ಕುಶಾಲನಗರ, ಜು. ೧೮ : ೨೦೧೯ರ ಆತಂಕ ಕುಶಾಲನಗರದಲ್ಲಿ ಮತ್ತೆ ಮರುಕಳಿಸುವಂತಿದೆ.
ಜೀವನದಿ ಕಾವೇರಿ ಕುಶಾಲನಗರದಲ್ಲಿ ಉಕ್ಕಿ ಹರಿಯುತ್ತಿದ್ದು, ಕಾವೇರಿ ಸೇತುವೆಯ ಐತಿಹಾಸಿಕ ಸೇತುವೆಯ `ಬಳ್ಳದ ಬಾವಿ'ಗೆ ನೀರು ತಲುಪಲು ಇನ್ನು ಕೇವಲ ಎರಡು ಅಡಿಗಳಷ್ಟೇ ಬಾಕಿ ಉಳಿದಿದೆ.
ನದಿಯ ಎರಡು ಭಾಗಗಳಲ್ಲಿ ತಗ್ಗುಪ್ರದೇಶದ ಹೊಲಗದ್ದೆಗಳು ನೀರಿನಿಂದ ಆವೃತಗೊಂಡಿವೆ.
ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಇದೀಗ ಎಂಟು ಮೀಟರ್ಗಳಷ್ಟು ಎತ್ತರಕ್ಕೆ ಹರಿಯುತ್ತಿದ್ದು ನದಿ ತಟದ ನಿವಾಸಿಗಳು ಆತಂಕಕ್ಕೆ ಈಡಾಗಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೆರಡು ದಿನಗಳ ಕಾಲ ಮಳೆ ಮುಂದುವರೆಯಲಿದ್ದು, ಇದು ಖಚಿತವಾಗಿದ್ದಲ್ಲಿ ಕುಶಾಲನಗರ ಮತ್ತು ಸಮೀಪದ ಕೊಪ್ಪ ವ್ಯಾಪ್ತಿಯ ನೂರಾರು ಮನೆಗಳು ಜಲಾವೃತಗೊಳ್ಳಲಿವೆ.
೨೦೧೮ ರಿಂದ ಮೂರು ವರ್ಷಗಳ ಕಾಲ ಸತತವಾಗಿ ಕುಶಾಲನಗರ ಭಾಗದ ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡು ನಾಗರಿಕರು ತಮ್ಮ ಆಸ್ತಿಪಾಸ್ತಿಯನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಆ ಸಂದರ್ಭ ಅಂದಿನ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್, ಅವರು ಸರ್ಕಾರದ ಮೂಲಕ ನದಿ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಯಾವುದೇ ರೀತಿಯ ಅನಾಹುತ ಮರುಕಳಿಸದೆ ನದಿ ತಟದ ನಾಗರಿಕರು ನಿಟ್ಟುಸಿರು ಬಿಡುವಂತಾಗಿತ್ತು.
ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರು ಹಾರಂಗಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸದAತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಇತ್ತೀಚೆಗೆ ಜಲಾಶಯದಿಂದ ನಿರಂತರ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಕಾಯಕ ಮುಂದುವರಿದಿದೆ.
ಯಾವುದೇ ಹಂತದಲ್ಲಿ ಜಲಾಶಯದಿಂದ ಹೆಚ್ಚುವರಿ ನೀರು ಹರಿಸಿ ಪ್ರವಾಹಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇಲ್ಲ ಎಂದು ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಬಿ ಜೆ ಪುಟ್ಟಸ್ವಾಮಿ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಶಾಸಕರು ಸ್ಥಳೀಯ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿ ನೀರು ಹರಿಸುವ ಸಂದರ್ಭ ಬಡಾವಣೆಗಳಿಗೆ ನೀರು ನುಗ್ಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಾರಂಗಿ ಜಲಾಶಯದಲ್ಲಿ ಗರಿಷ್ಠ ನೀರಿನ ಸಂಗ್ರಹ ಮಟ್ಟ ೨೮೫೯ ಅಡಿಗಳಾಗಿದ್ದು ಇದೀಗ ಸುಮಾರು ೬ ಅಡಿಗಳಷ್ಟು ಅಂತರ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಅಣೆಕಟ್ಟು ಅಧಿಕಾರಿ ಬಿ.ಜೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ಈ ಸಾಲಿನಲ್ಲಿ ಹಾರಂಗಿ ಅಣೆಕಟ್ಟೆಗೆ ಹೆಚ್ಚು ಪ್ರಮಾಣದ ಒಳ ಹರಿವು ಬರುತ್ತಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಕಾವೇರಿ ನದಿಯಲ್ಲಿ ಮಾತ್ರ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದು ಕಂಡು ಬಂದಿದೆ.
ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಲ್ಲಿ ಪ್ರವಾಹ ತಡೆಗಟ್ಟಲು ೫ ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಯೋಜನೆ ನಡೆಯುತ್ತಿದ್ದು ಕಾಮಗಾರಿ ವಿಳಂಬದಿAದ ಇದು ಇನ್ನೂ ಅಪೂರ್ಣಗೊಂಡಿದೆ.
ಬಡಾವಣೆಯಲ್ಲಿ ಮೇಲ್ಭಾಗದಿಂದ ಹರಿದು ಬರುತ್ತಿರುವ ನೀರು ಕೂಡ ಸಂಗ್ರಹ ಆಗುತ್ತಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಡಾವಣೆಗಳ ನಾಗರಿಕರು ಪ್ರವಾಹದ ಭೀತಿಯಿಂದ ಕಂಗೆಟ್ಟಿದ್ದಾರೆ. ಹಾರಂಗಿ ಅಣೆಕಟ್ಟು ಅಧಿಕಾರಿಗಳು ಹಗಲು-ರಾತ್ರಿ ಸೂಕ್ಷ್ಮವಾಗಿ ನೀರಿನ ಒಳ ಹರಿವಿನ ಪ್ರಮಾಣ ಮತ್ತು ಜಲಾಶಯದ ಮಟ್ಟವನ್ನು ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿದ್ದಾರೆ.
ಈ ಸಂಬAಧ ದಿನದ ೨೪ ಗಂಟೆಗಳ ಕಾಲ ಅಧಿಕಾರಿಗಳು ಪಾಳಿ ವ್ಯವಸ್ಥೆಯಲ್ಲಿ ಅಣೆಕಟ್ಟು ನೀರಿನ ನಿರ್ವಹಣೆ ಕಾಮಗಾರಿ ನಡೆಸುತ್ತಿದ್ದಾರೆ.
ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಹಗಲು ರಾತ್ರಿ ಎನ್ನದೆ ಓಡಾಡುತ್ತಿದ್ದು ಯಾವುದೇ ರೀತಿಯ ಅನಾಹುತ ಸಂಭವಿಸದAತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
ಇದರೊಂದಿಗೆ ತಗ್ಗು ಪ್ರದೇಶದ ಬಡಾವಣೆಗಳ ಜನರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ತಟದಿಂದ ತೆರವುಗೊಳಿಸುವಂತೆ ಸೂಚನೆ ನೀಡುತ್ತಿದ್ದು ಯಾವುದೇ ಸಂದರ್ಭ ಅಮೂಲ್ಯ ವಸ್ತುಗಳಾಗಲಿ, ಜೀವಹಾನಿಯಾಗಲಿ ಆಗದಂತೆ ಎಚ್ಚರ ವಹಿಸಲು ಸಾರ್ವಜನಿಕವಾಗಿ ಸೂಚನೆ ಮಾಹಿತಿ ನೀಡುತ್ತಿರುವುದು ಕಂಡು ಬಂದಿದೆ.
ಕುಶಾಲನಗರದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಇಂದಿರಾ ಬಡಾವಣೆ, ತಾವರೆಕೆರೆ ಬೈಚನಹಳ್ಳಿ ವ್ಯಾಪ್ತಿಯ ಪ್ರದೇಶಗಳು ಮತ್ತು ಕುಶಾಲನಗರ ಸಮೀಪದ ಕೊಪ್ಪ ಭಾಗದ ತಗ್ಗು ಪ್ರದೇಶದ ಮನೆಗಳು ಜಲಾವೃತಗೊಂಡಿದ್ದು, ಮತ್ತೆ ಘಟನೆ ಮರುಕಳಿಸಿದಲ್ಲಿ ಈ ವ್ಯಾಪ್ತಿಯ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ. ಮತ್ತೆ ಬಾರಿ ನಷ್ಟಕ್ಕೆ ಒಳಗಾಗಲಿದ್ದಾರೆ.
ಕಾವೇರಿ ಜಲಾನಯನ ಪ್ರದೇಶಗಳಾದ ತಲಕಾವೇರಿ, ಭಾಗಮಂಡಲ, ಬಲಮುರಿ, ನಾಪೋಕ್ಲು ,ಮೂರ್ನಾಡು, ಸಿದ್ದಾಪುರ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಹೆಚ್ಚಿನ ಪ್ರಮಾಣದ ನೀರು ಕಾವೇರಿ ನದಿ ಮೂಲಕ ಹರಿಯುತ್ತಿದೆ.
ಅಂದಾಜು ಸುಮಾರು ಒಂದು ಲಕ್ಷ ಕ್ಯೂಸೆಕ್ ಪ್ರಮಾಣದ ನೀರು ಕಾವೇರಿ ನದಿಯಲ್ಲಿ ಪ್ರಸಕ್ತ ಹರಿಯುತ್ತಿದ್ದು ಇದೀಗ ನದಿಯ ಎರಡು ಕಡೆ ಅಪಾಯದ ಮಟ್ಟ ಮೀರಿ ನೀರು ಉಕ್ಕಿ ಹರಿಯುತ್ತಿರುವುದು ಕಂಡುಬAದಿದೆ. ಗಂಧದಕೋಟೆ ತಾವರೆಕೆರೆ ವ್ಯಾಪ್ತಿಯಲ್ಲಿ ನದಿ ನೀರು ರಾಷ್ಟಿçÃಯ ಹೆದ್ದಾರಿಯ ಮೇಲೆ ಹರಿಯಲು ಆರಂಭಿಸಿದಲ್ಲಿ ಜಿಲ್ಲೆಗಳ ಸಂಪರ್ಕ ವ್ಯವಸ್ಥೆ ಸಂಪೂರ್ಣ ಕಡಿತಗೊಳ್ಳಲಿದ್ದು ಬದಲಿ ಸಂಪರ್ಕ ವ್ಯವಸ್ಥೆಯಲ್ಲಿ ವಾಹನಗಳು ಸಾಗಬೇಕಾಗಿದೆ.
ಗುರುವಾರ ಸಂಜೆಯೊಳಗೆ ಕಾವೇರಿ ನದಿಯಲ್ಲಿ ಸುಮಾರು ೨೭ ಅಡಿಗಳಷ್ಟು ಎತ್ತರಕ್ಕೆ ನೀರು ಹರಿಯುತ್ತಿದ್ದು, ನದಿಯ ದಂಡೆಯ ಎರಡು ಕಡೆ ಗದ್ದೆ ಹೊಲಗಳು ಸಂಪೂರ್ಣ ಜಲಾವೃತಗೊಂಡಿರುವ ದೃಶ್ಯ ಗೋಚರಿಸಿದೆ.
ಶತಮಾನಗಳ ಪರಂಪರೆಯAತೆ ಕಾವೇರಿ ನದಿಯ ಸೇತುವೆಯ ಬಳ್ಳದ ಬಾವಿಯಲ್ಲಿ ನೀರು ಹರಿದರೆ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುವುದರೊAದಿಗೆ ಇಡೀ ಜನಜೀವನ ಹಾಗೂ ರಾಷ್ಟಿçÃಯ ಹೆದ್ದಾರಿ ಮಡಿಕೇರಿ ಕುಶಾಲನಗರ ಮೈಸೂರು ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಸಾಧ್ಯತೆ ಅಧಿಕವಾಗಿದೆ.