ಮಡಿಕೇರಿ, ಜು. ೧೮: ಮಡಿಕೇರಿ ಕೊಡವ ಸಮಾಜವು ಕೊಡವ ಜನಾಂಗದ ಮೊಟ್ಟಮೊದಲ ಸಮಾಜವಾಗಿದ್ದು ದಾನಿಗಳ ಸಹಕಾರದಿಂದ ಪುನರ್ ನವೀಕರಣಗೊಳ್ಳುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಯಬೇಕೆಂದರೆ ಎಲ್ಲರ ಸಹಕಾರ ಬೇಕೆಂದು ಮಡಿಕೇರಿ ಕೊಡವ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರು ಹೇಳಿದರು.

ಮಡಿಕೇರಿಯಲ್ಲಿ ಕೊಡವ ಸಂಘವಾಗಿ ಪ್ರಾರಂಭಗೊAಡು ನಂತರದಲ್ಲಿ ಕೊಡವ ಸಮಾಜವಾಗಿ ರೂಪುಗೊಂಡಿತು. ಆಡಳಿತ ಮಂಡಳಿಯು ಹಲವು ಅಭಿವೃದ್ಧಿ ಕಾರ್ಯವನ್ನು ಮಾಡಿದೆ. ಸಮಾಜದ ಅಧೀನ ಸಂಸ್ಥೆಯಾದ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯು ಹಲವು ವರ್ಷಗಳಿಂದ ಶೇ. ೧೦೦ ಫಲಿತಾಂಶ ಪಡೆಯುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಚೈನ್‌ಗೇಟ್ ಬಳಿ ಇರುವ ಸಮಾಜದ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣ, ಪೆಟ್ರೋಲ್ ಬಂಕ್ ಹಾಗೂ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದರು. ಸಮಾಜದ ಅಭಿವೃದ್ಧಿಗೆ ಕೊಡವ ಅಭಿವೃದ್ಧಿ ನಿಗಮದಿಂದ ರೂ. ೧೦ ಲಕ್ಷ ಬಂದಿದ್ದು ಶಾಸಕರು, ಸಂಸದರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಸಮಾಜದ ಬೈಲಾ ತಿದ್ದುಪಡಿ ಕಾರ್ಯ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಮಡಿಕೇರಿಯ ಪೊಮ್ಮಕ್ಕಡ ಕೂಟವನ್ನು ಸಮಾಜದ ಅಂಗ ಸಂಸ್ಥೆಯಾಗಿ ಸೇರ್ಪಡೆಗೆ ತೀರ್ಮಾನಿಸಲಾಗುವುದು ಎಂದರು.

ಕಳೆದ ಮಾಹಾಸಭೆಯ ವರದಿ, ಆಡಳಿತ ಮಂಡಳಿ ವರದಿ, ಲೆಕ್ಕಪರಿಶೋಧನಾ ವರದಿ ಹಾಗೂ ಹಲವು ಲೆಕ್ಕಾಚಾರದ ಬಗ್ಗೆ ಚರ್ಚಿಸಲಾಯಿತು. ಸಮಾಜದ ಜಾಗದ ದಾಖಲೀಕರಣ, ಹಿಂದೆ ಕೊಡವರು ಹಲವು ಸರಕಾರಿ ಕಚೇರಿಗಳಿಗೆ ನೀಡಿದಂತ ಜಾಗದಲ್ಲಿ ದಾನಿಗಳ ಹೆಸರೇ ಇಂದು ಮರೆಯಾಗಿದ್ದು ಆ ಜಾಗದಲ್ಲಿ ದಾನಿಗಳ ಹೆಸರಿನ ಫಲಕವನ್ನು ಇಡುವಂತಾಗಬೇಕೆAದು ಸದಸ್ಯರು ಒತ್ತಾಯಿಸಿದರು.

ನಿರ್ದೇಶಕಿ ಬೊಪ್ಪಂಡ ಸರಳಾ ಕರುಂಬಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ವಂದಿಸಿ, ಕಾರ್ಯದರ್ಶಿ ಕನ್ನಂಡ ಸಂಪತ್ ನಿರೂಪಿಸಿದರು.

ವೇದಿಕೆಯಲ್ಲಿ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ, ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್, ನಿರ್ದೇಶಕರಾದ ಶಾಂತೆಯAಡ ವಿಶಾಲ್ ಕಾರ್ಯಪ್ಪ, ಮಂಡಿರ ಸದಾ ಮುದ್ದಪ್ಪ, ಕಾಳಚಂಡ ಅಪ್ಪಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವAಡ ರವಿ ಬಸಪ್ಪ, ಕನ್ನಂಡ ಕವಿತ ಬೊಳ್ಳಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಕಾಂಡೇರ ಲಲ್ಲು ಕುಟ್ಟಪ್ಪ ಇದ್ದರು.