ವೀರಾಜಪೇಟೆ, ಜು.೧೮: ವೀರಾಜಪೇಟೆ ಕಾವೇರಿ ಆಶ್ರಮದಲ್ಲಿ ಚೌರೀರ ರಘು ಸೋಮಣ್ಣ ಹಾಗೂ ಮಲೇಷ್ಯಾ ಮೂಲದ ಯುವತಿಯೋರ್ವರು ದೀಕ್ಷೆ ತೆಗೆದುಕೊಳ್ಳುವ ವೇಳೆ ಸಂಘ ಸಂಸ್ಥೆಗಳಿAದ ವಿರೋಧ ವ್ಯಕ್ತವಾಗಿ ಕಾರ್ಯಕ್ರಮ ರದ್ದಾದ ಘಟನೆ ಗುರುವಾರ ನಡೆದಿದೆ.
ದೀಕ್ಷೆ ನೀಡುವ ಕಾರ್ಯಕ್ರಮ ರದ್ದು ಮಾಡಿದ ಬಗ್ಗೆ ಕಾರ್ಯಕ್ರಮ ಆಯೋಜಕರಾದ ಪ್ರತಾಪ್ ಹಾಗೂ ರಘು ಮಾಹಿತಿ ನೀಡಿದರು,
ಈ ಸಂದರ್ಭ ಉಳ್ಳಿಯಡ ಪೂವಯ್ಯ ಅÀವರು ಮಾತನಾಡಿ ಕಾವೇರಿ ಆಶ್ರಮ ನಡೆದು ಬಂದ ಹಿನ್ನೆಲೆಯನ್ನು ವಿವÀರಿಸಿದರು. ಕೊಡಗಿನಲ್ಲಿ ಕೊಡವ ಸಂಪ್ರದಾಯದಲ್ಲಿ ಇದುವರೆಗೂ ಯಾರಿಗೂ ದೀಕ್ಷೆ ನೀಡಿದ ಇತಿಹಾಸವಿಲ್ಲ. ಆದುದರಿಂದ ಈ ದೀಕ್ಷೆ ನೀಡುವ ಕಾರ್ಯಕ್ರಮ ಇಲ್ಲಿ ನಡೆಯಬಾರದು, ನಡೆಯುವುದಕ್ಕೆ ಬಿಡುವುದಿಲ್ಲ ಎಂದು ತಿಳಿಸಿದರು,
ಟ್ರಸ್ಟ್ನ ಪ್ರತಾಪ್ ಅವರು ಮಾತನಾಡಿ ಕಾವೇರಿ ಆಶ್ರಮವನ್ನು ಯಾರೂ ಕೂಡ ಪರಬಾರೆ ಮಾಡಿಕೊಂಡಿಲ್ಲ ಎಂದು ಮಾಹಿತಿ ನೀಡುವ ಸಂದರ್ಭದಲ್ಲಿ ವೀರಾಜಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಕಿರಣ್ ಹಾಗು ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಪ್ರತಿಕ್ರಿಯಿಸಿ ಜನರಿಗೆ ತಪುö್ಪ ಮಾಹಿತಿ ನೀಡಬೇಡಿ ಎಂದು ತಿಳಿಸಿದರು.
ಆಶ್ರಮದ ನೂತನ ಧರ್ಮಾಧಿಕಾರಿ ಚೌರಿರ ರಘು ಸೋಮಣ್ಣ ಅವರಿಗೆ ಆಶ್ರಮದ ಸಂಪೂರ್ಣ ಜವಾಬ್ದಾರಿ ಇರುತ್ತದೆ. ಈ ಆಶ್ರಮದಲ್ಲಿ ಸ್ವತಂತ್ರ ಸ್ವಾಮಿಗಳಾಗಿ ಕಾರ್ಯ ನಿರ್ವಹಿಸಬೇಕು, ಬೇರೆ ಧರ್ಮ ಕೇಂದ್ರದ ಮತ್ತು ಬೇರೆಯವರ ಕೈಗೊಂಬೆಯAತೆ ವರ್ತನೆ ಮಾಡುವುದು ಸರಿಯಲ್ಲ. ತಮಿಳುನಾಡು ಮೂಲದ ಕೈಲಾಸಾಶ್ರಮದ ಸ್ವಾಮೀಜಿ ಎಂದು ಹೇಳಿಕೊಂಡಿರುವ ಮಧುಸೂದನ್ ಎಂಬವರು ಈ ಧರ್ಮ ಕೇಂದ್ರದಲ್ಲಿ ಅಧಿಕಾರ ಚಲಾಯಿಸಿದರೆ ಮುಂದೆ ಆಗುವ ಕಷ್ಟ ನಷ್ಟಗಳಿಗೆ ಅವರೇ ನೇರ ಹೊಣೆಗಾರರಾಗುತ್ತಾರೆ. ಯಾವುದೇ ಕಾರಣಕ್ಕೂ ಈ ಆಸ್ತಿಯ ಹಕ್ಕು ಮಧುಸೂದನ್ ಅವರಿಗೆ ಇರುವುದಿಲ್ಲ ಎಂದು ಮಾಳೇಟಿರ ಶ್ರೀನಿವಾಸ್ ತಿಳಿಸಿದರು.
ಈ ಸಂದರ್ಭ ಜಬ್ಬೂಮಿ ಟ್ರಸ್ಟ್ನ ನಿರ್ದೇಶಕ ಅಮೀತ್, ಕೋಟೆರ ಕಿಶನ್ ಉತ್ತಪ್ಪ, ವಕೀಲರಾದ ಎಂ. ಎಸ್ ಪೂವಯ್ಯ, ಅಂಜಪರವAಡ ಅನಿಲ್, ಮಾದಂಡ ತಿಮ್ಮಯ್ಯ, ಮಲ್ಲಮಾಡ ಪ್ರಭು ಪೂಣಚ್ಚ, ಅಮ್ಮಣಿಚಂಡ ರವಿ ಸೇರಿದಂತೆ ಹಲವಾರು ಕೊಡವ ಸಂಘಗಳ ಪ್ರಮುಖರು ಭಾಗವಹಿಸಿದ್ದರು. ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವರುದ್ರ, ವಾಣಿಶ್ರಿ, ಪಿಎಸ್‌ಐ ಮಂಜುನಾಥ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರು ಯಾವುದೇ ಪೂಜೆ ನಡೆಯದೆ ಮರಳಿದರು.