ಕಣಿವೆ, ಜು. ೧೬: ಸರಕು ತುಂಬಿದ್ದ ಮಿನಿ ಲಾರಿ ಹಾಗೂ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟಿ ಸವಾರರಿಬ್ಬರು ಸ್ಥಳದಲ್ಲಿಯೇ ಅಸುನೀಗಿದ ದುರ್ಘಟನೆ ಕೊಡಗರ ಹಳ್ಳಿಯ ಮೈಸೂರು-ಮಡಿಕೇರಿ ರಾಷ್ಟಿçÃಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಮೂರು ಗಂಟೆ ವೇಳೆಯಲ್ಲಿ ಸಂಭವಿಸಿದೆ.
ಸ್ಕೂಟಿ ಚಾಲಿಸುತ್ತಿದ್ದ ಸುಂಟಿಕೊಪ್ಪ ಬಳಿಯ ಬಾಳೆಕಾಡು ತೋಟದ ನಿವಾಸಿ ನಾರಾಯಣ ಅವರ ಪುತ್ರ ರಕ್ಷಿತ್ (೨೨) ಹಾಗೂ ಗರಗಂದೂರು ನಿವಾಸಿ ಮಂಜು (೨೫) ಮೃತ ದುರ್ದೈವಿಗಳು.
ಹೆದ್ದಾರಿಯಲ್ಲಿ ಪರಸ್ಪರ ಡಿಕ್ಕಿಯಾದ ರಭಸಕ್ಕೆ ಸ್ಕೂಟಿಯಲ್ಲಿದ್ದ ಈ ಇಬ್ಬರ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಏಟು ಬಿದ್ದ ಪರಿಣಾಮ ಇಬ್ಬರೂ ಹೆದ್ದಾರಿಯ ಮಧ್ಯೆಯೇ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದಾರೆ.
ಮಿನಿ ಲಾರಿ ಚಾಲಕ ಲನೀಶ್ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಸುಂಟಿಕೊಪ್ಪ ಠಾಣೆಗೆ ತೆರಳಿ ಶರಣಾಗಿದ್ದಾನೆ.
ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಈ ಇಬ್ಬರು ನತದೃಷ್ಟರು ಸುಂಟಿಕೊಪ್ಪದಿAದ (ಕೆ.ಎ. ೧೨ - ಹೆಚ್ ೨೯೯೬) ಸ್ಕೂಟಿಯಲ್ಲಿ ಏಳನೇ ಹೊಸಕೋಟೆಯ ಹೊಟೇಲ್‌ಗೆ ಊಟ ಮಾಡಲು ತೆರಳುತ್ತಿದ್ದರು. ಸರಕು ತುಂಬಿದ್ದ ಮಿನಿ ಲಾರಿ (ಕೆ.ಎಲ್-೧೧ ಬಿ.ಎಂ- ೯೦೩೭) ಸುಂಟಿಕೊಪ್ಪದ ಕಡೆ ತೆರಳುತ್ತಿತ್ತು. ಹೊಸಕೋಟೆಯ ಮಾರುತಿ ನಗರದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಸ್ಕೂಟಿ ಸವಾರರು ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಯುತ್ತಿ ತ್ತೇನೋ ಎಂದು ಸ್ಥಳದಲ್ಲಿದ್ದವರು ಮಾತಾಡಿ ಕೊಳ್ಳುತ್ತಿದ್ದುದು ಕೇಳಿ ಬಂದಿತು.
(ಮೊದಲ ಪುಟದಿಂದ) ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ. ಶ್ರೀಧರ್, ಅಪರಾಧ ವಿಭಾಗದ ನಿರೀಕ್ಷಕ ಸ್ವಾಮಿ, ಸಿಬ್ಬಂದಿಗಳು ಮಹಜರು ನಡೆಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.