ಪ್ರತಿಧ್ವನಿಮಡಿಕೇರಿ, ಜು. ೧೬: ಸರಕಾರಿ ಜಾಗಗಳನ್ನು ಮೀಸಲು ಅರಣ್ಯವಾಗಿ ಪರಿವರ್ತಿಸುವ ಸಂಬAಧ ನಡೆ ಯುತ್ತಿರುವ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ, ಪ್ರಸ್ತಾಪವನ್ನು ಕೈಬಿಡುವಂತೆ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಆಗ್ರಹಿಸಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ ಅಧಿವೇಶನದಲ್ಲಿ ‘ಶಕ್ತಿ’ ವರದಿಯನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಮೀಸಲು ಅರಣ್ಯ ಪ್ರದೇಶಕ್ಕೆ ೬೬ ಗ್ರಾಮಗಳ
(ಮೊದಲ ಪುಟದಿಂದ) ನೂರಾರು ಸರ್ವೆ ನಂಬರ್‌ಗಳ ಗುರುತು ಮಾಡಲಾಗಿದೆ. ಜಿಲ್ಲೆಯಲ್ಲಿ ಹಲವಷ್ಟು ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿರುವ ಸಾವಿರಾರು ಹೆಕ್ಟೇರ್ ಪ್ರದೇಶದ ಸ್ಥಿತಿಗತಿಯ ಮಾಹಿತಿ ನೀಡುವಂತೆ ಜಿಲ್ಲೆಯ ವಿವಿಧ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪ ನಾಧಿಕಾರಿ ಸೂಚನೆ ನೀಡಿದ್ದು, ಈ ಬಗ್ಗೆ ಪತ್ರಿಕಾ ಪ್ರಕಟಣೆಗಳು ಸೇರಿದಂತೆ ಆಯಾ ಪಂಚಾಯಿತಿ ನೋಟಿಸ್ ಬೋರ್ಡ್ಗಳಲ್ಲಿ ಪ್ರಕಟಿಸಲಾಗುತ್ತಿದೆ.
ಈ ಆದೇಶದ ಅನ್ವಯ ಸಾವಿರಾರು ಹೆಕ್ಟೇರ್ ಪ್ರದೇಶಗಳು ಮೀಸಲು ಅರಣ್ಯವಾಗಿ ಬದಲಾಗುವ ಆತಂಕ ಸೃಷ್ಟಿಯಾಗಿದೆ ಎಂದು ಸದನದಲ್ಲಿ ಕಳವಳ ವ್ಯಕ್ತಪಡಿಸಿದರು.
ಈ ಕ್ರಮಕ್ಕೆ ಜಿಲ್ಲೆಯ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ವಿವಿಧ ಕಡೆಗಳಲ್ಲಿ ಮೀಸಲು ಅರಣ್ಯ ಪ್ರದೇಶ ಮಾಡುವುದರಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಕ್ರಮೇಣ ಆ ಭಾಗದಲ್ಲಿ ಬದುಕು ನಡೆಸುವುದೇ ಕಷ್ಟದಾಯಕವಾಗುತ್ತದೆ. ಕೊಡಗಿನಲ್ಲಿ ವನ್ಯಜೀವಿ ಮಾನವ ಸಂಘರ್ಷ ಮಿತಿಮೀರಿದ್ದು, ಮೊದಲು ಇದನ್ನು ಸರಿಪಡಿಸಬೇಕಾದ ರಾಜ್ಯ ಸರಕಾರ ಕೊಡಗಿನ ಜನರನ್ನು ಆತಂಕಕ್ಕೆ ದೂಡುವ ಕೆಲಸಕ್ಕೆ ಕೈಹಾಕಿದೆ ಎಂದು ಆರೋಪಿಸಿದರು.
ಮೀಸಲು ಅರಣ್ಯ ಮಾಡಬೇಕೆಂಬ ಉದ್ದೇಶ ಅಪ್ರಸ್ತುತವಾಗಿದ್ದು, ಕೂಡಲೇ ಪ್ರಸ್ತಾವನೆಯನ್ನು ಹಿಂಪಡೆಯುವAತೆ ಶೂನ್ಯ ವೇಳೆಯಲ್ಲಿ ಸುಜಾ ಕುಶಾಲಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಸಂಬAಧಪಟ್ಟ ಸಚಿವರ ಮೂಲಕ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಸುಜಾ ಮಾಹಿತಿ ನೀಡಿದ್ದಾರೆ. ತಾ. ೧೩ ಹಾಗೂ ೧೪ ರ ಪತ್ರಿಕೆಯಲ್ಲಿ ‘ಶಕ್ತಿ’ ಮೀಸಲು ಅರಣ್ಯ ಪ್ರಸ್ತಾಪದ ಕುರಿತು ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.