ಮಡಿಕೇರಿ, ಜು. ೧೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಥಮ ಸರ್ವ ಸದಸ್ಯರ ಸಭೆಯನ್ನು ತಾ. ೧೬ರಂದು ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಮುಂದಿನ ಕಾರ್ಯಯೋಜನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕಕ್ಕಡ ೧೮ ಹಾಗೂ ಬೇಲ್‌ನಮ್ಮೆ ಕಾರ್ಯ ಕ್ರಮವನ್ನು ಸಂಸ್ಕೃತಿಯ ಅನಾವರಣ ದೊಂದಿಗೆ ಮಡಿಕೇರಿ, ಅಮ್ಮತ್ತಿ, ಪೊನ್ನಂಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ನಡೆಸಲು ಸದಸ್ಯರಿಗೆ ಜವಾಬ್ದಾರಿ ಕೊಡಲಾಯಿತು. ಮಂಗಳೂರಿನಲ್ಲಿ ಆಯೋಜಿಸಲಿರುವ ಸುವರ್ಣ ಕರ್ನಾಟಕ ಸಂಭ್ರಮಾ ಚರಣೆ, ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯದ ಪ್ರದರ್ಶನಗಳೊಂದಿಗೆ ನಡೆಸುವಂತೆ ಹಾಗೂ ಇದಕ್ಕೆ ಪೂರಕ ವಾಗಿ ಕೊಡಗು ಜಿಲ್ಲೆಯಾದ್ಯಂತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು. ಇದರನ್ವಯ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಭಾಷಣ ಸ್ಪರ್ಧೆ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿರುಚಿತ್ರ ಸ್ಪರ್ಧೆಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮತ್ತು ವಿದ್ಯಾ ಇಲಾಖೆಯ ಸಹ ಯೋಗದೊಂದಿಗೆ ಹಮ್ಮಿಕೊಳ್ಳುವಂತೆ ತೀರ್ಮಾನಿಸಲಾಯಿತು. ಕರ್ನಾಟಕ ಏಕೀಕರಣ ಹಾಗೂ ಕೊಡವ ಭಾಷೆ, ಸಂಸ್ಕೃತಿಯಿAದ ಕನ್ನಡದ ಬೆಳವಣಿಗೆ ಒಳಗೊಂಡAತೆ ಮಕ್ಕಳಿಗೆ ಏರ್ಪಡಿ ಸಲಾಗಿರುವ ಸ್ಪರ್ಧಾ ಕಾರ್ಯ ಕ್ರಮಗಳಿಗೆ ಪ್ರತಿ ವಿದ್ಯಾಸಂಸ್ಥೆಗಳಿAದ ಓರ್ವ ಪ್ರತಿಭಾವಂತ ವಿದ್ಯಾರ್ಥಿ ಯನ್ನು ಆಯ್ಕೆ ಮಾಡಿ ಕಳುಹಿಸಿ ಕೊಡುವಂತೆ ತೀರ್ಮಾನಿಸಲಾಯಿತು. ಎಲ್ಲಾ ಕಾರ್ಯಕ್ರಮಗಳಿಗೆ ಅಕಾಡೆ ಮಿಯ ಸದಸ್ಯರ ಸಂಚಾಲಕತ್ವ ಹಾಗೂ ಜಿಲ್ಲೆಯ ನುರಿತ ತಜ್ಞ ವ್ಯಕ್ತಿಗಳನ್ನು ಆಹ್ವಾನಿಸಿ ಕಾರ್ಯಕ್ರಮದ ಮೆರು ಗನ್ನು ಹೆಚ್ಚಿಸುವಂತೆ ತೀರ್ಮಾನಿಸಲಾ ಯಿತು. ಕರ್ನಾಟಕ ಸುವರ್ಣ ಸಂಭ್ರಮಾಚರ ಣೆಯ ಪ್ರಯುಕ್ತ ಈಗಾಗಲೇ ಬೆಂಗಳೂರಿ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ರುಗಳೊಂದಿಗೆ ಸರ್ವ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆದಿದ್ದು, ಆಚರಣೆಯನ್ನು ಯಶಸ್ವಿಗೊಳಿಸುವಲ್ಲಿ ಸರ್ವರ ಸಹಕಾರವನ್ನು ಕೋರಲಾಯಿತು.

ಸಭೆಯಲ್ಲಿ ಸ್ಥಾಯಿ ಸಮಿತಿ ಹಾಗೂ ಪ್ರಕಟಣೆ ಸಮಿತಿಗೆ ಅಧ್ಯಕ್ಷರು ಹಾಗೂ ರಿಜಿಸ್ಟಾçರ್‌ಗಳನ್ನು ನೇಮಿಸಲಾಯಿತು.

ಸಭೆಯಲ್ಲಿ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯAಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕೊಡಿಜಮ್ಮಂಡ ಎಂ.ಬಾಲಕೃಷ್ಣ, ಪೊನ್ನೀರ ಯು.ಗಗನ್, ಕುಡಿಯರ ಕಾವೇರಪ್ಪ, ನಾಯಂದೀರ ಆರ್.ಶಿವಾಜಿ, ಚೆಪ್ಪು ಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ.ಎ.ಸAಜು ಕಾವೇರಪ್ಪ, ನಾಪಂಡ ಸಿ.ಗಣೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಜಿಲ್ಲೆ ಸಹಾಯಕ ನಿರ್ದೇಶಕ ಕುಮಾರ್ ಹಾಗೂ ಅಕಾಡೆ ಮಿಯ ರಿಜಿಸ್ಟಾçರ್ ಹಾಜರಿದ್ದರು.