ಮಡಿಕೇರಿ, ಜು. ೧೭: ಮಡಿಕೇರಿ ಗ್ರಾಮಾಂತರ ಮಂಡಲ ವ್ಯಾಪ್ತಿಯ ಕಕ್ಕಬ್ಬೆ ಬಿಜೆಪಿ ಶಕ್ತಿಕೇಂದ್ರದ ಮರಂದೋಡ ಬೂತ್‌ನ ಬಿಜೆಪಿ ಕಾರ್ಯಕರ್ತರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ತಾ. ೧೬ರಂದು ಕಕ್ಕಬ್ಬೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು.

ಈ ಸಭೆಯಲ್ಲಿ ಶಕ್ತಿಕೇಂದ್ರ ಪ್ರಮುಖ್‌ರಾದ ಸುನಂದ ಅವರು ಮಾತನಾಡಿ ಚೋಯಮಾಡಂಡ ಐನ್‌ಮನೆಗೆ ಹೋಗುವ ಸಂಪರ್ಕ ರಸ್ತೆಯ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಮನವಿ ಪತ್ರವನ್ನು ನೀಡಲು ನಮ್ಮ ಕಾರ್ಯಕರ್ತರು ಮತ್ತು ಕುಟುಂಬಸ್ಥರು ಕ್ಷೇತ್ರದ ಶಾಸಕರ ಗೃಹ ಕಚೇರಿಗೆ ಹೋದಂತಹ ಸಂದರ್ಭದಲ್ಲಿ ಏಕಾಏಕಿ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲುಗಳನ್ನು ಹಾಕಿ ಈ ಫೋಟೋಗಳನ್ನು ತೆಗೆದು ಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಸಾರ್ವಜನಿಕರು ಕಚೇರಿ ಭಾಗದಲ್ಲಿ ಇದ್ದುದರಿಂದ ಶಾಸಕರಿಗೆ ಮತ್ತು ವೇದಿಕೆಯಲ್ಲಿ ಇದ್ದವರಿಗೆ ಮುಜುಗರವಾಗಬಾರದೆಂಬ ಉದ್ದೇಶದಿಂದ ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಶಾಲನ್ನು ಹಾಕಿಸಿಕೊಂಡಿರುತ್ತಾರೆ ಮತ್ತು ಅವರು ನಮ್ಮ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂಬುದು ಒಂದು ಸುಳ್ಳು ವದಂತಿ ಎಂದು ಈ ಸಭೆಯಲ್ಲಿ ಉಪಸ್ಥಿತರಿದ್ದ ಕಕ್ಕಬ್ಬೆ ಭಾಗದ ಪಕ್ಷದ ಪ್ರಮುಖರಿಗೆ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಮಡಿಕೇರಿ ಗ್ರಾಮಾಂತರ ಮಂಡಲ ಯುವಮೋರ್ಚಾ ಅಧ್ಯಕ್ಷ ಚೇತನ್ ಬಂಗೇರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಯಾಗಿರುವ ಶಾಸಕರು ಕೇವಲ ಅವರ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಶಾಸಕರಲ್ಲ; ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ಮತದಾರರಿಗೆ ಶಾಸಕರಾಗಿರುತ್ತಾರೆ. ಇದೇ ಮನೋಭಾವದಲ್ಲಿ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರು ಶಾಸಕರ ಗೃಹ ಕಚೇರಿಗೆ ಹೋದಂತಹ ಸಂದರ್ಭದಲ್ಲಿ ಮನವಿಪತ್ರವನ್ನು ತಡವಾಗಿ ಸ್ವೀಕರಿಸಿದಲ್ಲದೆ, ಈ ರೀತಿಯಾಗಿ ಪಕ್ಷ ಸೇರ್ಪಡೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಇರುವಂತದ್ದು ಸರಿಯಲ್ಲ ಎಂದರು. ಸುಮಾರು ೫೫೦ ಮತದಾರರು ಇರುವಂತಹ ಈ ಮರಂದೋಡ ಬೂತ್‌ಗೆ ಸಂಬAಧಪಟ್ಟAತೆ, ಇತ್ತೀಚೆಗೆ ನಡೆದಂತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಯದುವೀರ್ ೪೦೯ ಮತ, ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಕೇವಲ ೧೧೧ ಮತಗಳನ್ನು ಪಡೆದಿರುತ್ತಾರೆ. ಇಂತಹ ಸುಭದ್ರವಾದ ಬಿಜೆಪಿ ಮತದಾರರಿರುವ ಬೂತ್‌ನಲ್ಲಿ ಈ ರೀತಿಯಾಗಿ ತಮ್ಮ ಕುಚೇಷ್ಟೆಗಳನ್ನು ಮಾಡಿ ಬಿಜೆಪಿಯ ಮತಗಳನ್ನು ತಮ್ಮೆಡೆಗೆ ಸೆಳೆಯುವಂತ ಉದ್ದೇಶದಿಂದ ಪಕ್ಷ ಸೇರ್ಪಡೆಯ ಸುಳ್ಳು ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಶಾಸಕರು ಮುಂದಾಗಿದ್ದಾರೆ ಎಂದರು.

ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪೊನ್ನZÃಟ್ಟಿರ ವಿನೋದ್ ಮಾತನಾಡಿ, ಜನ ಸಾಮಾನ್ಯರು ಶಾಸಕರ ಭೇಟಿಗೆ ಹೋದಂತಹ ಸಂದರ್ಭದಲ್ಲಿ ಶಾಸಕರು ಕೇವಲ ಅವರ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿದ್ದಾರೆಯೇ ಎಂದು ಪ್ರಶ್ನಿಸಿದರು. ಇಂತಹ ಕುತಂತ್ರಗಳನ್ನು ಬದಿಗಿಟ್ಟು ಅಭಿವೃದ್ಧಿ ಕಡೆಗೆ ತಮ್ಮ ಗಮನವನ್ನು ಹರಿಸಲಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕಕ್ಕಬ್ಬೆ ಭಾಗದ ಪಕ್ಷದ ಪ್ರಮುಖರಾದ ಚಂಡೀರ ಜಗದೀಶ್, ಮಡಿಕೇರಿ ಗ್ರಾಮಾಂತರ ಮಂಡಲ ಯುವ ಮೋರ್ಚಾದ ಉಪಾಧ್ಯಕ್ಷ ಮೇರಿಯಂಡ ಆದೇಶ, ಪದಾಧಿಕಾರಿಗಳಾದ ಚಂಡೀರ ರೋಷನ್, ಪಕ್ಷದ ಹಿರಿಯರು ಮತ್ತು ಗ್ರಾಮಸ್ಥರುಗಳಾದ ಮುಕ್ಕಾಟಿರ ದೇವೇಂದ್ರ, ಮುಕ್ಕಾಟಿರ ರಮೇಶ್, ಕಲಿಯಂಡ ಯತೀಶ್, ಚರವಂಡ ಕರುಂಬಯ್ಯ, ರಾಬಿನ್ ಬೋಪಣ್ಣ, ಸಂಜು ಚಂಗಪ್ಪ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.