ನಾಪೋಕ್ಲು, ಜು. ೧೬: ಸ್ಥಳೀಯ ಗ್ರಾಮ ಪಂಚಾಯಿತಿ, ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡAತೆ, ಪಂಚಾಯಿತಿಗೆ ಸಂಬAಧಿಸಿದAತೆÀ ತೆರಿಗೆ ಪಾವತಿಸದೆ ಹಾಗೂ ಲೈಸೆನ್ಸ್ ಪಡೆಯದೇ ಇರುವ, ಮಾಲೀಕರ ಮಳಿಗೆಗಳಿಗೆ ಬೀಗವನ್ನು ಜಡಿಯುವ ಎಚ್ಚರಿಕೆ ನೀಡಲಾಯಿತು.
ಅಂಗಡಿಗಳಿಗೆ ತೆರಳಿ, ಪರಿಶೀಲಿಸಿ ತೆರಿಗೆ ಪಾವತಿಸದೆ ಇರುವ ಹಾಗೂ ಲೈಸನ್ಸ್ ಪಡೆಯದಿರುವ ಅಂಗಡಿ ಮಾಲೀಕರಿಗೆ ತಾ. ೨೨ ರೊಳಗೆ ಪಾವತಿಸುವಂತೆ ಸೂಚಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಸದಸ್ಯರಾದ ಕನ್ನಂಭೀರ ಸುದೀ ತಿಮ್ಮಯ್ಯ, ಮಾಚೇಟಿರ ಕುಸು ಕುಶಾಲಪ್ಪ, ಪ್ರತೀಪ ಬಿ.ಎಂ. ಹಾಗೂ ಬೊಪ್ಪಂಡ ವೇಣು ಹಾಜರಿದ್ದರು.