ಕುಶಾಲನಗರ: ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದ್ದು, ಕುಶಾಲನಗರ ಸಾಯಿ ಬಡಾವಣೆಗೆ ನೀರು ನುಗ್ಗಿದೆ.
ಬಡಾವಣೆಯ ರಾಜಕಾಲುವೆ ಮೂಲಕ ನೀರು ಒಳಗೆ ತುಂಬುತ್ತಿದ್ದು, ಬಡಾವಣೆಯ ಮನೆಗಳ ಚರಂಡಿಗಳ ಮೂಲಕ ಹರಿಯಲು ಆರಂಭಿಸಿದೆ.
ಇನ್ನೊಂದೆಡೆ ಬಡಾವಣೆಯ ಒಳಗೆ ಹರಿಯುವ ಮಳೆ ನೀರಿನಿಂದ ಕೂಡ ಸಮಸ್ಯೆ ಉಂಟಾಗಿದೆ.
ಸಾಯಿ ಬಡಾವಣೆಯಲ್ಲಿ ಒಟ್ಟು ೨೫ ಮನೆಗಳು ಇದ್ದು, ಇಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಯಾವುದೇ ಅಪಾಯ ಸಂಭವಿಸಿದAತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಕುವೆAಪು ಬಡಾವಣೆಯಲ್ಲಿ ನಲವತ್ತಕ್ಕೂ ಅಧಿಕ ಮನೆಗಳ ನಿವಾಸಿಗಳು ಪ್ರವಾಹದ ಆತಂಕಕ್ಕೆ ಒಳಗಾಗಿದ್ದು, ಪ್ರವಾಹ ನಿಯಂತ್ರಣಕ್ಕೆ
ಬಹುತೇಕ ನಿವಾಸಿಗಳು ಸ್ಥಳಾಂತರಗೊಳ್ಳಲು ತಯಾರಿ ನಡೆಸಿದ್ದಾರೆ.
ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್, ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ಬಡಾವಣೆಗೆ ಭೇಟಿ ನೀಡಿದ್ದು, ನಿರ್ಮಾಣಗೊಂಡಿರುವ ತಡೆಗೋಡೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಬಡಾವಣೆಯ ಒಳಭಾಗದಲ್ಲಿ ನೀರು ಸಂಗ್ರಹವಾಗುತ್ತಿದ್ದು, ಇದರಿಂದ ಮನೆಗಳಿಗೆ ನೀರು ಸೇರುವ ಆತಂಕ ನಾಗರಿಕರಲ್ಲಿ ಮನೆ ಮಾಡಿದೆ.