ಸಿದ್ದಾಪುರ, ಜು. ೧೬: ಮಂಗಗಳು ಮನೆಯ ಮೇಲೆ ದಾಂಧಲೆ ನಡೆಸಿದ ಪರಿಣಾಮ ಮನೆಯ ಮೇಲ್ಛಾವಣಿ ಹಾನಿಯಾಗಿದ್ದು ಮಳೆ ನೀರು ಮನೆಯೊಳಗೆ ತುಂಬಿರುವ ಘಟನೆ ಅಮ್ಮತ್ತಿ ಹೋಬಳಿಯ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ. ಕಳತ್ಮಾಡು ಗ್ರಾಮದ ನಿವಾಸಿ ನಾರಾಯಣ, ರಮೇಶ ಎಂಬುವವರ ಮನೆಯ ಮೇಲೆ ಮಂಗಗಳ ಹಿಂಡು ದಾಂಧಲೆ ನಡೆಸಿದ ಪರಿಣಾಮ ಮನೆಯ ಮೇಲ್ಛಾವಣಿಯ ಹೆಂಚುಗಳು ಒಡೆದು ಹೋಗಿದ್ದು, ಮೇಲ್ಛಾವಣಿ ಹಾನಿಯಾಗಿ ಸುರಿಯುತ್ತಿರುವ ಧಾರಾಕಾರ ಮಳೆ ನೀರು, ಮನೆ ಒಳಗೆ ನುಗ್ಗಿದೆ. ಮನೆ ಮಂದಿಗೆ ವಾಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನೆಯವರು ಅಳಲು ತೋಡಿಕೊಂಡಿದ್ದಾರೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಮನೆಯ ಗೋಡೆಗಳಿಗೂ ಹಾನಿಯಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಮನೆಯ ಹಿಂಭಾಗದಲ್ಲಿ ಇರುವ ಬರೆ ಕುಸಿವ ಸ್ಥಿತಿಯಲ್ಲಿದ್ದು, ಮನೆಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಕೂಡಲೇ ಸಂಬAಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕೆAದು ಹಾಗೂ ಅನಾಹುತ ಸಂಭವಿಸದAತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.