, ಜು. ೧೭: ಜಿಲ್ಲೆಯಲ್ಲಿ ಈ ಹಿಂದೆ ಸಂಭವಿಸಿದ ಪ್ರಕೃತಿ ದುರಂತ ಮತ್ತು ಭಾರಿ ಮಳೆಯಿಂದ ಹಲವಾರು ಕಟ್ಟಡಗಳು ಹಾನಿಗೊಳಗಾಗಿ ನೆಲಸಮವಾಗಿದ್ದವು. ಇತ್ತೀಚೆಗೆ ಜಿಲ್ಲೆಯ ಗೋಣಿಕೊಪ್ಪದಲ್ಲಿ ಹಳೆಯ ಕಟ್ಟಡವೊಂದರ ದುರಂತವು ಜಿಲ್ಲೆಯ ಜನರ ಮನಸ್ಸಿನಿಂದ ಇನ್ನೂ ಮಾಸಿಹೋಗಿಲ್ಲ. ಇಂತಹ ಹಳೆಯ ಕಟ್ಟಡಗಳಲ್ಲಿ ಕೆಲವು ಕಟ್ಟಡಗಳು ಗಟ್ಟಿಮುಟ್ಟಾಗಿದ್ದರೂ ಅಂತಹ ಕಟ್ಟಡಗಳ ಕಡೆ ಗಮನಹರಿಸದೇ ಇದ್ದು ಕಟ್ಟಡಗಳು ಸಣ್ಣಪುಟ್ಟ ಹಾನಿಗೊಳಗಾದಾಗ ಅವುಗಳನ್ನು ನಿರ್ವಹಣೆ ಮಾಡದೆ ಇರುವುದರಿಂದ ಬರಬರುತ್ತಾ ಆ ಕಟ್ಟಡಗಳು ತನ್ನ ಆಯುಷ್ಯವನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಇಂತಹ ನಿರ್ವಹಣೆಯ ಕೊರತೆಗೆ ಸೋಮವಾರಪೇಟೆ-ಮಡಿಕೇರಿ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿರುವ ಐಗೂರು ಗ್ರಾ.ಪಂ. ಕಚೇರಿಯ ಸುಮಾರು ೪೦ ವರ್ಷದ ಹಳೆಯ ಹೆಂಚಿನ ಕಟ್ಟಡವು ಸಾಕ್ಷಿಯಾಗಿದೆ. ಐಗೂರು ಗ್ರಾಮ ಪಂಚಾಯಿತಿ ಕಚೇರಿಯ ಈ ಹಳೆ ಕಟ್ಟಡವು ನೂತನ ಕಟ್ಟಡವಾಗಿದ್ದ ಸಮಯದಲ್ಲಿ ತಾರೀಕು ೦೧.೧೧.೧೯೮೩ ರಂದು ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷÀ ಎಂ.ಬಿ. ಪೂವಯ್ಯ ಅವರ ಅವಧಿಯಲ್ಲಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಹನುಮರಾಜ ಅರಸು ಅವರ ಅಧ್ಯಕ್ಷತೆಯಲ್ಲಿ ಮಾಜಿ ರಾಜ್ಯ ಅರಣ್ಯ ಸಚಿವ ಬಿ.ಎ. ಜೀವಿಜಯ ಅವರಿಂದ ಉದ್ಘಾಟನೆಯಾಗಿತ್ತು. ನಂತರ ಇತ್ತೀಚೆಗೆ ಈ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪದಲ್ಲಿ ೨೦೧೦ನೇ ಸಾಲಿನಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ iÀÄ ಹಳೆಯ ಕಚೇರಿ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪಗ್ರಾಮ ಪಂಚಾಯಿತಿ ಆಡಳಿತದ ಕಚೇರಿಯನ್ನು ವರ್ಗಾಯಿಸಲಾಯಿತು. ಹೆದ್ದಾರಿ ರಸ್ತೆಯ ಪಕ್ಕದಲ್ಲಿರುವ ಈ ಹಳೆಯ ಹೆÀಂಚಿನ ಛಾವಣಿಯ ಪಂಚಾಯಿತಿ ಕಟ್ಟಡವು ಇದೀಗ ಧರ್ಮಸ್ಥಳ ಸಂಘದ ಕಚೇರಿ, ಗ್ರಾಮ ಒನ್ ಕೇಂದ್ರ, ನೀರು ಗಂಟಿಯ ವಾಸದ ಮನೆ, ಅಂಚೆ ಕಚೇರಿಗೆ ಆಶ್ರಯವನ್ನು ನೀಡುತ್ತಿದ್ದು, ಈ ಕಟ್ಟಡದ ಬಾಡಿಗೆಯಿಂದ ಪಂಚಾಯಿತಿಗೆ ಆದಾಯವು ಬರುತ್ತಿದೆ. ಇತ್ತೀಚೆಗೆ ಐದಾರು ತಿಂಗಳಿನಿAದ ಕಳೆದ ಬೇಸಿಗೆ ಕಾಲದ ಸಮಯದಲ್ಲಿ ಈ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ ಹೆಂಚುಗಳು ಗಾಳಿಗೆ ಹಾರಿ ಹೋಗಿ ಮೇಲ್ಛಾವಣಿಯಲ್ಲಿ ಬೃಹದಾಕಾರದ ರಂದ್ರಗಳಾಗಿ ಮೇಲ್ಮುಖವಾಗಿ ಬಾಯಿ ತೆರೆದುಕೊಂಡು ನೋಡುಗರಿಗೆ ಭಯವನ್ನು ಹುಟ್ಟಿಸುತ್ತಿದೆ. ಮೇಲ್ಛಾವಣಿಗೆ ಸೀಲಿಂಗ್ ಅಳವಡಿಸಿದ್ದರೂ ಕಳೆದ ತಿಂಗಳಿAದ ಮಳೆಗಾಲ ಪ್ರಾರಂಭವಾಗಿರುವುದರಿAದ ಮಳೆಯ ನೀರು, ಮೇಲ್ಛಾವಣಿಯ ಬಾಯಿ ತೆರೆದ ಬೃಹತ್ ರಂದ್ರಗಳ ಮೂಲಕ ಕಟ್ಟಡದ ಗೋಡೆಗಳ ಕಡೆಗೆ ಹರಿದು ಗೋಡೆಗಳು ತೇವಾಂಶದಿAದ ಕೂಡಿದ್ದು ಶಿಥಿಲಾವಸ್ಥೆಯನ್ನು ತಲುಪುತ್ತಿದೆ. ಇದರ ಜೊತೆಗೆ ಈ ಕಟ್ಟಡಕ್ಕೆ ಹೊಂದಿಕೊAಡಿರುವ ಪಕ್ಕದ ಕೊಠಡಿಯಲ್ಲಿ ಗ್ರಾ.ಪಂ.ಯ ನೀರುಗಂಟಿಯ ಕುಟುಂಬ ವಾಸಿಸುತ್ತಿದ್ದು, ಕೊಠಡಿಯೊಳಗೆ ಮೇಲ್ಛಾವಣಿಯ ಮಳೆಯ ನೀರು ಸೋರುತ್ತಿದೆ. ಇನ್ನೂ ಮೂರು ತಿಂಗಳು ಮಳೆಗಾಲವಿದ್ದು, ಮಳೆಯ ನೀರು ಇದೇ ರೀತಿ ಈ ಮೇಲ್ಛಾವಣಿಯ ರಂದ್ರಗಳ ಮೂಲಕ ಹರಿಯುತ್ತಾ ಇದ್ದರೆ ಈ ಕಟ್ಟಡದ ಗೋಡೆಗಳು ದುರ್ಬಲವಾಗಿ ಮೇಲ್ಛಾವಣಿಯು ತನ್ನ ಹಿಡಿತವನ್ನು ಕಳೆದುಕೊಂಡು, ಕಟ್ಟಡವನ್ನು ಆಶ್ರಯಿಸಿಕೊಂಡಿರುವ ಧರ್ಮಸ್ಥಳ ಸಂಘ, ನೀರು ಗಂಟಿಯ ಕುಟುಂಬ, ಅಂಚೆ ಕಚೇರಿಯ ಸಿಬ್ಬಂದಿಗಳ ಜೀವಕ್ಕೆ ತೊಂದರೆ ಸಂಭವಿಸಬಹುದು. ಐಗೂರು ವ್ಯಾಪ್ತಿಯ ರಾಜಕೀಯ ಮುಖಂಡರಾಗಲಿ, ಗ್ರಾಮ ಪಂಚಾಯಿತಿ ಸದಸ್ಯರಾಗಲಿ, ಈ ಹಳೆ ಕಟ್ಟಡದ ಮೇಲ್ಛಾವಣಿಯ ದೊಡ್ಡ ರಂದ್ರಗಳನ್ನು ವೀಕ್ಷಿಸುತ್ತಿದ್ದಾರೆ ವಿನಃ ಮೇಲ್ಛಾವಣಿಗೆ ಹೊಸ ಹೆಂಚುಗಳನ್ನು ಹಾಕಿ ಕಟ್ಟಡಕ್ಕೆ ಭದ್ರತೆ ಒದಗಿಸುವ ಕೆಲಸಕ್ಕೆ ಕೈಹಾಕದ ಬಗ್ಗೆ ಐಗೂರು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಈ ಹಳೆಯ ಕಟ್ಟಡದ ಮೇಲ್ಛಾವಣಿಗೆ ಕಾಯಕಲ್ಪ ನೀಡಿ ಕಟ್ಟಡವನ್ನು ಮತ್ತು ಇಲ್ಲಿ ಆಶ್ರಯ ಪಡೆದು ಕೊಂಡಿರುವವರನ್ನು ರಕ್ಷಿಸಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಸುಕುಮಾರ