ಮಡಿಕೇರಿ, ಜು. ೧೮: ಇದೊಂದು ವಿಶೇಷವಾದ ಎಲ್ಲರೂ ಹುಬ್ಬೇರಿಸು ವಂತಹ ಸುದ್ದಿ. ಇದು ಹಲವು ಚರ್ಚೆಗೂ ಗ್ರಾಸವಾಗಬಹುದು. ಆದರೂ ಕೊಡವ ಜನಾಂಗದ ಪ್ರಸ್ತುತದ ವಾಸ್ತವತೆಗೆ ಇದೊಂದು ಸಾಕ್ಷಿಯಾಗಿದೆ. ವಿಶಿಷ್ಟವಾದ ಆಚಾರ ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ, ಸೇವೆ ಸಾಧನೆಗಳ ಮೂಲಕ ಕೊಡವ ಜನಾಂಗ ಹೆಸರು ಮಾಡಿದೆ. ಆದರೆ ಈಗಿನ ಸನ್ನಿವೇಶದಲ್ಲಿ ಈ ಕೊಡವ ಜನಾಂಗದ ಜನಸಂಖ್ಯೆ ಕ್ಷೀಣವಾಗುತ್ತಾ ಬರುತ್ತಿದೆ ಎಂಬದAತೂ ನಿಜ. ಹಲವಾರು ಯುವಕ-ಯುವತಿಯರು ವೈವಾಹಿಕ ಬದುಕಿನತ್ತ ಆಸಕ್ತಿ ತೋರುತ್ತಿಲ್ಲ. ವಿವಾಹವಾದವರು ಮಕ್ಕಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಒಂದೋ-ಎರಡೋ ಮಕ್ಕಳಾದಲ್ಲಿ ಅದೇ ದೊಡ್ಡದು ಎಂಬAತಾಗಿದೆ. ಹಲವು ವರ್ಷಗಳ ಹಿಂದೆ ಮನೆ ತುಂಬಾ ಮಕ್ಕಳಿರುತ್ತಿದ್ದರು. ಆದರೆ ಪ್ರಸ್ತುತ ದೊಡ್ಡ ದೊಡ್ಡ ಮನೆಗಳಿದ್ದರೂ ಖಾಲಿ ಖಾಲಿ. ಕೇವಲ ಗಂಡ-ಹೆAಡತಿ ಮಾತ್ರ ಮನೆಯಲ್ಲಿ ಎಂಬAತಾಗಿದೆ. ಈ ನಿಟ್ಟಿನಲ್ಲಿ ಕೊಡವರ ಬಹುತೇಕ ಸಭೆ-ಸಮಾರಂಭಗಳಲ್ಲಿ ಜನಾಂಗದವರಲ್ಲಿ ಜನಸಂಖ್ಯೆ ವೃದ್ಧಿಯಾಗಬೇಕು. ಈ ಮೂಲಕ ಅಪರೂಪದ ಈ ಜನಾಂಗ ಭವಿಷ್ಯದಲ್ಲೂ ಹಿಂದಿನ ಗತ ವೈಭವಕ್ಕೆ ಮರಳಬೇಕು ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತದೆಯಾದರೂ ಯಾರಲ್ಲೂ ಗಂಭೀರತೆ ಚಿಂತನೆಯಿಲ್ಲ ಎಂಬ ವಿಷಾದವೂ ಒಂದೆಡೆಯಿದೆ.

ಈ ಕಾರಣದಿಂದಾಗಿ ಎಂಬAತೆ ನಿನ್ನೆ ನಡೆದ ಜನಾಂಗದ ಪ್ರಥಮ ಕೊಡವ ಸಮಾಜವೂ ಆಗಿರುವ ಮಡಿಕೇರಿ ಕೊಡವ ಸಮಾಜದ ಮಹಾಸಭೆಯಲ್ಲಿ ಒಂದು ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಮರಗೋಡಿನವರಾದ ಸಾಧಾರಣ ಕುಟುಂಬದವರಲ್ಲಿ ಒಬ್ಬರಾಗಿರುವ ತಾತಪಂಡ ಬೆಳ್ಯಪ್ಪ ಹಾಗೂ ಬೋಜಮ್ಮ (ಶೀಲಾ) ದಂಪತಿ ಆರು ಮಕ್ಕಳನ್ನು ಪಡೆದಿದ್ದು, (ಐವರು ಪುತ್ರರು, ಓರ್ವ ಪುತ್ರಿ) ಬೋಜಮ್ಮ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸುವದರೊಂದಿಗೆ ಮಕ್ಕಳ ಪಾಲನೆಗೆ ಅನುಕೂಲ ವಾಗಲೆಂದು ಚಿಂತನೆಯೊAದಿಗೆ ರೂ. ೨೫ ಸಾವಿರ ನಗದು ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು. ಇಂತಹ ಉತ್ತೇಜನದಿಂದ ಜನಾಂಗದವರು ಜನಸಂಖ್ಯೆ ವೃದ್ಧಿಯತ್ತ ಆಸಕ್ತಿ ತೋರುವಂತಾಗಲಿ ಎಂಬ ಉದ್ದೇಶ ಸಮಾಜದ್ದಾಗಿದೆ ಎಂದು ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಹೇಳಿದರು.

ಈ ದಂಪತಿಯ ಬಗ್ಗೆ ನೆರೆದಿದ್ದವರಲ್ಲಿ ಸಂತಸದ ಭಾವನೆಯು ವ್ಯಕ್ತಗೊಂಡಿದ್ದು ವಿಶೇಷವಾಗಿತ್ತು. ಇದರ ಹುಮ್ಮನಸ್ಸಿನಲ್ಲೇ ಮಂಡೇಟಿರ ಸುನಿಲ್ ಮಂದಪ್ಪ ಅವರು ಈ ಕುಟುಂಬಕ್ಕೆ ವೈಯಕ್ತಿಕವಾಗಿ ರೂ. ೫ ಸಾವಿರ ನಗದು ಹಣವನ್ನು ನೀಡಿದ್ದಾರೆ. ಇನ್ನಿತರರು ಈ ದಂಪತಿಗೆ ಮಕ್ಕಳ ಪಾಲನೆ ಶಿಕ್ಷಣಕ್ಕೆ ನೆರವು ನೀಡಲು ಮುಂದೆ ಬಂದು ಸಮಾಜದ ಕಚೇರಿಗೆ ತಲುಪಿಸಿದಲ್ಲಿ ಅದನ್ನು ಕುಟುಂಬಕ್ಕೆ ತಲುಪಿಸು ವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.

ಜನಾಂಗದ ಈಗಿನ ಪರಿಸ್ಥಿತಿಯಲ್ಲಿ ಡೆತ್‌ಫಂಡ್‌ನ ಬದಲಾಗಿ ಬರ್ತ್ಫಂಡ್ ನೀಡಬೇಕಾಗಿರುವುದು ಅನಿವಾರ್ಯ ಎಂಬAತಾಗಿದೆ. ಈ ಬಗ್ಗೆ ಸಮಾಜ, ಜನಾಂಗದ ಪ್ರಮುಖರು, ಸಂಘ-ಸAಸ್ಥೆಗಳು ಚಿಂತನೆ ಮಾಡಬೇಕಾಗಿದೆ ಎಂದು ಸುನಿಲ್ ಮಂದಪ್ಪ ಅಭಿಪ್ರಾಯಿಸಿದ್ದಾರೆ.

-ಶಶಿ