ವೀರಾಜಪೇಟೆ, ಜು. ೧೬: ಗಾಂಧಿನಗರದ ಜನನಿಬಿಡ ಪ್ರದೇಶದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಸಬ್‌ಜೈಲ್ ಕಟ್ಟಡ ನಿರ್ಮಾಣ ಹಂತದಲ್ಲೇ ಇದೆ. ಅದರ ಕಾಮಗಾರಿ ಮೂರು ತಿಂಗಳಿಗೋ, ಆರು ತಿಂಗಳಿಗೋ, ವರ್ಷ ಕ್ಕೊಮ್ಮೆಯೋ ನಡೆಯುತ್ತಿರುತ್ತವೆ. ಆದರೆ ಅದರ ಸುತ್ತಮುತ್ತ ಕಾಡು ಬೆಳೆದು ಹಾವಿನಂತಹ ವಿಷಕಾರಿ ಜಂತುಗಳು, ಚೇಳು, ಕ್ರಿಮಿ ಕೀಟಗಳು, ಡೆಂಗ್ಯೂ ಸೊಳ್ಳೆ ಇಲ್ಲಿಯೇ ವಾಸ ಸ್ಥಳ ಮಾಡಿದೆಯೇನೋ ಎಂದು ಮೇಲ್ನೋಟಕ್ಕೆ ಕಾಣುತ್ತಿವೆ.

ಸುತ್ತಮುತ್ತಲಿನ ಕೆಲವು ಕಚೇರಿಯ ವಸತಿಗೃಹದ ಸಿಬ್ಬಂದಿಯ ಮನೆಯವರು ಕಸವನ್ನು ಕೂಡ ತಂದು ಇಲ್ಲೇ ಹಾಕುತ್ತಾರೆ. ಹಲವಾರು ವರ್ಷಗಳಿಂದ ಕಟ್ಟಡದ ಸುತ್ತಮುತ್ತಲಿನ ಮನೆಯವರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಇದಕ್ಕೆ ಸಂಬAಧಪಟ್ಟ ಇಲಾಖೆಯವರು, ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಕಟ್ಟಡ ನಿರ್ಮಾಣ ಆಗುವಷ್ಟು ಬೇಗ ಮುಂದುವರಿಸುವುದು ಅಥವಾ ಕಾಡುಗಳನ್ನು ಕಡಿದು ಸ್ವಚ್ಛವಾಗಿ ಇಡುವುದು.

ಇಲ್ಲದಿದ್ದ ಪಕ್ಷದಲ್ಲಿ ಇದಕ್ಕೆ ಸಂಬAಧಪಟ್ಟ ಇಲಾಖೆಯ ಕಚೇರಿಯ ಮುಂದೆ ಸಾರ್ವಜನಿಕರನ್ನು ಸೇರಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗಾಂಧಿನಗರ ನಿವಾಸಿಗಳ ಪರವಾಗಿ ಸ್ಥಳೀಯರರಾದ ಪಿ.ಎ. ಮಂಜುನಾಥ್ ತಿಳಿಸಿದ್ದಾರೆ.