ಮಡಿಕೇರಿ, ಜು. ೧೭: ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಮಳೆ - ಗಾಳಿಯ ರಭಸಕ್ಕೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಳೆದ ಕೆಲ ದಿನಗಳಿಂದ ಕಂಡುಬAದಿದ್ದ ಮಳೆ - ಗಾಳಿಯ ತೀವ್ರತೆ ಇಂದು ಮಧ್ಯಾಹ್ನದವರೆಗೆ ಕೊಂಚ ಕಡಿಮೆಯಾಗಿತ್ತಾದರೂ, ಸಂಜೆ ಬಳಿಕ ಮತ್ತೆ ವಾಯು - ವರುಣನ ಆರ್ಭಟ ಹೆಚ್ಚಾಗಿದೆ.
ಇಂದು ಬೆಳಿಗ್ಗೆ ೮.೩೦ ಗಂಟೆಗೆ ಕೊನೆಗೊಂಡAತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೩.೨೨ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಮಳೆಯಾಗಿರಲಿಲ್ಲ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ೫೩.೦೪ ಇಂಚು ಮಳೆ ಸುರಿದಿದ್ದು, ಕಳೆದ ವರ್ಷ ಈ ಅವಧಿಯಲ್ಲಿ ೨೩.೪೨ ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ೩.೮೭ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ ೦.೯೪ ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೭೬.೫೩ ಇಂಚು ಮಳೆಯಾಗಿದ್ದು, ಕಳೆದ ಬಾರಿ ಇದೇ ಅವಧಿಯಲ್ಲಿ ೪೪.೯೬ ಇಂಚು ಮಳೆ ಸುರಿದಿತ್ತು. ವೀರಾಜಪೇಟೆ ತಾಲೂಕಿನಲ್ಲಿ ೨.೧೮ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ ೦.೧೩ ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೫೨.೪೮ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೧೮.೪೯ ಇಂಚು ಮಳೆ ಸುರಿದಿತ್ತು. ಪೊನ್ನಂಪೇಟೆ ತಾಲೂಕಿನಲ್ಲಿ ೩.೫೪ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ ೦.೧೬ ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೫೦.೭೫ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೧೫.೯೨ ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ೪.೩೩ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ ೦.೪೯ ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೪೯.೮೨ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೧೯.೮೨ ಇಂಚು ಮಳೆಯಾಗಿತ್ತು. ಕುಶಾಲನಗರ ತಾಲೂಕಿನಲ್ಲಿ ೧.೫೭ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ ೦.೨೪ ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೩೫.೨೫ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೧೭.೮೯ ಇಂಚು ಮಳೆಯಾಗಿತ್ತು.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ ೯.೨೧ ಇಂಚು ಮಳೆ ಸುರಿದಿದೆ. ಮಡಿಕೇರಿ ಹೋಬಳಿಗೆ ೪.೧ ಇಂಚು, ನಾಪೋಕ್ಲುವಿಗೆ ೩.೦೩ ಇಂಚು, ಸಂಪಾಜೆಗೆ ೨.೫೩ ಇಂಚು, ಭಾಗಮಂಡಲಕ್ಕೆ ೫.೯೦ ಇಂಚು, ವೀರಾಜಪೇಟೆಗೆ ೨.೪೦ ಇಂಚು, ಅಮ್ಮತ್ತಿಗೆ ೧.೯೬ ಇಂಚು, ಹುದಿಕೇರಿಗೆ ೪.೯ ಇಂಚು, ಶ್ರೀಮಂಗಲಕ್ಕೆ ೪.೭೬ ಇಂಚು, ಪೊನ್ನಂಪೇಟೆಗೆ ೩.೩೪ ಇಂಚು, ಬಾಳೆಲೆಗೆ ೧.೯೭ ಇಂಚು, ಸೋಮವಾರಪೇಟೆಗೆ ೪.೨೫ ಇಂಚು, ಶನಿವಾರಸಂತೆಗೆ ೨.೧೬ ಇಂಚು, ಕೊಡ್ಲಿಪೇಟೆಗೆ ೧.೬೯ ಇಂಚು, ಕುಶಾಲನಗರಕ್ಕೆ ೦.೭೭ ಇಂಚು, ಸುಂಟಿಕೊಪ್ಪಕ್ಕೆ ೨.೩೬ ಇಂಚು ಮಳೆ ಸುರಿದಿದೆ.
ಕುಶಾಲನಗರ ವ್ಯಾಪ್ತಿಯಲ್ಲಿ ತಗ್ಗು ಪ್ರದೇಶಗಳು ಜಲಾವೃತ
ಕುಶಾಲನಗರ: ಬುಧವಾರ ಕುಶಾಲನಗರ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣದ ನಡುವೆ ಮಳೆ ಪ್ರಮಾಣ ಬಹುತೇಕ ಕಡಿಮೆಯಾಗಿತ್ತು.
ಕಾವೇರಿ ಜಲಾನಯನ ಪ್ರದೇಶಗಳಾದ ಭಾಗಮಂಡಲ, ನಾಪೋಕ್ಲು, ಮೂರ್ನಾಡು ವ್ಯಾಪ್ತಿಯಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ತುಂಬಿ ಹರಿಯುವ ಮೂಲಕ ಅಪಾಯದ ಮಟ್ಟ ಮೀರಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದ ದೃಶ್ಯ ಗೋಚರಿಸಿತು.
ಕುಶಾಲನಗರ ಕೊಪ್ಪ ಸೇತುವೆಯ ಬಳಿ ಕಾವೇರಿ ನದಿ ನೀರು ೭ ಮೀಟರ್ ಎತ್ತರಕ್ಕೆ ಹರಿಯುತ್ತಿದ್ದು, ನದಿ ತಟದ ಎರಡು ಭಾಗಗಳ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.
(ಮೊದಲ ಪುಟದಿಂದ) ಹಾರಂಗಿ ಜಲಾಶಯದಿಂದ ೧೦,೦೦೦ ಕ್ಯೂಸೆಕ್ಸ್ ಪ್ರಮಾಣದ ಹೆಚ್ಚುವರಿ ಹಾರಂಗಿ ಜಲಾಶಯ ದಿಂದ ೧೦,೦೦೦ ಕ್ಯೂಸೆಕ್ಸ್ ಪ್ರಮಾಣದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ತಿಳಿಸಿರುವ ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಬಿ ಜೆ ಪುಟ್ಟಸ್ವಾಮಿ, ಕಾವೇರಿ ಮತ್ತು ಹಾರಂಗಿ ಜಲಾಶಯ ಸೇರಿದಂತೆ ಕಣಿವೆ ಬಳಿ ಕಾವೇರಿ ನದಿಯಲ್ಲಿ ಒಟ್ಟು ಸುಮಾರು ೪೫ ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ನದಿಯಲ್ಲಿ ಹರಿಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕುಶಾಲನಗರ ವ್ಯಾಪ್ತಿಯಲ್ಲಿ ನದಿ ತಟದಲ್ಲಿರುವ ತಗ್ಗು ಪ್ರದೇಶದ ಹೊಲ ಗದ್ದೆಗಳ ಮೇಲೆ ನಾಲ್ಕಸಿದ್ದಾಪುರ: ಅಮ್ಮತ್ತಿ ಹೋಬಳಿ, ಚೆನ್ನನಕೋಟೆ ಗ್ರಾಮದ ಆನಂದ ಎಂಬವರ ವಾಸದ ಮನೆಯ ಹಿಂಬದಿಯ ಗೋಡೆ ನಿನ್ನೆ ರಾತ್ರಿ ಸುರಿದ ಮಳೆಗೆ ಕುಸಿದು ಮನೆಗೆ ಭಾಗಶಃ ಹಾನಿಯಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಚೆಯ್ಯAಡಾಣೆ: ಸ್ಥಳೀಯ ಚೇಲಾವರ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಬೃಹತ್ ಗಾತ್ರದ ಮರವೊಂದು ಭಾರೀ ಗಾಳಿ - ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ನಂತರ ಗ್ರಾಮಸ್ಥರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕುಶಾಲನಗರ: ಹೆಚ್ಚಿನ ಮಳೆಯಿಂದ ಪೊನ್ನಂಪೇಟೆ ತಾಲೂಕಿನ ಕಾನೂರು- ಕುಟ್ಟ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು, ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗೋಣಿಕೊಪ್ಪ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದರು.ರಿಂದ ಐದು ಅಡಿಗಳಷ್ಟು ನೀರು ನಿಂತಿದ್ದು ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆ ಮುಂದುವರಿದಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳು ಸೇರಿದಂತೆ ಕೊಪ್ಪ ಗ್ರಾಮ ವ್ಯಾಪ್ತಿಯ ತಗ್ಗು ಪ್ರದೇಶದ ಮನೆಗಳು ಜಲಾವೃತಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಬುಧವಾರ ಸರಕಾರಿ ರಜಾ ದಿನವಾಗಿದ್ದರೂ ಕುಶಾಲನಗರ ಪುರಸಭೆ, ಹಾರಂಗಿ ಅಣೆಕಟ್ಟು ಅಧಿಕಾರಿಗಳು ಮತ್ತು ತಾಲೂಕು ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಾಗರಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇನ್ನೊಂದೆಡೆ ನದಿ ತಟದ ನಿವಾಸಿಗಳಿಗೆ ಈಗಾಗಲೇ ಪ್ರವಾಹ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದ್ದು ಸಾರ್ವಜನಿಕವಾಗಿ ಮೈಕ್ ಮೂಲಕ ಎಚ್ಚರಿಕೆ ನೀಡುತ್ತಿದ್ದ ದೃಶ್ಯವೂ ಕಂಡು ಬಂತು.ಮುಖ್ಯ ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿದ್ದು ಬಹುತೇಕ ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಯಿತು. ಬೆಳಿಗ್ಗೆ ಬೆಂಗಳೂರಿನತ್ತ ತೆರಳುವ ಬಸ್‌ಗಳು ಕೂಡ ನಿಗದಿತ ಸಮಯದಲ್ಲಿ ಹೊರಡಲು ಸಾಧ್ಯವಾಗಲಿಲ್ಲ.
ಸಮೀಪದ ಕುಂದ ರಸ್ತೆಯ ಮಾರ್ಗವಾಗಿ ವಾಹನಗಳು ಸಂಚಾರ ಮಾಡಿದವು, ಬಸ್‌ಗಳು ಕುಂದ, ಪೊನ್ನಂಪೇಟೆ ಮಾರ್ಗವಾಗಿ ಗೋಣಿಕೊಪ್ಪ ನಗರ ಮೂಲಕ ಪ್ರವೇಶಿಸಿದವು. ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಳೆಯ ನಡುವೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೆರಳಿ ಸ್ಥಳೀಯರ ಸಹಕಾರದೊಂದಿಗೆ ಬೆಳಿಗ್ಗೆ ೮ ಗಂಟೆಯ ಸುಮಾರಿಗೆ ರಸ್ತೆಯಲ್ಲಿದ್ದ ಮರವನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು. ವೀರಾಜಪೇಟೆಗೆ ತೆರಳುವ ವಾಹನಗಳು ಅಮ್ಮತ್ತಿ ಮಾರ್ಗವಾಗಿ ಕೆಲಕಾಲ ಸಂಚಾರ ಮಾಡಿದವು.ಕುಶಾಲನಗರ: ಹೆಚ್ಚಿನ ಮಳೆಯಿಂದ ಪೊನ್ನಂಪೇಟೆ ತಾಲೂಕಿನ ಕಾನೂರು- ಕುಟ್ಟ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು, ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗೋಣಿಕೊಪ್ಪ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದರು.ಗೋಣಿಕೊಪ್ಪಲು: ಮಳೆಯ ರಭಸಕ್ಕೆ ವಾಸದ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು, ಮನೆಯಲಿದ್ದ ಸಾಮಗ್ರಿಗಳಿಗೆÀ ಹಾನಿಯಾಗಿದೆ. ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ರೇಷ್ಮೆಯ ಹೊಸಕೆರೆ ಹಾಡಿಯ ಪರಿಶಿಷ್ಟ ವರ್ಗದ ಪಿ.ಸಿ.ಮುತ್ತು ಎಂಬವರಿಗೆ ಸೇರಿದ ವಾಸದ ಮನೆಯ ಮೇಲ್ಛಾವಣಿ ಕುಸಿದು ಅಪಾರ ನಷ್ಟ ಸಂಭವಿಸಿದೆ. ಸುದ್ದಿ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಚೆಯ್ಯಂಡಾಣೆ: ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆ ಎಂಬಲ್ಲಿ ೪ ಅಡಿಯಷ್ಟು ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.
ಕುಶಾಲನಗರ : ಕುಶಾಲನಗರ ಸಮೀಪ ಮುಳ್ಳುಸೋಗೆ ಗ್ರಾಮದಲ್ಲಿ ಸಂಪರ್ಕ ರಸ್ತೆಯೊಂದು ಕೆಸರಿನಿಂದ ತುಂಬಿದ್ದು ಜನರ ಓಡಾಟಕ್ಕೆ ಭಾರೀ ಅನಾನುಕೂಲ ಉಂಟಾಗಿದೆ. ಮುಳ್ಳುಸೋಗೆ ಗ್ರಾಮದಿಂದ ತಪೋವನ ಮತ್ತು ಕಾವೇರಿ ನದಿ ಕಡೆಗೆ ತೆರಳುವ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಡಾಂಬರೀಕರಣವಾಗಿರುವ ರಸ್ತೆಯನ್ನು ಹುಡುಕುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಸಮೀಪದ ಕುವೆಂಪು ಬಡಾವಣೆಯಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೆ ಸಾಮಗ್ರಿಗಳನ್ನು ಸಾಗಿಸುವ ಬೃಹತ್ ಗಾತ್ರದ ವಾಹನಗಳು ಸಂಚರಿಸಿ ಇಡೀ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ ಎಂದು ಮುಳ್ಳುಸೋಗೆ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಮಣಿ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿAದ ಇದೇ ರೀತಿಯ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರಕ್ಕೆ ತುಂಬಾ ಸಮಸ್ಯೆ ಉಂಟಾಗಿದೆ. ಸಮೀಪದಲ್ಲಿ ತಪೋವನ ಸಮುದಾಯ ಕೇಂದ್ರಕ್ಕೆ ತೆರಳಲು ಸಮಸ್ಯೆ ಉಂಟಾಗುವುದರ ನಡುವೆ ದಿನನಿತ್ಯ ಕಾವೇರಿ ನದಿ ತಟಕ್ಕೆ ತೆರಳುವ ಜನರಿಗೆ ಕೂಡ ಓಡಾಟಕ್ಕೆ ಅನಾನುಕೂಲ ಉಂಟಾಗಿದೆ ಎಂದು ಮಣಿ ಅವರು ದೂರಿದ್ದು, ಕೂಡಲೇ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ಕುಶಾಲನಗರ : ಕುಶಾಲನಗರ ಸಮೀಪ ಮುಳ್ಳುಸೋಗೆ ಗ್ರಾಮದಲ್ಲಿ ಸಂಪರ್ಕ ರಸ್ತೆಯೊಂದು ಕೆಸರಿನಿಂದ ತುಂಬಿದ್ದು ಜನರ ಓಡಾಟಕ್ಕೆ ಭಾರೀ ಅನಾನುಕೂಲ ಉಂಟಾಗಿದೆ. ಮುಳ್ಳುಸೋಗೆ ಗ್ರಾಮದಿಂದ ತಪೋವನ ಮತ್ತು ಕಾವೇರಿ ನದಿ ಕಡೆಗೆ ತೆರಳುವ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಡಾಂಬರೀಕರಣವಾಗಿರುವ ರಸ್ತೆಯನ್ನು ಹುಡುಕುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಸಮೀಪದ ಕುವೆಂಪು ಬಡಾವಣೆಯಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೆ ಸಾಮಗ್ರಿಗಳನ್ನು ಸಾಗಿಸುವ ಬೃಹತ್ ಗಾತ್ರದ ವಾಹನಗಳು ಸಂಚರಿಸಿ ಇಡೀ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ ಎಂದು ಮುಳ್ಳುಸೋಗೆ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಮಣಿ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿAದ ಇದೇ ರೀತಿಯ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರಕ್ಕೆ ತುಂಬಾ ಸಮಸ್ಯೆ ಉಂಟಾಗಿದೆ. ಸಮೀಪದಲ್ಲಿ ತಪೋವನ ಸಮುದಾಯ ಕೇಂದ್ರಕ್ಕೆ ತೆರಳಲು ಸಮಸ್ಯೆ ಉಂಟಾಗುವುದರ ನಡುವೆ ದಿನನಿತ್ಯ ಕಾವೇರಿ ನದಿ ತಟಕ್ಕೆ ತೆರಳುವ ಜನರಿಗೆ ಕೂಡ ಓಡಾಟಕ್ಕೆ ಅನಾನುಕೂಲ ಉಂಟಾಗಿದೆ ಎಂದು ಮಣಿ ಅವರು ದೂರಿದ್ದು, ಕೂಡಲೇ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಸೋಮವಾರಪೇಟೆ : ತಾಲೂಕಿನಾದ್ಯಂತ ಮಳೆ ಮುಂದುವರೆದಿದೆ. ಮಳೆಯೊಂದಿಗೆ ಗಾಳಿಯ ರಭಸವೂ ಅಧಿಕವಾಗುತ್ತಿದ್ದು, ವಾತಾವರಣ ಶೀತಮಯಗೊಂಡಿದೆ. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಂಚಾರ ದುಸ್ತರವಾಗುತ್ತಿದೆ. ತಾಲೂಕಿನ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಹಿತ್ಲುಮಕ್ಕಿಯಲ್ಲಿ ತಡೆಗೋಡೆ ಕುಸಿದು ರಸ್ತೆಗೆ ಸಂಚಕಾರವಾಗಿದ್ದು, ವಾಸದ ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ.
ಹಿತ್ಲುಮಕ್ಕಿ ಗ್ರಾಮದ ಸುಂದರಮ್ಮ ಅವರಿಗೆ ಸೇರಿದ ವಾಸದ ಮನೆಯ ಪಕ್ಕದಲ್ಲೇ ನಿರ್ಮಿಸಿದ್ದ ತಡೆಗೋಡೆ ಭಾರೀ ಮಳೆಗೆ ಕುಸಿದಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಸಣ್ಣ ಪ್ರಮಾಣದಲ್ಲಿ ಕುಸಿದಿದ್ದ ತಡೆಗೋಡೆ ಇಂದು ಭಾಗಶಃ ಕುಸಿತಗೊಂಡಿದ್ದು, ವಾಸದ ಮನೆಗೆ ಅಪಾಯ ತಂದೊಡ್ಡಿದೆ.
ಇದೇ ಸ್ಥಳದಲ್ಲಿ ಶ್ರೀ ಕೊರಗಜ್ಜ ದೇವಾಲಯವೂ ಇದ್ದು, ಪೂಜೆಯ ದಿನಗಳಲ್ಲಿ ನೂರಾರು ಮಂದಿ ಭಾಗವಹಿಸುತ್ತಾರೆ. ಅಬ್ಬೂರುಕಟ್ಟೆಯಿಂದ ಅರೆಯೂರು ಸಂಪರ್ಕಿಸುವ ರಸ್ತೆಯಲ್ಲಿರುವ ತಿರುವಿನಲ್ಲಿ ನಿರ್ಮಿಸಿದ ತಡೆಗೋಡೆ ಮಳೆಗೆ ಕುಸಿದಿದೆ.
ತಡೆಗೋಡೆಯ ಕಲ್ಲುಗಳು ರಸ್ತೆಗೆ ಬಿದ್ದಿದ್ದು, ಸ್ಥಳೀಯರು ಕಲ್ಲನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರಸ್ತೆ, ಮನೆ ಹಾಗೂ ದೇವಾಲಯದ ಹಿತದೃಷ್ಟಿಯಿಂದ ತಕ್ಷಣ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.ಕೂಡಿಗೆ : ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಹೆಬ್ಬಾಲೆ, ಕೂಡಿಗೆ, ತೊರೆನೂರು ಸೇರಿದಂತೆ ಕಾವೇರಿ ನದಿ ನೀರು ನುಗ್ಗುವ ವಿವಿಧ ತಗ್ಗು ಪ್ರದೇಶದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮೀಪದಲ್ಲಿರುವ ತೂಗು ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಹಾರಂಗಿ ಅಣೆಕಟ್ಟೆಗೆ ಭೇಟಿ ನೀಡಿ ನೀರಿನ ಪ್ರಮಾಣದ ಮಾಹಿತಿಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಪಡೆದರು. ಈ ಸಂದರ್ಭ ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಹಾಜರಿದ್ದರು.ಗೋಣಿಕೊಪ್ಪಲು : ಕೊಡಗಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮರಗಳು ಧರೆಗುರುಳುತ್ತಿವೆ. ಇದರಿಂದಾಗಿ ರಸ್ತೆ ಸಂಚಾರ, ವಿದ್ಯುತ್ ವ್ಯತ್ಯಯ ಕಂಡು ಬರುತ್ತಿದೆ. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆ, ಗಾಳಿಗೆ ದ.ಕೊಡಗಿನ ಕಾನೂರು-ಮುಗುಟಗೇರಿ-ಕುಟ್ಟ ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಈ ಭಾಗದ ರಸ್ತೆ ಸಂಚಾರ ಕಡಿತಗೊಂಡಿತ್ತು. ಮರ ಬಿದ್ದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಗೋಣಿಕೊಪ್ಪ ಸೆಸ್ಕಾಂ ಇಂಜಿನಿಯರ್ ಹೇಮಂತ್‌ಕುಮಾರ್ ಹಾಗೂ ತಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮರ ಬಿದ್ದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಕಾರ್ಯಾಚರಣೆಗೆ ತೊಡಕು ಉಂಟಾಗಿತ್ತು. ಮುಂಜಾನೆ ವೇಳೆ ಮರವನ್ನು ಸಂಪೂರ್ಣವಾಗಿ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.
ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಭಾಗದಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಹಿನ್ನೆಲೆಯಲ್ಲಿ ಹೊಸೂರು, ಮಾಯಮುಡಿ, ತಿತಿಮತಿ, ದೇವರಪುರ ಭಾಗದ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ. ನಿರಂತರ ಮಳೆ ಸುರಿಯುತಿದ್ದರೂ ವಾಣಿಜ್ಯ ನಗರ ಗೋಣಿಕೊಪ್ಪ, ಪೊನ್ನಂಪೇಟೆ, ಶ್ರೀಮಂಗಲ, ಪಟ್ಟಣಗಳಲ್ಲಿ ವಿದ್ಯುತ್ ಅಡಚಣೆಯಾಗದಂತೆ ಸೆಸ್ಕಾಂ ಇಲಾಖೆಯು ಕರ್ತವ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಹೆಚ್ಚಾಗಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಚಾರ ಅಸ್ತವ್ಯಸ್ಥಗೊಂಡಿದೆ. ಗೋಣಿಕೊಪ್ಪ ಸೆಸ್ಕ್ ಇಲಾಖೆಗೆ ಹೆಚ್ಚಿನ ಸಿಬ್ಬಂದಿಗಳು ಇದೀಗ ನೇಮಕಗೊಂಡಿದ್ದು ಗ್ರಾಮೀಣ ಪ್ರದೇಶಗಳಿಗೆ ತೆರಳಿ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವ ಕೆಲಸ ಮುಂದುವರೆಸಿದ್ದಾರೆ.ನಾಪೋಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಸಮೀಪದ ಕೊಟ್ಟಮುಡಿ, ಹೊದ್ದೂರು, ಬಲಮುರಿಗಳಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಹೊದ್ದೂರು ಗ್ರಾಮದ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ನಾಲ್ಕು ಅಡಿಗಳಷ್ಟು ಪ್ರವಾಹ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಚೆರಿಯಪರAಬು - ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮೂರ್ನಾಡು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿAದ ವಾಹನ ಸಂಚಾರಕ್ಕೆ ತೊಡಕಾಗಿ ನಾಪೋಕ್ಲು, ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ, ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ಸಂಚರಿಸುತ್ತಿವೆ. ಅಪಾಯಮಟ್ಟ ಮೀರಿ ಪ್ರವಾಹ ಹರಿಯುತ್ತಿರುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದಾರೆ.
ಎಮ್ಮೆಮಾಡು ಹಾಗೂ ಕೈಕಾಡು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಸೇರಿದಂತೆ ಇನ್ನಿತರರ ಗದ್ದೆಗಳಲ್ಲಿದ್ದ (ಅಗೆ) ಭತ್ತದ ಸಸಿ ಸೇರಿದಂತೆ ಬಹುತೇಕ ಗದ್ದೆಗಳು ಜಲವೃತವಾಗಿವೆ.
ಮಳೆ ಬಿರುಸು ಇದೇ ರೀತಿ ಮುಂದುವರೆದರೆ ನಾಪೋಕ್ಲು-ಕೊಟ್ಟಮುಡಿ ಸಂಪರ್ಕ ರಸ್ತೆ ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಎಲ್ಲಾ ಪ್ರಮುಖ ರಸ್ತೆಗಳ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ. ಚೆರಿಯಪರಂಬುವಿನಲ್ಲಿ ಕಾವೇರಿ ನದಿ ದಡದಲ್ಲಿ ವಾಸಿಸುವ ಜನರಿಗೆ ಎರಡು ತಿಂಗಳ ಹಿಂದೆ ಕಂದಾಯ ಇಲಾಖೆ ಮನೆ ತೆರವುಗೊಳಿಸುವಂತೆ ನೋಟಿಸ್ ನೀಡಿ, ಇದೀಗ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಹಲವರು ಸ್ಥಳಾಂತರಗೊAಡಿದ್ದು ಇನ್ನು ಕೆಲವು ನಿವಾಸಿಗಳು ಮಳೆ ಇಳಿಮುಖಗೊಳ್ಳುವುದನ್ನು ಎದುರು ನೋಡುತ್ತಿದ್ದಾರೆ.
ಒಂದು ದಿನದ ಅವಧಿಯಲ್ಲಿ, ಅಯ್ಯಂಗೇರಿ ೪.೮೫ ಇಂಚು, ಕಕ್ಕಬೆ, ನಾಲಡಿಯಲ್ಲಿ ೨೧೭.೦ ಮಿ.ಮೀ. ನಾಪೋಕ್ಲು ೭೦.೨ ಮಿ.ಮೀ ಮಳೆ ಸುರಿದಿದೆ. ಸೋಮವಾರಪೇಟೆ : ತಾಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬೆಟ್ಟ ಅಯ್ಯಪ್ಪ ಕಾಲೋನಿಯಲ್ಲಿ ಬಾಬು ಮತ್ತು ಜಾನಕಿ ಎಂಬುವವರ ಮನೆಗಳ ಮುಂದೆ ಬರೆ ಕುಸಿದಿದೆ.
ಕಳೆದ ವರ್ಷವೇ ಚೌಡ್ಲು ಗ್ರಾಮ ಪಂಚಾಯಿತಿಗೆ ಅಪಾಯದ ಮುನ್ಸೂಚನೆ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಪ್ರಸಕ್ತ ಸಾಲಿನ ಮಳೆಯಿಂದಾಗಿ ಬರೆ ಸಂಪೂರ್ಣ ಕುಸಿಯುವ ಹಂತದಲ್ಲಿದ್ದು, ವಾಸದ ಮನೆಗೆ ಅಪಾಯ ಎದುರಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆ ಪಟ್ಟಣಕ್ಕೆ ೧೦೮.೨ ಮಿಲಿ ಮೀಟರ್, ಶನಿವಾರಸಂತೆ ೫೫ ಮಿಲಿ ಮೀಟರ್, ಸುಂಟಿಕೊಪ್ಪ ೬೦ ಮಿ.ಮೀಟರ್, ಕೊಡ್ಲಿಪೇಟೆ ೪೩ ಮಿ.ಮೀ. ಹಾಗೂ ಶಾಂತಳ್ಳಿ ಹೋಬಳಿಗೆ ೨೩೪ ಮಿಲಿಮೀಟರ್ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.