ಕೂಡಿಗೆ, ಜು. ೨೨: ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಮಹಾ ಮಂಡಲದ ನೂತನ ಅಧ್ಯಕ್ಷರಾಗಿ ಎಸ್.ಸಿ. ಚೌಡೇಗೌಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಕುಶಾಲನಗರದ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಒಂದೊAದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ. ಚೌಡೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಹುಣಸೂರು ತಾಲೂಕು ಹನಗೋಡು ಗ್ರಾಮದ ಹೆಚ್.ಎನ್. ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿಯಾಗಿ ಅಗಮಿಸಿದ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ನಾಮಪತ್ರ ಸಲ್ಲಿಸಿದ ಇಬ್ಬರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಮಹೇಶ್, ನಿರ್ದೇಶಕರುಗಳಾದ. ಮಹದೇವ, ಕಿರಣ್ ಕುಮಾರ್, ಹೆಚ್.ಟಿ. ದಿನೇಶ್, ದೇವರಾಜ್, ರಮೇಶ್, ಕೇಶವೇಗೌಡ, ಅಶೋಕ್, ಶಿವಣ್ಣ, ಲೋಕೇಶ್, ತಿಮ್ಮೆಗೌಡ ಹರೀಶ್, ಯತೀಶ್, ಸೇರಿದಂತೆ ಪಿರಿಯಾಪಟ್ಟಣ, ಹುಣಸೂರು, ಅರಕಲಗೂಡು, ಕೊಡಗು ಜಿಲ್ಲೆಯ ನಿರ್ದೇಶಕರು, ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರು ಬಳಕೆದಾರರ ಸಂಘಗಳ ಕಾರ್ಯದರ್ಶಿಗಳು, ಸದಸ್ಯರು ಹಾಜರಿದ್ದರು.