ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದು ಮತ್ತೂ ಮುಂದುವರಿದಿದೆ. ಗಾಳಿ - ಮಳೆಯಿಂದಾಗಿ ಇದೀಗ ಹಲವೆಡೆಗಳಲ್ಲಿ ಅನಾಹುತಗಳು ಹೆಚ್ಚಾಗುತ್ತಿವೆ. ಕಾವೇರಿ, ಲಕ್ಷö್ಮಣ ತೀರ್ಥ ಸೇರಿದಂತೆ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟದಲ್ಲೇ ಇವೆ. ಕಳೆದ ರಾತ್ರಿ ಕೊಯನಾಡು ಶಾಲೆಯ ಹಿಂಭಾಗದ ಬರೆ ಕುಸಿತವಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಶಾಲಾ ಕಟ್ಟಡಕ್ಕೂ ಹಾನಿಯಾಗಿದೆ. ಸದ್ಯ ಶಾಲೆಗಳಿಗೆ ರಜೆ ಇರುವುದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ, ಕಟ್ಟಡಕ್ಕೆ ಹಾನಿಯಾಗಿದ್ದು, ಇಂದು ಮಡಿಕೇರಿಯ ಅಗ್ನಿಶಾಮಕ ಹಾಗೂ ತುರ್ತು ಸೇವಾ ವಿಭಾಗದ ಸಿಬ್ಬಂದಿಗಳು ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಸಾಮಗ್ರಿಗಳ ರಕ್ಷಣಾ ಕಾರ್ಯ ನಡೆಸಿದ್ದಾರೆ.

ಜಿಲ್ಲೆಯಾದ್ಯಂತ ವ್ಯಾಪಕ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಹಲವೆಡೆಗಳಲ್ಲಿ ಮರ ಬೀಳುತ್ತಿರುವುದು, ಮನೆಗಳು ಜಖಂಗೊಳ್ಳುತ್ತಿರುವುದು, ಬರೆ ಕುಸಿತದಂತಹ ಘಟನೆಗಳು ವರದಿಯಾಗುತ್ತಲೇ ಇವೆ. ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದ್ದು, ನೂತನ ಉದ್ಯಾನವನವೂ ಜಲಾವೃತಗೊಂಡಿದೆ. ನಾಪೋಕ್ಲು , ಬೊಳಿಬಾಣೆ ರಸ್ತೆಯಲ್ಲೂ ನೀರು ಆವರಿಸಿದ್ದು, ಅಪಾಯದ ಸನ್ನಿವೇಶ ಮುಂದುವರಿದಿದೆ. ಕಾವೇರಿ ಹರಿಯುವ ಮಾರ್ಗದುದ್ದಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ನಾಪೋಕ್ಲು, ಬೇತ್ರಿ, ಕೊಂಡAಗೇರಿ, ಕಣಿವೆ ಕುಶಾಲನಗರ ಸೇತುವೆ ವ್ಯಾಪ್ತಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ಹಾರಂಗಿ ವ್ಯಾಪ್ತಿಯಲ್ಲೂ ಪ್ರವಾಹದ ಆತಂಕ ಇದೆ. ದಕ್ಷಿಣ ಕೊಡಗಿನಲ್ಲಿ ಲಕ್ಷö್ಮಣತೀರ್ಥ ನದಿ ತೀರದಲ್ಲೂ ನೀರು ಅಪಾಯದ ಹಂತ ತಲುಪುತ್ತಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಹಲವಾರು ಗ್ರಾಮಗಳು ಕಾರ್ಗತ್ತಲಿನಲ್ಲಿ ಮುಳುಗಿವೆ. ಕೆಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದಲೂ ವಿದ್ಯುತ್ ಇಲ್ಲದೆ ಜನರು ಪರಿತಪಿಸುವಂತಾಗಿದೆ. ಮಳೆ - ಗಾಳಿಯೊಂದಿಗೆ ಚಳಿಯ ವಾತಾವರಣವೂ, ಎದುರಾಗಿದ್ದು, ಜನತೆ ಹೈರಾಣಾಗಿದ್ದಾರೆ. ಮಂಗಳವಾರದAದೂ ಜಿಲ್ಲೆಯಲ್ಲಿ ಶಾಲಾ - ಕಾಲೇಜುಗಳು ಮುಚ್ಚಲ್ಪಟ್ಟಿದ್ದವು.

ಸರಾಸರಿ ೩.೨೧ ಇಂಚು

ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩.೨೧ ಇಂಚು ಸರಾಸರಿ ಮಳೆ ಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೪.೨೫ ಇಂಚು, ವೀರಾಜಪೇಟೆ ೨.೨೫, ಪೊನ್ನಂಪೇಟೆ ೨.೬೫, ಸೋಮವಾರಪೇಟೆ ೪.೭೮ ಹಾಗೂ ಕುಶಾಲನಗರ ತಾಲೂಕಿನಲ್ಲಿ ೨.೧೪ ಇಂಚುಗಳಷ್ಟು ಸರಾಸರಿ ಮಳೆ ಸುರಿದಿದೆ.

ಶಾಂತಳ್ಳಿಗೆ ೯.೨೦ ಇಂಚು

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ ೯.೨೦ ಇಂಚುಗಳಷ್ಟು ಭಾರೀ ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲೂ ೬.೮೮ ಇಂಚು ಮಳೆ ದಾಖಲಾಗಿದೆ. ಉಳಿದಂತೆ ಮಡಿಕೇರಿ ೩.೮೮, ನಾಪೋಕ್ಲು ೨.೮೦, ಸಂಪಾಜೆ ೩.೪೬, ವೀರಾಜಪೇಟೆ ೨.೦೮, ಅಮ್ಮತ್ತಿ ಹೋಬಳಿಯಲ್ಲಿ ೨.೪೨ ಇಂಚು ಮಳೆಯಾಗಿದೆ. ಹುದಿಕೇರಿ ೩.೬೩, ಶ್ರೀಮಂಗಲ ೨.೯೩, ಪೊನ್ನಂಪೇಟೆ ೨.೪೦, ಬಾಳೆಲೆಯಲ್ಲಿ ೧.೬೪ ಇಂಚು ಮಳೆ ಸುರಿದಿದೆ.

ಸೋಮವಾರಪೇಟೆ ಕಸಬಾ ೩.೮೪, ಶನಿವಾರಸಂತೆ ೩.೧೨, ಕೊಡ್ಲಿಪೇಟೆ ೩, ಸುಂಟಿಕೊಪ್ಪ ೨.೭೬, ಕುಶಾಲನಗರ ಹೋಬಳಿಯಲ್ಲಿ ೧.೫೬ ಇಂಚು ಮಳೆ ದಾಖಲಾಗಿದೆ. ಹಾರಂಗಿ ಜಲಾಶಯಕ್ಕೆ ೧೨,೮೨೭ ಕ್ಯೂಸೆಕ್ಸ್ನಷ್ಟು ನೀರಿನ ಒಳಹರಿವು ಇದ್ದು, ನದಿಗೆ ೧೮,೭೫೦ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.ಸುಂಟಿಕೊಪ್ಪ : ಎಮ್ಮೆಗುಂಡಿ ನಿವಾಸಿ ದೇವರಾಜು ಎಂಬವರ ಮನೆಯ ಮೇಲೆ ರಾತ್ರಿ ಸುರಿದ ಮಳೆ ಗಾಳಿಗೆ ಭಾರೀ ಗಾತ್ರದ ಮರವೊಂದು ಬಿದ್ದಿದ್ದು, ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ, ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ಕುಟ್ಟಪ್ಪ ಸ್ಥಳಕ್ಕೆ ತೆರಳಿ ಮನೆಯ ಮೇಲೆ ಬಿದ್ದಿದ್ದ ಮರವನ್ನು ತೆರೆವುಗೊಳಿಸಿದ್ದಾರೆ.

ಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯ ಹದಿಮೂರನೇ ಮೈಲು ಬಳಿ ಅಂತರ್‌ರಾಜ್ಯ ಹೆದ್ದಾರಿಗೆ ಬರೆ ಹಾಗೂ ಬೃಹತ್ ಗಾತ್ರದ ಬಿದಿರಿನ ಹಿಂಡು ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.ಈ ಭಾಗದಲ್ಲಿ ಕೆಲ ದಿನಗಳಿಂದ ಬಿರುಗಾಳಿ ಮಳೆಯಾಗುತ್ತಿದ್ದು, ಪರಿಣಾಮ ಭಾಗಮಂಡಲ- ಕರಿಕೆ ಮೂಲಕ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿಯ ಹದಿಮೂರನೇ ಮೈಲು ಬಳಿಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯ ಹದಿಮೂರನೇ ಮೈಲು ಬಳಿ ಅಂತರ್‌ರಾಜ್ಯ ಹೆದ್ದಾರಿಗೆ ಬರೆ ಹಾಗೂ ಬೃಹತ್ ಗಾತ್ರದ ಬಿದಿರಿನ ಹಿಂಡು ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.ಈ ಭಾಗದಲ್ಲಿ ಕೆಲ ದಿನಗಳಿಂದ ಬಿರುಗಾಳಿ ಮಳೆಯಾಗುತ್ತಿದ್ದು, ಪರಿಣಾಮ ಭಾಗಮಂಡಲ- ಕರಿಕೆ ಮೂಲಕ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿಯ ಹದಿಮೂರನೇ ಮೈಲು ಬಳಿ ಬರೆ ಹಾಗೂ ಬಿದಿರಿನ ಹಿಂಡು ಬುಡಸಮೇತ ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಸ್ಥಳೀಯರ ಸಹಕಾರದಿಂದ ವಾಹನಗಳು ತೆರಳಲು ಅನುವು ಮಾಡಿಕೊಡಲಾಯಿತು. ಬರೆ ಹಾಗೂ ಬಿದಿರಿನ ಹಿಂಡು ಬುಡಸಮೇತ ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಸ್ಥಳೀಯರ ಸಹಕಾರದಿಂದ ವಾಹನಗಳು ತೆರಳಲು ಅನುವು ಮಾಡಿಕೊಡಲಾಯಿತು.ಭಾಗಮಂಡಲ: ಭಾಗಮಂಡಲ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು ಕಾವೇರಿ ನದಿ ತುಂಬಿ ಹರಿಯುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಭಾಗಮಂಡಲ - ನಾಪೋಕ್ಲು ರಸ್ತೆ ಜಲಾವೃತವಾಗಿತ್ತು. ಮಧ್ಯಾಹ್ನ ನಂತರ ನೀರಿನ ಪ್ರಮಾಣ ಇಳಿಮುಖಗೊಂಡಿದೆ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ತ್ರಿವೇಣಿ ಸಂಗಮದ ಉದ್ಯಾನ ಜಲಾವೃತವಾಗಿದೆ. ಕಳೆದ ೨೪ ಗಂಟೆಯಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ ೧೭೨ ಮಿಲಿಮೀಟರ್ ಮಳೆಯಾಗಿದ್ದರೆ ತಲಕಾವೇರಿಗೆ ೨೨೧ ಮಿಲಿ ಮೀಟರ್ ಮಳೆ ಸುರಿದಿದೆ. ಬೆಟ್ಟ ಶ್ರೇಣಿಗಳಲ್ಲಿ ಬಿರುಸಿನ ಮಳೆಯಾಗುತ್ತಿದ್ದು ಕಾವೇರಿ ನದಿಯಲ್ಲಿನ ಹೂಳನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದರಿಂದ ನೀರಿನ ಏರಿಕೆ ಪ್ರಮಾಣ ಕಡಿಮೆಯಾಗಿದೆ. ಮೇಲ್ ಸೇತುವೆ ನಿರ್ಮಾಣದಿಂದಾಗಿ ವಾಹನ ಸಂಚಾರಕ್ಕೆ ಜನಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಮೇಲ್ ಸೇತುವೆಯ ಪಿಲ್ಲರ್ ಗಳು ಜಲಾವೃತವಾಗಿವೆ.

ಈ ವರ್ಷ ಜನವರಿಯಿಂದ ಇಲ್ಲಿವರೆಗೆ ೨೫೫೩.೮ ಮಿ. ಮೀ. ಮಳೆಯಾಗಿದ್ದಾರೆ, ಕಳೆದ ವರ್ಷ ಇದೇ ಅವಧಿಗೆ ೧೫೧೧ ಮಿ.ಮೀ. ಮಳೆ ಸುರಿದಿತ್ತು. ವಿಪರೀತ ಗಾಳಿ ಮಳೆಯಿಂದಾಗಿ ರಸ್ತೆಯಲ್ಲಿ ಅಲ್ಲಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದ್ದು ತಾವೂರು ಗ್ರಾಮದ ಜ್ಯೋತಿ ಎಂಬವರ ಮನೆಗೆ ಹಾನಿಯಾಗಿದೆ. ಮನೆಯ ಹಂಚುಗಳು ಹಾರಿ ಹೋಗಿವೆ ಗೋಡೆ ಕುಸಿದಿದೆ.

ಕಳೆದ ಮೂರು ದಿನಗಳಿಂದ ಭಾಗಮಂಡಲ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಕತ್ತಲಾವರಿಸಿದೆ. ಈ ಬಗ್ಗೆ ಸ್ಥಳೀಯರು ಆಕೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬೇಸಿಗೆಯಿಂದಲೇ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಮಳೆಗಾಲ ಪ್ರಾರಂಭವಾದ ನಂತರ ಬಹುತೇಕ ದಿನಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ತೊಂದರೆ ಆಗಿದೆ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಕಾಲದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಂತಸ ಗೊಂಡಿದ್ದಾರೆ. ಭತ್ತದ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿದೆ. ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರು ರಭಸದಿಂದ ಹರಿಯುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಸೆಲ್ಫಿ ತೆಗೆಯುವ ಯುವಕರ ದಂಡು ಕಂಡು ಬರುತ್ತಿದೆ. ಮದ್ಯದ ಅಮಲಿನಲ್ಲಿ ಸೆಲ್ಫಿ ತೆಗೆಯುತ್ತ ಕುಣಿದಾಡುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ .ಈ ಬಗ್ಗೆ ಜಾಗೃತರಾಗಿರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ನಡಿಕೇರಿಯಲ್ಲಿ ತಾ. ೧೬ ರಂದು ೨.೪೫ ಇಂಚು ಒಟ್ಟು ೪೦.೯೩, ಪೊರಾಡು ಗ್ರಾಮದಲ್ಲಿ ೩.೮೮ ಒಟ್ಟು ೫೮.೧೫,ಬಲ್ಯಮುಂಡೂರು ೨.೦೪ ಒಟ್ಟು ೩೪.೨೯ ತೆರಾಲು ೫.೪೩, ಒಟ್ಟು ೭೩.೯೨,ಕೆ. ಬಾಡಗ ೨.೧೬ ಒಟ್ಟು ೩೦.೪೩, ಕೋಣಗೇರಿ ೨.೬೦, ಬಿರುನಾಣಿ ಪುತ್ತು ಭಗವತಿ ದೇವಸ್ಥಾನ ೪.೩೦ ಒಟ್ಟು ೭೩.೩೩ ಇಂಚು ಭಾರಿ ಮಳೆ ಸುರಿದಿದೆ. ಈ ವ್ಯಾಪ್ತಿಯಲ್ಲಿ ಕಳೆದ ೪೮ ಗಂಟೆಗಳಿAದ ವಿದ್ಯುತ್ ಕಡಿತವಾಗಿದೆ, ಹಲವೆಡೆ ಮರ ಬಿದ್ದು ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಇಲಾಖೆ ವತಿಯಿಂದ ಮರು ಸಂಪರ್ಕಗೊಳಿಸಲು ಸಮಾರೋಪಾದಿ ಕೆಲಸ ನಡೆಯುತ್ತಿದೆ. ಶ್ರೀಮಂಗಲದಿAದ ಬಿರುನಾಣಿಗೆ ಸಂಪರ್ಕಿಸುವ ೧೧ಕೆ ವಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ಹಾನಿಯಾಗಿದೆ. ಪೊನ್ನಂಪೇಟೆ -ಹುದಿಕೇರಿ ನಡುವಿನ ೧೧ ಕೆ ವಿ ವಿದ್ಯುತ್ ಮಾರ್ಗದ ಮೇಲೆ ಮರಬಿದ್ದು ಹಾನಿಯಾಗಿದೆ.

ಕುಶಾಲನಗರ: ಕುಶಾಲನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ಕಾವೇರಿ ತುಂಬಿ ಹರಿಯುತ್ತಿದ್ದು ಅಪಾಯದ ಅಂಚು ಮೀರಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾವೇರಿ ನದಿ ಪ್ರವಾಹದ ಮಟ್ಟಕ್ಕೆ ಹರಿಯುತ್ತಿದ್ದು, ನದಿಯ ಎರಡು ಭಾಗಗಳ ತಗ್ಗು ಪ್ರದೇಶಗಳ ಹೊಲ ಗದ್ದೆಗಳು ನೀರಿನಿಂದ ಆವೃತಗೊಂಡಿರುವ ದೃಶ್ಯ ಗೋಚರಿಸಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ನದಿಯಲ್ಲಿ ೭ ಅಡಿಗಳಷ್ಟು ನೀರು ಏರಿಕೆಯಾಗಿದ್ದು, ನದಿ ತಟಗಳ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಂದರ್ಭ ಕಾವೇರಿ ನದಿ ನೀರಿನ ಹರಿವಿಗೆ ಅಡ್ಡಿಯಾಗಿ ಕಾವೇರಿ ನದಿ ತಟದ ತಗ್ಗು ಪ್ರದೇಶದ ಹೊಲಗಳಿಗೆ ಗದ್ದೆಗಳಿಗೆ ನೀರು ನುಗ್ಗಿ ಬಹುತೇಕ ಜಲಾವೃತಗೊಂಡಿರುವುದು ಕಂಡು ಬಂದಿದೆ.

ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದ ಕೋಳಿಮಾಡು ಉತ್ತಪ್ಪ ಎಂಬವರ ವಾಸದ ಮನೆಯ ಹೆÀಂಚುಗಳು ಗಾಳಿ ಮಳೆಗೆ ಹಾರಿ ಹೋಗಿವೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ನಡಿಕೇರಿಯಲ್ಲಿ ತಾ. ೧೬ ರಂದು ೨.೪೫ ಇಂಚು ಒಟ್ಟು ೪೦.೯೩, ಪೊರಾಡು ಗ್ರಾಮದಲ್ಲಿ ೩.೮೮ ಒಟ್ಟು ೫೮.೧೫,ಬಲ್ಯಮುಂಡೂರು ೨.೦೪ ಒಟ್ಟು ೩೪.೨೯ ತೆರಾಲು ೫.೪೩, ಒಟ್ಟು ೭೩.೯೨,ಕೆ. ಬಾಡಗ ೨.೧೬ ಒಟ್ಟು ೩೦.೪೩, ಕೋಣಗೇರಿ ೨.೬೦, ಬಿರುನಾಣಿ ಪುತ್ತು ಭಗವತಿ ದೇವಸ್ಥಾನ ೪.೩೦ ಒಟ್ಟು ೭೩.೩೩ ಇಂಚು ಭಾರಿ ಮಳೆ ಸುರಿದಿದೆ. ಈ ವ್ಯಾಪ್ತಿಯಲ್ಲಿ ಕಳೆದ ೪೮ ಗಂಟೆಗಳಿAದ ವಿದ್ಯುತ್ ಕಡಿತವಾಗಿದೆ, ಹಲವೆಡೆ ಮರ ಬಿದ್ದು ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಇಲಾಖೆ ವತಿಯಿಂದ ಮರು ಸಂಪರ್ಕಗೊಳಿಸಲು ಸಮಾರೋಪಾದಿ ಕೆಲಸ ನಡೆಯುತ್ತಿದೆ. ಶ್ರೀಮಂಗಲದಿAದ ಬಿರುನಾಣಿಗೆ ಸಂಪರ್ಕಿಸುವ ೧೧ಕೆ ವಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ಹಾನಿಯಾಗಿದೆ. ಪೊನ್ನಂಪೇಟೆ -ಹುದಿಕೇರಿ ನಡುವಿನ ೧೧ ಕೆ ವಿ ವಿದ್ಯುತ್ ಮಾರ್ಗದ ಮೇಲೆ ಮರಬಿದ್ದು ಹಾನಿಯಾಗಿದೆ.

ಪೊನ್ನಂಪೇಟೆ: ದಕ್ಷಿಣ ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನದಿ, ತೋಡು, ತೊರೆ ತುಂಬಿ ಹರಿಯುತ್ತಿದ್ದು, ಕೆರೆ,ರಸ್ತೆ, ಗದ್ದೆಗಳು ಜಲಾವೃತಗೊಂಡಿವೆ. ಕಳೆದ ಮೂರು ದಿನಗಳಿಂದ ಎಡೆ ಬಿಡದೇ ಸುರಿಯುತ್ತಿರುವ ಮಳೆಗೆ ಲಕ್ಷö್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ನಿಟ್ಟೂರು-ಕಾರ್ಮಾಡು ಹಳೆ ಸೇತುವೆ ಮುಳುಗಡೆಯಾಗಿದೆ.

ನಿಟ್ಟೂರು ಕಾರ್ಮಾಡು ರಸ್ತೆಯ ಎರಡು ಕಡೆ ಗದ್ದೆಗಳು ಜಲಾವೃತವಾಗಿದ್ದು, ಸಾಗರದಂತೆ ಗೋಚರಿಸುತ್ತಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಕಳೆದ ೨೪ ಗಂಟೆ ಅವಧಿಯಲ್ಲಿ ಬಿರುನಾಣಿ ಪುತ್ತು ಭಗವತಿ ದೇವಸ್ಥಾನ ವ್ಯಾಪ್ತಿಯಲ್ಲಿ ೫ ಇಂಚು, ಬಿ. ಶೆಟ್ಟಿಗೇರಿಯಲ್ಲಿ ೪.೧೦ ಇಂಚು ಮಳೆಯಾಗಿದೆ. ಮಳೆ ಇದೇ ರೀತಿ ಮುಂದುವರೆದಲ್ಲಿ ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಐಗೂರು: ಐಗೂರು ವ್ಯಾಪ್ತಿಯಲ್ಲಿ ಪುನರ್ವಸು ಮಳೆ ಬಿರುಸು ಪಡೆದುಕೊಂಡಿದೆ. ನಿರಂತರ ಮಳೆಯಿಂದ ಹಳ್ಳ ತೋಡುಗಳು ತುಂಬಿ ಚೋರನ ಹೊಳೆಯ ಕಡೆ ಹರಿದು ಚೋರನ ಹೊಳೆಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಐಗೂರು, ಕಾಜೂರು, ಎಡವಾರೆ ಮತ್ತು ಹೊಸತೋಟ ಭಾಗಗಳಲ್ಲಿ ವಿದ್ಯುತ್ ಸರಬರಾಜು ಇಲ್ಲದೆ ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಗಡಿಭಾಗದ ದುರ್ಗಾನಗರದಲ್ಲಿ ಮಳೆಯ ರಭಸಕ್ಕೆ ಬರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.ಸAಪಾಜೆ : ಸಂಪಾಜೆ ಸಮೀಪದ ಕೊಯನಾಡು ಸರ್ಕಾರಿ ಶಾಲೆ ಮೇಲೆ ಬರೆ ಕುಸಿದು ಕಟ್ಟಡ ಸೇರಿದಂತೆ ಪೀಠೋಪಕರಣಗಳು, ಶಾಲಾ ಪರಿಕರಗಳು ಹಾನಿಯಾಗಿವೆ.

ಈ ಹಿಂದೆ ಹಲವು ಬಾರಿ ಇದೆ ಶಾಲೆಯ ಕಟ್ಟಡದ ಮೇಲೆ ಬರೆ ಕುಸಿದಿದ್ದು, ಈ ಬಾರಿಯೂ ಭಾರಿ ಮಳೆಗೆ ಘಟನೆ ಮರುಕಳಿಸಿದೆ. ಸ್ಥಳಕ್ಕೆ ಸಂಬAಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಗ್ನಿಶಾಮಕ ದಳ, ಶಾಲೆಯ ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರು, ಪೋಷಕ ವೃಂದದವರು, ಗ್ರಾ.ಪಂ. ಸದಸ್ಯರು ಪಾಲ್ಗೊಂಡು ಹಾನಿಗೊಂಡ ಕೊಠಡಿಯಿಂದ ಪುಸ್ತಕ ಸಾಮಾಗ್ರಿ ಹಾಗೂ ಶಾಲಾ ಸಾಮಾಗ್ರಿಗಳನ್ನು ಸ್ಥಳಾಂತರಿಸಿದ್ದಾರೆ. ಕೆಲವು ವಸ್ತುಗಳು ಮಣ್ಣಿನಡಿ ಸಿಲುಕಿ ಸಂಪೂರ್ಣ ಹಾಳಾಗಿದೆ.

ಮಡಿಕೇರಿ ತಹಶೀಲ್ದಾರ್ ಪ್ರವೀಣ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಪನಿರ್ದೇಶಕ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನೊಡೇಲ್ ಅಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ಇನ್ನಿತರರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮಡಿಕೇರಿ : ಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಸುಂಟಿಕೊಪ್ಪ ಹೋಬಳಿ ಉಲುಗುಲಿ ಗ್ರಾಮದ ಗಂಗಮ್ಮ ಅವರ ಮನೆ ಮೇಲೆ ಮರ ಬಿದ್ದು ಮನೆಯ ಶೀಟ್ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಶ್ರೀಮಂಗಲ: ಇಲ್ಲಿಗೆ ಸಮೀಪದ ಕೋತೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಮೂರು ಮನೆಗಳು ಹಾನಿಯಾಗಿವೆ

ವಿ.ಎಸ್. ಪ್ರವೀಣ್, ವಿ.ಎಂ. ಮಣಿ ಹಾಗೂ ಹೆಚ್.ಸಿ. ಜಾನಕಿ ಎಂಬವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಈ ಸಂಬAಧ ಶ್ರೀಮಂಗಲ ಹೋಬಳಿ ಉಪ ತಹಶೀಲ್ದಾರರು ಕಂದಾಯ ಪರಿವೀಕ್ಷಕರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಮಡಿಕೇರಿ: ನಾಪೋಕ್ಲು-ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕಡಿತಗೊಳ್ಳುವ ಭೀತಿ ಇದೀಗ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಾಪೋಕ್ಲು- ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ಅರ್ಧ ಅಡಿಗಳಷ್ಟು ನೀರು ಹರಿಯುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ತಲೆದೋರುವ ಆತಂಕ ಉಂಟಾಗಿದೆ.

ಸದ್ಯಕ್ಕೆ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಮಳೆ ಇದೇ ರೀತಿ ಮುಂದುವರೆದರೆ ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆ ಕಡಿತಕೊಳ್ಳುವ ಸಾಧ್ಯತೆ ಇದೆ.

ಮಡಿಕೇರಿ: ಗಾಳಿ ಸಹಿತ ಎಡೆಬಿಡದೆ ಸುರಿದ ಮಳೆಗೆ ಮನೆಯೊಂದು ಭಾಗಶಃ ಹಾನಿಯಾಗಿರುವ ಘಟನೆ ಮಡಿಕೇರಿ ಸಮೀಪದ ಕಡಗದಾಳು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮುಕ್ಕಾಟೀರ ಬೊಳ್ಳಪ್ಪ ಎಂಬವರ ಮನೆ ಧರಾಶಾಹಿಯಾಗಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೃಹಪಯೋಗಿ, ಅಗತ್ಯ ವಸ್ತುಗಳು ಮಳೆಯಿಂದ ಹಾನಿಯಾಗಿವೆ. ಸ್ಥಳಕ್ಕೆ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. ಮನೆಯವರ ವಾಸಕ್ಕೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (೬ನೇ ಪುಟಕ್ಕೆ)