ಮಡಿಕೇರಿ, ಜು. ೧೬: ಮಡಿಕೇರಿಯ ಸರ್ಕಾರಿ ಬಾಲಕರ ಬಾಲಮಂದಿರದ ೨೭ ಮಕ್ಕಳಿಗೆ ರೋಟರಿ ವುಡ್ಸ್ನಿಂದ ಜರ್ಕಿನ್ ವಿತರಿಸಲಾಯಿತು.

ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ವುಡ್ಸ್ ನಿರ್ದೇಶಕ ಬಾಲಸುಬ್ರಹ್ಮಣ್ಯ ಅವರು ಕೊಡುಗೆಯಾಗಿ ನೀಡಿದ ಜರ್ಕಿನ್‌ಗಳನ್ನು ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದರ್ ಸಮ್ಮುಖದಲ್ಲಿ ಕೇಂದ್ರದ ಆಪ್ತ ಸಮಾಲೋಚಕ ನಾಗಭೂಷಣ್, ಕಚೇರಿ ಸಿಬ್ಬಂದಿ ಹೆಚ್. ಸೂರಜ್ ಅವರಿಗೆ ಹಸ್ತಾಂತರಿಸಲಾಯಿತು,

ಈ ಸಂದರ್ಭ ಮಾತನಾಡಿದ ಹರೀಶ್ ಕಿಗ್ಗಾಲು, ರೋಟರಿ ಸಂಸ್ಥೆಯು ಈ ವರ್ಷದಲ್ಲಿ ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರು.

ರೋಟರಿ ವುಡ್ಸ್ ನಿರ್ದೇಶಕರಾದ ಧನಂಜಯ ಶಾಸ್ತಿçÃ, ಅಜ್ಜೇಟ್ಟಿರ ಲೋಕೇಶ್, ರವಿಕುಮಾರ್, ರವಿ.ಪಿ, ಜಹೀರ್ ಅಹ್ಮದ್, ಭಗತ್ ರಾಜ್, ರವಿಕುಮಾರ್, ಕಶ್ಯಪ್, ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಹೆಚ್.ಟಿ, ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು. ರೋಟರಿ ವುಡ್ಸ್ ವತಿಯಿಂದ ಮಕ್ಕಳಿಗೆ ಭೋಜನ ನೀಡಲಾಯಿತು. ಹಾಗೆಯೇ ರವಿ.ಪಿ. ಹಾಗೂ ರವಿಕುಮಾರ್ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು.

ರೋಟರಿ ವುಡ್ಸ್ ನಿರ್ದೇಶಕ, ಹೆಸರಾಂತ ಜಾದೂಗಾರ ವಿಕ್ರಂಶೆಟ್ಟಿ ವಿಭಿನ್ನ ರೀತಿಯ ಜಾದೂ ಮೂಲಕ ಮಕ್ಕಳ ಸಂಭ್ರಮಕ್ಕೆ ಕಾರಣರಾದರು. ಡೆಂಗ್ಯೂ ಬಾರದಂತೆ ಸೊಳ್ಳೆಗಳನ್ನು ಹೇಗೆಲ್ಲಾ ಕೈ ಚಪ್ಪಾಳೆ ಮೂಲಕ ಹೊಡೆಯಬಹುದು. ಹಗ್ಗದ ಜಾದೂ, ರಿಬ್ಬನ್ ಜಾದೂ ಸೇರಿದಂತೆ ೧೫ ಮ್ಯಾಜಿಕ್‌ಗಳನ್ನು ವಿಕ್ರಂಶೆಟ್ಟಿ ಪ್ರದರ್ಶಿಸಿದರು. ಇದೇ ಸಂದರ್ಭ ಮಕ್ಕಳಿಗೆ ಸರಳ ಜಾದೂ ವಿಧಾನಗಳನ್ನು ವಿಕ್ರಂ ಪ್ರಾಯೋಗಿಕವಾಗಿ ಕಲಿಸಿಕೊಟ್ಟರು.