ಚೆಯ್ಯಂಡಾಣೆ, ಜು. ೧೭: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವು ದರಿಂದ ಸಮಾಜದಲ್ಲಿ ಮುನ್ನೆಡೆಯಲು ಸಾಧ್ಯ ಎಂದು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು. ಕಾನೂನು ಅರಿವಿನ ಬಗ್ಗೆ ಮಾಹಿತಿ ನೀಡಿ, ಮಾದಕ ವಸ್ತು, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ವಾಹನ ಚಾಲನೆ, ಸಾಮಾಜಿಕ ಜಾಲತಾಣ ಹಾಗೂ ಪೋಸ್ಕೊ ಕಾಯಿದೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಲೈಂಗಿಕ ದೌರ್ಜನ್ಯ, ಮಾದಕ ವಸ್ತು ಸೇವನೆ ಹಾಗೂ ಮಾರಾಟ, ಅಪ್ರಾಪ್ತರ ವಾಹನ ಚಾಲನೆ, ಬಾಲ್ಯ ವಿವಾಹ ಇನ್ನಾವುದೇ ಸಮಸ್ಯೆ ಕಂಡುಬAದರೆ ಕೂಡಲೇ ಶಿಕ್ಷಕರ ಅಥವಾ ಇಲಾಖೆಯ ಗಮನಕ್ಕೆ ತರುವಂತೆ ಮಂಜುನಾಥ್ ಹೇಳಿದರು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಭವ್ಯ, ಶಿಕ್ಷಕಿಯರಾದ ಸುನೀತಾ, ಹೇಮಮಾಲಿನಿ, ಮಮತಾ, ಶಿಕ್ಷಕರಾದ ರವೀಂದ್ರನಾಥ್, ರಾಜ್ ಕುಮಾರ್, ಪೊಲೀಸ್ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಶಿಕ್ಷಕ ರಾಜ್ಕುಮಾರ್ ಸ್ವಾಗತಿಸಿ, ಶಿಕ್ಷಕಿ ಸುನಿತಾ ವಂದಿಸಿದರು.