ಮಡಿಕೇರಿ, ಜು. ೧೭: ಮಡಿಕೇರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ೯ ವರ್ಷಗಳಿಂದ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಆರ್.ಪಿ. ಚಂದ್ರಶೇಖರ್ ಅವರಿಗೆ ಶಾಲೆಯ ಪರವಾಗಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಭೆಯಲ್ಲಿ ಉಪಪ್ರಾಂಶುಪಾಲೆ ಪಿ.ಕೆ. ನಳಿನಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರೂ, ಶಾಲೆಯ ದೈಹಿಕ ಶಿಕ್ಷಕ ಶ್ರೀನಿವಾಸ್, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಆಂಗ್ಲ ಭಾಷಾ ಶಿಕ್ಷಕಿ ಐರಿನ್ ಉಷಾ ನಡೆಸಿಕೊಟ್ಟರು. ಉಪಪ್ರಾಂಶುಪಾಲೆ ಕೆ.ವಿ. ಶಶಿಕಲಾ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಅಭಿವೃದ್ಧಿಗೆ ಚಂದ್ರಶೇಖರ್ ಅವರು ಶ್ರಮ ವಹಿಸಿರುವ ಬಗ್ಗೆ ಶ್ಲಾಘಿಸಿದರು.

ಶಾಲೆಯ ಅಭಿವೃದ್ಧಿಗೆ ಇನ್ನು ಮುಂದೆಯೂ ಸಹಕಾರ ನೀಡುವುದಾಗಿ ಚಂದ್ರಶೇಖರ್ ಅವರು ಆಶ್ವಾಸನೆ ನೀಡಿದರು. ವಿದ್ಯಾರ್ಥಿನಿಯರಾದ ಮೇಘನಾ ಹಾಗೂ ಶ್ರೇಷ್ಟ ತಮ್ಮ ಅನುಭವಗಳನ್ನು ಹಂಚಿಕೊAಡರು.

ವಿದ್ಯಾರ್ಥಿಗಳಾದ ಶಿವಕುಮಾರ್, ಚಂದ್ರು ಸ್ವರಚಿತ ಧನ್ಯವಾದ ಸಮರ್ಪಣೆ ಗಾಯನ ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕಿ ಮಂದಾಕಿನಿ ವಂದನಾರ್ಪಣೆ ನಡೆಸಿಕೊಟ್ಟರು.