ಮಡಿಕೇರಿ, ಜು. ೧೭: ವೀರಾಜಪೇಟೆಯ ಶ್ರೀ ಕಾವೇರಿ ಆಶ್ರಮ ಟ್ರಸ್ಟ್ನಲ್ಲಿ ತಾ. ೧೮ರಂದು (ಇಂದು) ಏರ್ಪಡಿಸಿರುವ ಖಾವಿಧಾರಿಗಳ ದೀಕ್ಷಾ ಕಾರ್ಯಕ್ರಮವನ್ನು ರದ್ದುಪಡಿಸ ಬೇಕೆಂದು ಉಳ್ಳಿಯಡ ಪೂವಯ್ಯ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಕ್ರಮ ಆಗುತ್ತಿರುವುದನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು. ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಇದ್ದ ಶ್ರೀ ಕಾವೇರಿ ಭಕ್ತ ಜನ ಸಂಘವನ್ನು ಇದೀಗ ಈ ಕಾವೇರಿ ಆಶ್ರಮ ಟ್ರಸ್ಟ್ ಎಂದು ಮಾರ್ಪಡಿಸ ಲಾಗಿದ್ದು ಅದನ್ನು ರದ್ದುಪಡಿಸುವಂತೆ ಆಗ್ರಹಿಸಿದರು. ಸರಳ ಭಕ್ತ ಪಂಥದ ಆಧಾರದಲ್ಲಿ ೧೯೩೯ ರಿಂದ ನಡೆದು ಬಂದAತೆ ಮುಂದೆಯೂ ಮುಕ್ತವಾಗಿ ಸ್ಥಳೀಯ ಧಾರ್ಮಿಕತೆಯಿಂದ ಇಲ್ಲಿ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಸದ್ಯಕ್ಕೆ ಮುಚ್ಚಿ ಹೋಗಿರುವ ಕಾವೇರಿ ಆಶ್ರಮ ಮತ್ತು ಇತರ ಎಲ್ಲಾ ಶಾಖೆಗಳು ಹಿಂದಿನAತೆ ಪುನರ್ ಕಾರ್ಯರಂಭ ಮಾಡಬೇಕು. ಹೊರ ಜಿಲ್ಲೆಯ ಬೇರೆ ಧಾರ್ಮಿಕ ಚಿಂತನೆಯ ಮಠಾಧೀಶರು ಮತ್ತು ಅವರ ಅನುಯಾಯಿಗಳು ಶ್ರೀ ಕಾವೇರಿ ಆಶ್ರಮ ಸಂಸ್ಥೆಯಲ್ಲಿ ಸಂಸ್ಥೆಯ ವ್ಯವಹಾರದಲ್ಲಿ ಹಾಗೂ ಆಡಳಿತದಲ್ಲಿ ಮೂಗು ತೂರಿಸದಂತೆ ನಿರ್ಬಂಧಿಸಬೇಕು ಹಾಗೂ ಕೂಡಲೇ ಸಂಸ್ಥೆಗೆ ಸಮರ್ಥ ಆಡಳಿತ ಅಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೆಲ್ಲಮಕ್ಕಡ ಶಂಭು ಸೋಮಯ್ಯ, ಮಾದಂಡ ಮಾಚಯ್ಯ, ಅಮ್ಮಣಿಚಂಡ ರವಿ ಉತ್ತಪ್ಪ, ವೀರಾಜಪೇಟೆ ಕೊಡವಕೇರಿ ಒಕ್ಕೂಟ ಕಾರ್ಯದರ್ಶಿ ಚಾಚೀರ ಜಗದೀಶ್ ಹಾಜರಿದ್ದರು.