ಮಡಿಕೇರಿ, ಜು. ೧೮: ವರುಣಾರ್ಭಟಕ್ಕೆ ಜಿಲ್ಲೆ ನಲುಗುತ್ತಿದೆ. ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ರೂ. ೩೫ ಕೋಟಿಗೂ ಸರಕಾರಿ ಆಸ್ತಿ-ಪಾಸ್ತಿ ನಷ್ಟಕ್ಕೀಡಾಗಿದೆ. ಜೊತೆಗೆ ಜಿಲ್ಲೆಯ ೧೩೧ ಮನೆಗಳಿಗೆ ಹಾನಿಯುಂಟಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತೆAದರೆ ಆತಂಕ ಮನೆ ಮಾಡುತ್ತದೆ. ಅನಾಹುತಗಳ ಕರಿನೆರಳಿನಲ್ಲಿ ದಿನದೂಡುವ ಸ್ಥಿತಿ ಎದುರಾಗುತ್ತದೆ. ಈ ಬಾರಿಯೂ ಮಳೆ ಜಿಲ್ಲೆಯಲ್ಲಿ ಬಿರುಸು ಪಡೆದುಕೊಂಡಿದ್ದು, ವರುಣಾರ್ಭಟ ಜೋರಾಗಿದೆ. ಅಬ್ಬರಿಸಿ ಬೊಬ್ಬೆರೆಯುತ್ತಿರುವ ಮಳೆರಾಯನಿಂದ ಹಲವೆಡೆ ಹಾನಿ ಸಂಭವಿಸುತ್ತಿದೆ. ನದಿ, ಹೊಳೆ, ಹಳ್ಳ-ಕೊಳ್ಳ, ಜಲಪಾತ, ಜಲಾಶಯಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಹದ ಭಯವೂ ಸೃಷ್ಟಿಯಾಗುತ್ತಿದೆ.
ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಎನ್.ಡಿ.ಆರ್.ಎಫ್. ಪಡೆ ಜಿಲ್ಲೆಯಲ್ಲಿ ನೆಲೆಯೂರಿದೆ. ಇದರೊಂದಿಗೆ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ತಂಡಗಳು, ಅಧಿಕಾರಿಗಳು ಮಳೆಗಾಲದ ಮುನ್ನೆಚ್ಚರಿಕೆಯತ್ತ ಕಾರ್ಯೋನ್ಮುಖಗೊಂಡಿದ್ದಾರೆ. ಮಳೆಯೊಂದಿಗೆ ಗಾಳಿಯ ರಭಸವೂ ಹೆಚ್ಚಾಗುತ್ತಿದ್ದು, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗುವ ಘಟನೆಗಳು ವರದಿಯಾಗುತ್ತಿವೆೆ. ಅದನ್ನು ತ್ವರಿತವಾಗಿ ತೆರವು ಮಾಡುವ ಕೆಲಸವೂ ನಡೆಯುತ್ತಿದೆ. ನದಿ ಅಂಚಿನ ಗ್ರಾಮಗಳಲ್ಲಿ ಪ್ರವಾಹದ ಭಯ ಆವರಿಸಿದ್ದರೆ, ಬರೆ ಪ್ರದೇಶದಲ್ಲಿರುವ ನಿವಾಸಿಗಳು ಗುಡ್ಡ ಕುಸಿತದ ಆತಂಕ ಉಂಟಾಗಿದೆ. ಭಾರಿ ಮಳೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರತಿಕೂಲ ಹವಾಮಾನದಿಂದ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಜೀವನ ದೂಡಬೇಕಾಗಿದೆ.
ಜೂನ್ ೧ ರಿಂದ ಜುಲೈ ೧೮ರ ತನಕ ಜಿಲ್ಲೆಯಲ್ಲಿ ರೂ. ೩೫ ಕೋಟಿಗೂ ಅಧಿಕ ಆಸ್ತಿ-ಪಾಸ್ತಿ ನಷ್ಟವಾಗಿರುವ ಬಗ್ಗೆ ಜಿಲ್ಲಾಡಳಿತ ತಿಳಿಸಿದೆ. ಒಂದು ಕಡೆ ಭೂಕುಸಿತ, ೫ ಕಡೆ ಅಲ್ಪಪ್ರಮಾಣದ ಬರೆ ಜರಿತ ಘಟನೆಗಳು ವರದಿಯಾಗಿವೆÉ. ಮೈಸೂರು-ಮಾಣಿ ರಾಷ್ಟಿçÃಯ ಹೆದ್ದಾರಿ ೨೭೫ ನಡುವಿನ ಕರ್ತೋಜಿ ಬಳಿ ಬರೆ ಜರಿದು ರಸ್ತೆ ಹಾನಿಗೀಡಾಗಿದೆ.
(ಮೊದಲ ಪುಟದಿಂದ) ಹಲವು ಗ್ರಾಮೀಣ ಭಾಗದ ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಸಂಚಾರ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
೧೩೧ ಮನೆಗಳಿಗೆ ಹಾನಿ
ಜೂನ್ ೧ ರಿಂದ ವರುಣಾಘಾತಕ್ಕೆ ೧೩೧ ಮನೆಗಳು ಹಾನಿಯಾಗಿರುವ ಕುರಿತು ವರದಿಯಾಗಿದೆ. ೧೨ ಪೂರ್ಣ, ೨೭ ಅಲ್ಪ ಪ್ರಮಾಣ, ೯೨ ಮನೆಗಳು ಭಾಗಶಃ ಹಾನಿಯುಂಟಾಗಿದ್ದು, ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ಆಧಾರದಲ್ಲಿ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಪರಿಹಾರ ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ. ಇದರೊಂದಿಗೆ ೩ ಶಾಲೆ, ೧ ಅಂಗನವಾಡಿಗೂ ಹಾನಿ ಸಂಭವಿಸಿದೆ.
ನಷ್ಟದ ವಿವರ
ಲೋಕೋಪಯೋಗಿ ಇಲಾಖೆಗೆ ರೂ. ೨೬.೯೯ ಕೋಟಿ, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗಕ್ಕೆ ರೂ. ೬.೮೩ ಕೋಟಿ, ಚೆಸ್ಕಾಂಗೆ ರೂ. ೧.೭೭ ಕೋಟಿ ನಷ್ಟ ಉಂಟಾಗಿದೆ.
ಹಲವು ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಅದನ್ನು ತಾತ್ಕಾಲಿಕವಾಗಿ ಸರಿಪಡಿಸುವ ಪ್ರಯತ್ನ ನಡೆಸಿದರೂ ಮಳೆಯಿಂದ ಕಾಮಗಾರಿ ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ಮಣ್ಣು, ವೆಟ್ ಮಿಕ್ಸ್ ಬಳಸಿ ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಸಿದ್ದೇಗೌಡ ಮಾಹಿತಿ ಒದಗಿಸಿದ್ದಾರೆ. ಹಾನಿಗೀಡಾದ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್, ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡುವ ಕೆಲಸ ಚೆಸ್ಕಾಂನಿAದಾಗುತ್ತಿದೆ.
ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದು, ಈಗಾಗಲೇ ತಹಶೀಲ್ದಾರ್ ಖಾತೆಗೆ ರೂ. ೧ ಕೋಟಿ ಹಣವನ್ನು ಬಿಡುಗಡೆಗೊಳಿಸಿ ಮಳೆಗಾಲ ಸಂಬAಧ ಖರ್ಚಿಗೆ ವಿನಿಯೋಗ ಮಾಡಲಾಗುತ್ತಿದೆ. ಟಿ ಹೆಚ್.ಜೆ. ರಾಕೇಶ್