*ಗೋಣಿಕೊಪ್ಪ, ಜು. ೧೭: ಕ್ರಿಯೇಟಿವಿಟಿ ಡ್ಯಾನ್ಸ್ ಅಕಾಡೆಮಿ, ಅನ್ಸ್ ಇವೆಂಟ್ ಸ್ಟುಡಿಯೋ ಕೂಡಿಗೆ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಡ್ಯಾನ್ಸಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪದ ಸೈಕ್ಲೋನ್ ಡಾನ್ಸ್ ಸಂಸ್ಥೆಯ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕುಶಾಲನಗರದ ಕೂಡಿಗೆ ರೈತ ಭವನದಲ್ಲಿ ಎರಡು ದಿನಗಳು ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಗೋಣಿಕೊಪ್ಪದ ಸೈಕ್ಲೋನ್ ನೃತ್ಯ ಸಂಸ್ಥೆಯ ಸಬ್ ಜೂನಿಯರ್ ವಿಭಾಗದ ವಿದ್ಯಾರ್ಥಿಗಳು ತೃತೀಯ ಸ್ಥಾನದ ವಿಜೇತರಾಗಿದ್ದಾರೆ.
ಗೂಗ್ಗಯ್ಯ, ಗೊಗ್ಗಯ್ಯ ಎಂಬ ನೃತ್ಯಕ್ಕೆ ಸೈಕ್ಲೋನ್ ತಂಡದ ಮಾಲೀಕ ಹಾಗೂ ತರಬೇತಿದಾರ ರಮೇಶ್ ಅವರ ತರಬೇತಿಯಲ್ಲಿ ನೃತ್ಯ ಪ್ರದರ್ಶಿಸಿದರು.
ಕಪಲ್ ಡ್ಯಾನ್ಸ್, ಗ್ರೂಪ್ ಡ್ಯಾನ್ಸ್ಗಳ ಸ್ಪರ್ಧೆಗಳಲ್ಲಿ ಸೈಕ್ಲೋನ್ ತಂಡದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ನೃತ್ಯ ಪ್ರದರ್ಶಿಸಿದ ಮಕ್ಕಳಾದ ಮೋದಕ್, ಪ್ರೀತಮ್, ರಿನ್ಯಾ ಆರಾಧ್ಯ, ಭವಾನಿ, ರಿತನ್ಯ, ರಿಚ, ಅನನ್ಯ ವಿ., ದಿಶ, ಶ್ರಾವಣಿ, ದೀಕ್ಷ ಎಸ್., ದೀಕ್ಷ ಕೆ.ಯು., ನಿಷ್ಕ ಇವರುಗಳು ತಂಡದಲ್ಲಿದ್ದರು.