ವೀರಾಜಪೇಟೆ, ಜು ೧೮: ತಾಲೂಕಿನಲ್ಲಿ ಇದೀಗ ಮಳೆಯ ಅಬ್ಬರ ಮುಂದುವರೆದಿದ್ದು ಮಟನ್ ಮಾರ್ಕೆಟ್ ಜಂಕ್ಷನ್ ಬಳಿ ಸಂಪೂರ್ಣ ಜಲಾವೃತವಾಗಿತ್ತು.

ಗುರುವಾರ ಮಧ್ಯಾಹ್ನ ತಾಸುಗಟ್ಟಲೆ ಕಾಲ ಸುರಿದ ಧಾರಾಕಾರ ಮಳೆಗೆ ನೆರೆ ನೀರು ರಸ್ತೆಯಲ್ಲಿ ಹರಿದು ವಾಹನ ಚಾಲಕರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು.

ವೀರಾಜಪೇಟೆ - ಗೋಣಿಕೊಪ್ಪಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯತೊಡಗಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿತ್ತು. ಪಕ್ಕದಲ್ಲಿರುವ ಅಂಗಡಿಯವರು ತೊಂದರೆ ಅನುಭವಿಸಿದರು. ರಸ್ತೆಯಲ್ಲಿ ನೀರು ತುಂಬಿ ಹರಿದ ಪರಿಣಾಮ ಅಕ್ಕಪಕ್ಕದ ಅಂಗಡಿಗಳಿಗೆ ನೀರು ನುಗ್ಗಿತ್ತು. ಮಟನ್ ಮಾರ್ಕೆಟ್ ಬಳಿ ಇರುವ ರಾಜಕಾಲುವೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ರಸ್ತೆ ಬದಿಯಲ್ಲಿ ಇರುವ ಚರಂಡಿಗಳಲ್ಲಿ ತುಂಬಿಕೊAಡ ಪರಿಣಾಮ ನೀರು ಸರಿಯಾಗಿ ಚರಂಡಿ ಮೂಲಕ ಹರಿಯಲು ಸಾಧ್ಯವಾಗದೇ ರಸ್ತೆ ಮೇಲೆ ಹರಿಯಿತು. ಪರಿಣಾಮ ಕಾರೊಂದು ನೀರಿನಲ್ಲಿ ಸಿಲುಕಿಕೊಂಡಿತು. ಹೇಗೋ ನೀರಿನ ಮೇಲೆಯೆ ಬಂದಿದ್ದ ಒಮಿನಿ ಕಾರೊಂದು ಮುಖ್ಯರಸ್ತೆಯ ಸೆರಿನಿಟಿ ಹಾಲ್ ಪಕ್ಕದಲ್ಲಿ ರಸ್ತೆ ಮಧ್ಯೆ ನಿಂತು ಹೋದ ಘಟನೆಯೂ ನಡೆಯಿತು. ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕೆಲವು ದ್ವಿಚಕ್ರ ವಾಹನ ಸವಾರರೂ ತಮ್ಮ ವಾಹನಗಳನ್ನು ತಳ್ಳಿಕೊಂಡು ಹೋಗುತ್ತಿದ್ದುದು ಕಂಡುಬAದಿತು.

ಪುರಸಭೆ ಸಮರ್ಪಕ ಚರಂಡಿ ವ್ಯವಸ್ಥೆ ಮಾಡದ ಪರಿಣಾಮ ಮಳೆ ನೀರು ಹರಿಯಲು ಸಾಧ್ಯವಾಗದೇ ಈ ಘಟನೆಗೆ ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮ ಗಾಳಿಗೆ ಮರದ ಕೊಂಬೆ ರಂಬೆಗಳು ಮುರಿದು ಬೀಳುತ್ತಿವೆ. ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ಮುರಿದ್ದು ಬಿದ್ದಿವೆ, ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿ ತುಂಡಾಗಿದೆ.

ನಿರAತರ ಮಳೆ ಸುರಿಯುತ್ತಿದ್ದು ಬೆಟ್ಟ ಗುಡ್ಡದ ಮೇಲೆ, ನದಿ ಪಾತ್ರದಲ್ಲಿ, ತಗ್ಗು ಪ್ರದೇಶಗಳಲ್ಲಿರುವ ಮಂದಿಯಲ್ಲಿ ಆತಂಕ ಉಂಟಾಗಿದೆ. ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ತಾಲೂಕು ಆಡಳಿತ ಸೂಚನೆ ನೀಡಿದೆ. ನಿರಂತರ ಮಳೆಯಿಂದಾಗಿ ಕಾಫಿತೋಟ, ಗದ್ದೆಗಳು ಜಲಾವೃತಗೊಂಡಿದೆ.

ವೀರಾಜಪೇಟೆ ವಿಭಾಗದ ಆರ್ಜಿ, ಬೇಟೋಳಿ, ಹೆಗ್ಗಳ, ಕೆದಮುಳ್ಳೂರು, ಬಿಟ್ಟಂಗಾಲ, ನಾಲ್ಕೇರಿ, ಕದನೂರು, ಕಾಕೋಟುಪರಂಬು, ಕಂಡAಗಾಲ, ಚೆಂಬೆಬೆಳ್ಳೂರು, ಪಾಲಂಗಾಲ, ದೇವಣಗೇರಿ, ಹಾಲುಗುಂದ, ಒಂಟಿಯAಗಡಿ, ಕಣ್ಣಂಗಾಲ, ಐಮಂಗಲ, ಬಿಳುಗುಂದ, ಅಮ್ಮತ್ತಿ, ಹೊಸೂರು, ಹೊಸಕೋಟೆ, ಕೊಮ್ಮೆತೋಡು, ಮಗ್ಗುಲ, ಐಮಂಗಲ, ಬಾಡಗ, ರುದ್ರಗುಪ್ಪೆ, ಕರಡ, ಕಡಂಗ, ಬೇತ್ರಿ, ಕಿಗ್ಗಾಲು, ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಐಮಂಗಲ, ಕೊಮ್ಮೆತೋಡು, ಬಿಳುಗುಂದ ಅಮ್ಮತ್ತಿ, ಕದನೂರು, ಬಿಟ್ಟಂಗಾಲ, ಆರ್ಜಿ ಭಾಗದಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಹಗಲು ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ.