು. ಕಂಪೆನಿ ಉಪಾಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ವಹಣಾ ಸಿಬ್ಬಂದಿಗಳಿಗೆ ಸುರಕ್ಷತಾ ಕಿಟ್ಟುಗಳನ್ನು ವಿತರಿಸಲಾಯಿತು. ಮಡಿಕೇರಿ ವಿಭಾಗಕ್ಕೆ ನೂತನವಾಗಿ ಆಗಮಿಸಿರುವ ಅಧಿಕಾರಿಗಳನ್ನು ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ನಂತರ ಹಿರಿಯ ಅಧಿಕಾರಿಗಳು ಮಳೆಗಾಳಿಗೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.