ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿದ್ದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜು ಮಾದಾಪುರ ಇಲ್ಲಿನ ನಿವೃತ್ತ ಕನ್ನಡ ಅಧ್ಯಾಪಕ ಬಿ.ಸಿ. ಶಂಕರಯ್ಯ ಚುನಾವಣೆಯ ಮಹತ್ವವನ್ನು ವಿದ್ಯಾರ್ಥಿ ಜೀವನದಲ್ಲೇ ತಿಳಿದುಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಕೆ. ತಿಲಕ ಮಾತನಾಡಿ, ಮಕ್ಕಳು ಇಂತಹ ಸಂಘಗಳ ಶಿಸ್ತು-ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದರು.
ನAತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಾಪಕ ವೃಂದದವರು ಹಾಗೂ ಮಕ್ಕಳು ಹಾಜರಿದ್ದರು. ಸಿಹಿ ಹಂಚುವುದರೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.ವೀರಾಜಪೇಟೆ: ಶಿಕ್ಷಣ ಪಡೆದ ವ್ಯಕ್ತಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. ಈ ನಿಟ್ಟನಲ್ಲಿ ಸರ್ವರೂ ಪ್ರಯತ್ನಿಸಬೇಕು ಎಂದು ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನಸೇವಾ ಟ್ರಸ್ಟ್ ವೀರಾಜಪೇಟೆ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಗರದ ಪಂಜರ್‌ಪೇಟೆಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ, ವೃತ್ತ ನಿರೀಕ್ಷಕ ಶಿವರುದ್ರ, ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ ಎಂದರು.
ಜನಸೇವಾ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಎಂ.ಇ. ಶರೀಫ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯು ೨೦೧೭ ರಲ್ಲಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. ಅಲ್ಲದೆ ಸಾಮಾಜಿಕ ಕಳಕಳಿಯೋಂದಿಗೆ ಆರೋಗ್ಯ, ಸಾಮಾಜಿಕ, ಶಿಕ್ಷಣ ಮತ್ತು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಸಂಸ್ಥೆಯು ಜಾತಿ, ಮತ, ಭೇದವಿಲ್ಲದೆ ಎಲ್ಲಾ ವರ್ಗದ ಬಡ ವಿದ್ಯಾಥಿಗಳನ್ನು ಗುರುತಿಸಿ ಶಿಕ್ಷಣದ ಮಹತ್ವ ಅರಿತು ಪ್ರೋತ್ಸಾಹ ಧನ ಸಹಾಯವನ್ನು ನೀಡುತ್ತ ಬಂದಿದೆ. ಸಂಸ್ಥೆಯ ಏಳಿಗೆಗಾಗಿ ಮತ್ತು ಜನಪರ ಕಾರ್ಯಕ್ರಮಗಳಿಗಾಗಿ ದಾನಿಗಳು ಉದಾರ ಮನಸ್ಸಿನಿಂದ ದೇಣಿಗೆಯನ್ನು ನೀಡುತ್ತಿದ್ದಾರೆ. ದೇಣಿಗೆಯ ಮೊತ್ತವನ್ನು ಅನುಸರಿಸಿಕೊಂಡು ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ವೀರಾಜಪೇಟೆ ಪುರಸಭೆ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಡಿ.ಪಿ. ರಾಜೇಶ್ ಪದ್ಮನಾಭ ಅವರು ಮಾತನಾಡಿದರು.
ವೇದಿಕೆಯಲ್ಲಿ ವಕೀಲೆ ರಿಹಾನ, ಸಂಸ್ಥೆಯ ಉಪಾಧ್ಯಕ್ಷ ರಹೀಂ, ಸಮಾಜ ಸೇವಕರಾದ ಅಖೀಲ್, ರಜಾಕ್, ಉದ್ಯಮಿಗಳಾದ ಅಲ್ತಾಫ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು ೪೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಶಭರೀಶ್ ಅವರುಗಳನ್ನು ಸಂಸ್ಥೆಯ ವತಿಯಿಂದ ಗಣ್ಯರ ಸಮ್ಮುಖದಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಜನಸೇವಾ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಪೋಷಕರು, ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆಯ ಪ್ರಗತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬAತೆ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ನಾಯಕರಾಗುವ ಗುಣಗಳಿವೆ ಎಂದು ನುಡಿದರು.
ಪ್ರಗತಿ ಶಾಲೆಯ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನೂತನ ಸಾಲಿನ ನಾಯಕರಿಗೆ ಜವಾಬ್ದಾರಿ ನೀಡುವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ಸಂಘದಲ್ಲಿ ಶಾಲಾ ನಾಯಕನಾಗಿ ೯ನೇ ತರಗತಿ ಉಮರ ಸುಲ್ತಾನ್, ಶಾಲಾ ಉಪನಾಯಕಿಯಾಗಿ ೯ನೇ ತರಗತಿ ದಿಯಾ ಕೆ.ಎ., vಕ್ರೀಡಾ ನಾಯಕನಾಗಿ ೯ನೇ ತರಗತಿಯ ಬಿ.ಜಿ. ಶಿಶಿರ ಸುಗಂಧ್ ಹಾಗೂ ಉಪ ಕ್ರೀಡಾ ನಾಯಕಿಯಾಗಿ ೮ನೇ ತರಗತಿಯ ಧನ್ವಿ ಬಿ.ಆರ್. ಹಾಗೂ ಸಾಂಸ್ಕೃತಿಕ ಮಂತ್ರಿಯಾಗಿ ೮ನೇ ತರಗತಿಯ ಫರ್ಜಿನ ರೋಷನ್ ಎಂ.ಕೆ., ಉಪ ಸಾಂಸ್ಕೃತಿಕ ಮಂತ್ರಿಯಾಗಿ ೮ನೇ ತರಗತಿಯ ಲಿಖಿತ ವಿ.ಎ. ಹಾಗೂ ಶುಚಿತ್ವದ ನಾಯಕನಾಗಿ ೯ನೇ ತರಗತಿಯ ಮೊಹಮ್ಮದ್ ರುಮಾನ್, ಉಪ ಶುಚಿತ್ವದ ಮಂತ್ರಿಯಾಗಿ ೮ನೇ ತರಗತಿಯ ಆರ್ಯ ಎಂ.ಜೆ. ಆಯ್ಕೆಯಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ವಿಮಲ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರತೀಮ, ಆಡಳಿತ ಮಂಡಳಿಯ ಮುಖ್ಯಸ್ಥೆ ಸುಷ್ಮಾ ತಿಮ್ಮಯ್ಯ, ಶಿಕ್ಷಕರು ಭಾಗವಹಿಸಿದ್ದರು.ಕೂಡಿಗೆ: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆ ನಡೆಯಿತು.
ಚುನಾವಣಾ ದಿನದಂದು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಶಾಲಾ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಮತದಾನ ಚೀಟಿ ಪಡೆದು ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಚುನಾವಣಾ ಮೇಲಾಧಿಕಾರಿಯಾಗಿ ಶಾಲಾ ಪ್ರಾಂಶುಪಾಲ ಕೆ. ಪ್ರಕಾಶ್ ಮಾತನಾಡಿ, ಇಲಾಖೆ ನಿಯಮದಂತೆ ವಿದ್ಯಾರ್ಥಿಗಳ ಸಂಸತ್ ರಚನೆ ನಡೆಯಲಿದೆ. ಸಂವಿಧಾನ ಆಶಯದಂತೆ ಚುನಾವಣೆ ಹೇಗೆ ಮತ್ತು ಏಕೆ ನಡೆಯುತ್ತದೆ. ಆಯ್ಕೆಯಾದ ಸದಸ್ಯರು ಮಾಡಬೇಕಾದ ಕರ್ತವ್ಯ ಹಕ್ಕು ಬಾಧ್ಯತೆಗಳ ಬಗ್ಗೆ ಶಾಲೆಯಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ ಹಾಗೂ ಚುನಾವಣೆಯು ಪ್ರಜಾಪ್ರಭುತ್ವದ ವ್ಯವಸ್ಥೆಯ ಮಹತ್ವಪೂರ್ಣ ಅಂಶವಾಗಿದೆ. ಹಾಗಾಗಿ ಉತ್ತಮ ಅಭ್ಯರ್ಥಿಗಳಿಗೆ ತಮ್ಮ ಮತವನ್ನು ಚಲಾಯಿಸುವುದರ ಜೊತೆಗೆ ಗೋಪ್ಯತೆ ನಿಯಮಗಳನ್ನು ಕಾಯ್ದು ಕೊಳ್ಳುವಂತೆ ತಿಳಿಸಿದರು.
ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಶಿಕ್ಷಕ ನಾಗೇಂದ್ರ ಶಾಲೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಹರಿಸಿ ಹಾಗೂ ಸಮಸ್ಯೆ ಪರಿಹಾರಕ್ಕೆ ಮುನ್ನುಡಿಯಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು. ಚುನಾವಣಾ ಸಹಾಯಕರಾಗಿ ಮೀನಾ ಕಾರ್ಯನಿರ್ವಹಿಸಿದರು. ಇದರೊಂದಿಗೆ ಶಾಲಾ ಶಿಕ್ಷಕ ದಿನೇಶ್ ಆಚಾರಿ, ಜಗದೀಶ್, ಮಂಜು, ಚಿದಂಬರ, ಹರಿಣಾಕ್ಷಿ, ಆಶಿಫ್, ತ್ರಿವೇಣಿ, ಕವಿತಾ, ಪಾರ್ವತಿ ಹಾಜರಿದ್ದರು.ಐಗೂರು: ಅರಣ್ಯ ಸಂಪತ್ತು ನಮ್ಮ ದೇಶದ ಸಂಪತ್ತು. ಅರಣ್ಯಗಳಿಂದ ಉತ್ತಮ ಮಳೆಯಾದರೆ ದೇಶದಲ್ಲಿ ಸಮೃದ್ಧಿಯ ಬೆಳೆ ಬೆಳೆಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ವನಮಹೋತ್ಸವದ ದಿನದಂದು ನೆಟ್ಟ ಗಿಡಗಳನ್ನು ಕೊನೆಯವರೆಗೂ ಕಾಪಾಡಿಕೊಂಡು ಬರಬೇಕೆಂದು ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಎಂ. ಕರೆ ನೀಡಿದರು.
ಮಾದಾಪುರ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದ ಕುರಿತು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮಾದಾಪುರ ಗ್ರಾ.ಪಂ. ಅಧ್ಯಕ್ಷ ಬಿದ್ದಪ್ಪ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಗಾನಶ್ರೀ, ಗಿಡಗಳನ್ನು ನೆಟ್ಟ ನಂತರ ಅವುಗಳ ಸುತ್ತಲೂ ಬೆಳೆದ ಗಿಡ ಗಂಟಿ, ಕಾಡುಗಳನ್ನು ಸ್ವಚ್ಛಗೊಳಿಸಿ ಗಿಡವು ಮರವಾಗಿ ಬೆಳೆಯಲು ಸಹಕಾರ ನೀಡಬೇಕೆಂದರು.
ವನ ಮಹೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ಹಣ್ಣು ಬಿಡುವ ಗಿಡಗಳನ್ನು ನೆಡಲಾಯಿತು. ಸಹ ಶಿಕ್ಷಕ ಭರತ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾದಾಪುರ ಕಾಂಗ್ರೆಸ್ ವಲಯ ಅಧ್ಯಕ್ಷ ಹರೀಶ್, ಗ್ರಾ.ಪಂ. ಸದಸ್ಯರಾದ ಲತೀಫ್, ರಫೀಕ್, ಪಿಡಿಓ ಬಾಲಕೃಷ್ಣ ರೈ, ಶಾಲಾ ಮುಖ್ಯೋಪಾಧ್ಯಾಯ ಪಾಲಾಕ್ಷ, ಉಪ ವಲಯಾರಣ್ಯಾಧಿಕಾರಿ ಜಗದೀಶ್ ಹಾಗೂ ಶಾಲೆಯ ಸಹ ಶಿಕ್ಷಕರು ಭಾಗವಹಿಸಿದ್ದರು.ಚೆಯ್ಯಂಡಾಣೆ: ವೀರಾಜಪೇಟೆಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯಕ್ಕೆ ವೀರಾಜಪೇಟೆಯ ಪುರಸಭೆ ವತಿಯಿಂದ ಕಂಬಳಿ, ಬೆಡ್‌ಶೀಟ್ ಮತ್ತು ಟ್ರಾö್ಯಕ್ ಸೂಟ್‌ಗಳನ್ನು ವಿತರಿಸಿದರು.
ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕಾAತ್, ಸುಭಾಷ್ ನಗರ ವಾರ್ಡ್ ಸದಸ್ಯರಾದ ಮೊಹಮ್ಮದ್ ರಾಫಿ ಹಾಗೂ ಸುಮಯ್ಯ ಕೆ.ಎಂ. ಉಪಸ್ಥಿತರಿದ್ದರು.