ಗೋಣಿಕೊಪ್ಪಲು, ಜು. ೧೮: ನಾಗರಿಕರ ಓಡಾಟಕ್ಕೆ ಸಮಸ್ಯೆಯಾಗಿದ್ದ ಬೀದಿ ಬದಿಯ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ ಗ್ರಾಮ ಪಂಚಾಯಿತಿ ನಾಗರಿಕರ ಓಡಾಟಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿದೆ. ಗ್ರಾಮ ಪಂಚಾಯಿತಿಯ ಈ ಕಾರ್ಯಕ್ಕೆ ನಾಗರಿಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಬಸ್ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು ಇದಕ್ಕೆ ಹೊಂದಿಕೊAಡAತೆ ಸಾರ್ವಜನಿಕರ ಶೌಚಾಲಯಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಕೆಲವು ಅಂಗಡಿಗಳು ದಿಢೀರನೆ ತಲೆ ಎತ್ತಿದ್ದವು. ಇದರಿಂದ ಸಾರ್ವಜನಿಕರ ಶೌಚಾಲಯಕ್ಕೆ ತೆರಳಲು ನಾಗರಿಕರು ಕಷ್ಟ ಎದುರಿಸುತ್ತಿದ್ದರು. ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ಬದಿಯ ವ್ಯಾಪಾರಸ್ಥರು ಪೈಪೋಟಿಗೆ ಬಿದ್ದು ವ್ಯಾಪಾರದಲ್ಲಿ ತೊಡಗಿದ್ದರು. ಅಂಗಡಿ ಇಟ್ಟುಕೊಂಡಿದ್ದ ಕೆಲವರು ತಮ್ಮ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿಟ್ಟು ವ್ಯಾಪಾರದಲ್ಲಿ ತೊಡಗಿದ್ದರು.

ಇದರಿಂದ ಜನರ ಓಡಾಟಕ್ಕೆ ನಿರಂತರವಾಗಿ ಸಮಸ್ಯೆ ಎದುರಾಗಿತ್ತು. ಪ್ಲಾಸ್ಟಿಕ್ ಹೊದಿಕೆಗಳನ್ನು ಅಳವಡಿಸಿದ್ದ ಹಿನ್ನಲೆಯಲ್ಲಿ ನಡೆದಾಡುವ ರಸ್ತೆಯಲ್ಲಿಯೇ ನೀರು ನಿಂತು ಓಡಾಟ ಮಾಡಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಹಲವು ಬಾರಿ ರಸ್ತೆ ಬದಿಯ ವ್ಯಾಪಾರದ ಅಂಗಡಿ ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಯಾರೂ ಕೂಡ ಅಂಗಡಿ ತೆರವಿಗೆ ಮುಂದಾಗಿರಲಿಲ್ಲ. ಇದೀಗ ಗ್ರಾ.ಪಂ. ವತಿಯಿಂದಲೇ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಆದರೆ ಈ ರಸ್ತೆ ಮಾರ್ಗದಲ್ಲಿ ಇನ್ನೂ ಕೆಲವು ಬೀದಿ ಬದಿಯ ವ್ಯಾಪರಸ್ಥರನ್ನು ತೆರವುಗೊಳಿಸುವ ಕಾರ್ಯ ಮುಂದುವರೆಯಬೇಕಾಗಿದೆ. ಈ ಮಾರ್ಗದಲ್ಲಿ ಮುಂದೆ ಯಾವುದೇ ರೀತಿಯ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ನಾಗರಿಕರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.

ಈ ಹಿಂದೆ ಬಸ್ ನಿಲ್ದಾಣದ ಬಳಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ಬದಲಿ ಜಾಗವನ್ನು ನೀಡಿದ್ದರೂ ಈ ಬಗ್ಗೆ ಬದಲಿ ಸ್ಥಳಕ್ಕೆ ತೆರಳದೆ ಬಸ್ ನಿಲ್ದಾಣದಲ್ಲಿಯೇ ವ್ಯಾಪಾರ ಮಾಡಲು ಹಲವರು ಮುಂದಾಗಿದ್ದರು. ಇದರಿಂದ ನಾಗರಿಕರು ನಿರಂತರ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಸಾರ್ವಜನಿಕ ಶೌಚಾಲಯಕ್ಕೆ ತೆರಳುವ ದಾರಿಯನ್ನು ಸುಗಮಗೊಳಿಸಿದ್ದು ಕೆಸರುಮಯವಾಗಿದ್ದ ರಸ್ತೆಗೆ ಜೆಲ್ಲಿ ಹಾಕುವ ಮೂಲಕ ನಾಗರಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಈ ರಸ್ತೆಯ ಬದಿಯಲ್ಲಿರುವ ಕೆಲವು ಅಂಗಡಿಗಳು ಸಂತೆ ದಿನ ಸೇರಿದಂತೆ ವಾರದ ಎಲ್ಲಾ ದಿನಗಳಲ್ಲಿಯೂ ತಮ್ಮ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಇಡುವ ಮೂಲಕ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ನಾಗರಿಕರ ಓಡಾಟಕ್ಕೆ ಅನಾನುಕೂಲವಾಗಿದೆ ಇಂತ ಅಂಗಡಿಗಳ ಮೇಲೆಯೂ ಗ್ರಾಮ ಪಂಚಾಯಿತಿ ನಿಗಾ ವಹಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಬಸ್ ನಿಲ್ದಾಣದ ಬಳಿಯಿರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸಾಕಷ್ಟು ಸ್ಥಳಾವಕಾಶವಿದ್ದರೂ ಖಾಲಿ ಇರುವ ಸ್ಥಳಕ್ಕೆ ಬೀದಿ ಬದಿ ವ್ಯಾಪಾರಿಗಳು ತೆರಳಲು ಮನಸ್ಸು ಮಾಡುತ್ತಿಲ್ಲ. ಮಾರುಕಟ್ಟೆ ಆವರಣದಲ್ಲಿಯೂ ತಮ್ಮ ತರಕಾರಿ ವ್ಯಾಪಾರವನ್ನು ನಾಗರಿಕರು ಓಡಾಡುವ ಮಾರ್ಗ ಬದಿಯಲ್ಲಿಟ್ಟು ವ್ಯಾಪಾರ ಮಾಡುತ್ತಿರುವುದರಿಂದ ನಾಗರಿಕರು ಸರಾಗವಾಗಿ ಓಡಾಡಲು ತೊಂದರೆಯಾಗಿದೆ. ಈ ಬಗ್ಗೆಯೂ ಪಂಚಾಯಿತಿ ಕ್ರಮ ಕೈಗೊಳ್ಳಬೇಕಾಗಿದೆ. ಬದಲಿ ಜಾಗವನ್ನು ನೀಡಿದ್ದರೂ ಈ ಬಗ್ಗೆ ಬದಲಿ ಸ್ಥಳಕ್ಕೆ ತೆರಳದೆ ಬಸ್ ನಿಲ್ದಾಣದಲ್ಲಿಯೇ ವ್ಯಾಪಾರ ಮಾಡಲು ಹಲವರು ಮುಂದಾಗಿದ್ದರು. ಇದರಿಂದ ನಾಗರಿಕರು ನಿರಂತರ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಸಾರ್ವಜನಿಕ ಶೌಚಾಲಯಕ್ಕೆ ತೆರಳುವ ದಾರಿಯನ್ನು ಸುಗಮಗೊಳಿಸಿದ್ದು ಕೆಸರುಮಯವಾಗಿದ್ದ ರಸ್ತೆಗೆ ಜೆಲ್ಲಿ ಹಾಕುವ ಮೂಲಕ ನಾಗರಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಈ ರಸ್ತೆಯ ಬದಿಯಲ್ಲಿರುವ ಕೆಲವು ಅಂಗಡಿಗಳು ಸಂತೆ ದಿನ ಸೇರಿದಂತೆ ವಾರದ ಎಲ್ಲಾ ದಿನಗಳಲ್ಲಿಯೂ ತಮ್ಮ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಇಡುವ ಮೂಲಕ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ನಾಗರಿಕರ ಓಡಾಟಕ್ಕೆ ಅನಾನುಕೂಲವಾಗಿದೆ ಇಂತ ಅಂಗಡಿಗಳ ಮೇಲೆಯೂ ಗ್ರಾಮ ಪಂಚಾಯಿತಿ ನಿಗಾ ವಹಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಬಸ್ ನಿಲ್ದಾಣದ ಬಳಿಯಿರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸಾಕಷ್ಟು ಸ್ಥಳಾವಕಾಶವಿದ್ದರೂ ಖಾಲಿ ಇರುವ ಸ್ಥಳಕ್ಕೆ ಬೀದಿ ಬದಿ ವ್ಯಾಪಾರಿಗಳು ತೆರಳಲು ಮನಸ್ಸು ಮಾಡುತ್ತಿಲ್ಲ. ಮಾರುಕಟ್ಟೆ ಆವರಣದಲ್ಲಿಯೂ ತಮ್ಮ ತರಕಾರಿ ವ್ಯಾಪಾರವನ್ನು ನಾಗರಿಕರು ಓಡಾಡುವ ಮಾರ್ಗ ಬದಿಯಲ್ಲಿಟ್ಟು ವ್ಯಾಪಾರ ಮಾಡುತ್ತಿರುವುದರಿಂದ ನಾಗರಿಕರು ಸರಾಗವಾಗಿ ಓಡಾಡಲು ತೊಂದರೆಯಾಗಿದೆ. ಈ ಬಗ್ಗೆಯೂ ಪಂಚಾಯಿತಿ ಕ್ರಮ ಕೈಗೊಳ್ಳಬೇಕಾಗಿದೆ. ನಗರದ ಮುಖ್ಯ ರಸ್ತೆಯಲ್ಲಿಯೂ ಬೀದಿ ಬದಿ ವ್ಯಾಪಾರಿಗಳು ಜಾಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಾಹನ ಸವಾರರು ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ವ್ಯಾಪಾರ ನಡೆಸುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.

ಮಾರುಕಟ್ಟೆಗೆ ತೆರಳುವ ರಸ್ತೆಯನ್ನು ಅತಿಕ್ರಮಿಸಿಕೊಂಡಿರುವ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿರುವ ಸಾಮಗ್ರಿಗಳನ್ನು ನಡೆದಾಡುವ ರಸ್ತೆಯಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ತೆರಳಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಪಂಚಾಯಿತಿ ಹಲವು ಬಾರಿ ಸೂಚನೆ ನೀಡಿದ್ದರೂ ಕೆಲವು ದಿನಗಳ ಮಟ್ಟಿಗೆ ಮಾತ್ರ ಸುಧಾರಣೆ ಕಂಡರೂ ನಂತರದ ದಿನಗಳಲ್ಲಿ ಇಂತಹ ವ್ಯವಸ್ಥೆ ನಿರಂತರವಾಗಿ ಮುಂದುವರೆಯುತ್ತಿದೆ.

-ಹೆಚ್.ಕೆ. ಜಗದೀಶ್