ಸೋಮವಾರಪೇಟೆ, ಜು. ೧೮: ಇನ್ನರ್ ವೀಲ್ ಆಫ್ ಸೋಮ ವಾರಪೇಟೆ ಗೋಲ್ಡ್ನ ನೂತನ ಸಾಲಿನ ಅಧ್ಯಕ್ಷರಾಗಿ ಸಂಗೀತಾ ದಿನೇಶ್ ಅಧಿಕಾರ ಸ್ವೀಕರಿಸಿದರು.

ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸ್ಥಳೀಯ ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕಿ ಪೂರ್ಣಿಮಾ ರವಿ ಅವರು ನೂತನ ಸಾಲಿನ ಅಧ್ಯಕ್ಷೆ ಸಂಗೀತಾ ದಿನೇಶ್ ಮತ್ತು ತಂಡದ ವರಿಗೆ ಪದಗ್ರಹಣ ನೆರವೇರಿಸಿದರು. ನಂತರ ಮಾತನಾಡಿ, ಕಳೆದ ೧೦೧ ವರ್ಷಗಳಿಂದ ಸಂಸ್ಥೆ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿ ಕೊಂಡು ಬರುತ್ತಿದೆ. ಮಳೆ ನೀರು ಸಂಗ್ರಹ, ಶಿಕ್ಷಣ, ಸ್ಯಾನಿಟೇಷನ್, ಆರೋಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸಮಿತಿ ಹಮ್ಮಿಕೊಂಡಿದ್ದು, ಎಲ್ಲ ಸಂಸ್ಥೆಗಳು ಯೋಜನೆಗಳನ್ನು ಈಡೇರಿಸುವ ಜವಾಬ್ದಾರಿ ಹೊಂದಿವೆ ಎಂದರು.

ಇದರೊAದಿಗೆ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವುಗಳಿಗೆ ಮೂಲಭೂತ ಸೌಕರ್ಯ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸದಸ್ಯರನ್ನು ಸಂಸ್ಥೆಗೆ ಸೇರ್ಪಡೆಗೊಳಿಸಿ ಕೊಳ್ಳುವ ಮೂಲಕ ಸಾಮಾಜಿಕ ಕಾರ್ಯ ಮಾಡಬೇಕೆಂದರು.

ನೂತನ ಸಾಲಿನ ಅಧ್ಯಕ್ಷೆ ಸಂಗೀತಾ ದಿನೇಶ್ ಮಾತನಾಡಿ, ಯಾವುದೇ ಕೆಲಸಗಳನ್ನು ಇಷ್ಟಪಟ್ಟು ಮಾಡಿದಲ್ಲಿ ಮಾತ್ರ ಯೋಜನೆಗಳು ಯಶಸ್ವಿಯಾ ಗುವುದು. ಮನುಷ್ಯ ನಿಸ್ವಾರ್ಥ ಸೇವೆ ಮಾಡಿದಲ್ಲಿ ಅವರು ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಂಸ್ಥೆಯ ಯೋಜನೆಗಳನ್ನು ಸಫಲಮಾಡುವುದಾಗಿ ಹೇಳಿದರು. ಕಾರ್ಯದರ್ಶಿ ಸುಮಲತಾ ಪುರು ಷೋತ್ತಮ್, ಐಪಿಪಿ ಸಂಧ್ಯಾ ರಾಣಿ, ಉಪಾಧ್ಯಕ್ಷೆ ತನ್ಮಯಿ ಪ್ರವೀಣ್, ಖಜಾಂಚಿ ಸೌಮ್ಯ ಸತೀಶ್, ಪದಾಧಿಕಾ ರಿಗಳಾದ ಅಮೃತಾ ಕಿರಣ್, ಸವಿತಾ ರಾಜು, ಲತಾ ನಾಗೇಶ್, ಲತಾ ಮಂಜು, ಆಶಾ ಮೋಹನ್ ಅವರುಗಳು ಅಧಿ ಕಾರ ಸ್ವೀಕರಿಸಿದರು. ವೇದಿಕೆಯಲ್ಲಿ ಹಿಂದಿನ ಸಾಲಿನ ಅಧ್ಯಕ್ಷೆ ಸಂಧ್ಯಾರಾಣಿ ಇದ್ದರು. ಇದೇ ಸಂದರ್ಭ ಮೈಸೂರಿನ ಇನ್ನರ್ ವೀಲ್ ಸಂಸ್ಥೆಯ ನಂದಿನಿ ಪ್ರಭು ಮತ್ತು ಸುಮತಿ ಅವರುಗಳನ್ನು ಸನ್ಮಾನಿಸಲಾಯಿತು. ವಿಶೇಷಚೇತನ ವಿದ್ಯಾರ್ಥಿ ಮತ್ತು ಹೃದಯ ರೋಗ ದಿಂದ ಬಳಲುತ್ತಿದ್ದ ವಿದ್ಯಾರ್ಥಿಗೆ ಸಹಾಯಧನ ನೀಡಲಾಯಿತು.