ನಾಪೋಕ್ಲು, ಜು. ೧೭: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ನೆಲಜಿ ಗ್ರಾಮದ ಶ್ರೀ ಇಗ್ಗುತಪ್ಪ ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ರಾತ್ರಿ ಬೀಗ ಒಡೆದು ದೋಚಿದ್ದಾರೆ. ಈಚೆಗೆ ಗ್ರಾಮದ ಶ್ರೀ ಭಗವತಿ ದೇವಾಲಯವನ್ನು ಹಿಂಬಾಗಿಲಿನಿAದ ಪ್ರವೇಶಿಸಿದ್ದ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದರು.
ಘಟನಾ ಸ್ಥಳಕ್ಕೆ ಶ್ವಾನ ಹಾಗೂ ಬೆರಳಚ್ಚು ತಜ್ಞರು, ಪೊಲೀಸ್ ಠಾಣಾ ಅಧಿಕಾರಿ ಮಂಜುನಾಥ್, ಕ್ರೆöÊಂ ಪಿಎಸ್ಐ ಶ್ರೀಧರ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕಾನೂನಿನ ಕ್ರಮ ಕೈಗೊಂಡಿದ್ದಾರೆ
ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ಹೆಚ್ಚುತಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಬಲ್ಲಮಾವಟಿ, ಪೇರೂರು, ದೊಡ್ಡಪುಲಿಕೋಟು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಅರ್ಚಕರು ಸೇರಿ ದೇವಾಲಯದ ಹುಂಡಿಯಲ್ಲಿ ಶೇಖರಣೆಯಾಗಿರುವ ಹಣವನ್ನು ತೆಗೆಯುವಂತೆ ಪೊಲೀಸ್ ಇಲಾಖೆಯ ಪ್ರಕಟಣೆ ಕೋರಿದೆ.