ಶ್ರೀಮಂಗಲ, ಜು. ೨೩: ಜಬ್ಬೂಮಿ ಸಂಘಟನೆ, ರೂಟ್ಸ್ ಆಫ್ ಕೊಡಗು ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕೊಡವ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಗಸ್ಟ್ ೧೦ ರಂದು ಬಿಟ್ಟಂಗಾಲ ಗ್ರಾಮದ ನಾಯಡ ಕುಟುಂಬದ ಮುರುವಂಡ ಮಿಥುನ್ ಅಣ್ಣಯ್ಯ, ಪೊನ್ನಕಚ್ಚಿರ ಪುನೀತ್ ಅವರ ಮೇಲುಸ್ತುವಾರಿಯ ಗದ್ದೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೊಡಗಿನ ಕೃಷಿಯೊಂದಿಗೆ ಸಂಸ್ಕೃತಿ ಮಿಡಿತ ಹೊಂದಿದ್ದು, ಕೃಷಿ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಿ, ಉಳಿಸಿಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮುಖರು ತಿಳಿಸಿದರು.
ಕಾರ್ಯಕ್ರಮಗಳು: ಮುಕ್ತ ಟಗ್ ಆಫ್ ವಾರ್: ಪುರುಷರು ಮತ್ತು ಮಹಿಳೆಯರಿಗಾಗಿ ಗರಿಷ್ಠ ೧೨ ತಂಡಗಳಿಗೆ, ಟಗ್ ಆಫ್ ವಾರ್ (ಶಾಲಾ ಮಕ್ಕಳು) ಕೇವಲ ೧೦ ಶಾಲೆಗಳಿಗೆ (ವಯಸ್ಸಿನ ನಿರ್ಬಂಧವಿಲ್ಲ),
ಕೆಸರುಗದ್ದೆ ಓಟ: ಪುರುಷರು ಮತ್ತು ಮಹಿಳೆಯರಿಗೆ ತಲಾ ೪ ವಿಭಾಗಗಳು, ೬ ವರ್ಷಗಳ ಕೆಳಗೆ, ೬-೧೨ ವರ್ಷ ವಿಭಾಗಕ್ಕೆ, ೧೨-೧೬ ವರ್ಷ ವಿಭಾಗಕ್ಕೆ, ೧೬ ವರ್ಷಕ್ಕಿಂತ ಮೇಲ್ಪಟ್ಟವರ ವಿಭಾಗಕ್ಕೆ ನಡೆಯಲಿದೆ
ಕೆಸರುಗದ್ದೆ ನಡಿಗೆ: ೬೦ ವರ್ಷ ಮೇಲ್ಪಟ್ಟ ಪುರುಷರಿಗೆ ಮಾತ್ರ, ಕೈಪುಳಿ ಹಾಗೂ ಕೈಕಣೆ ನಡಿಗೆ : ೩೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ನಡೆಯಲಿದೆ.
ವಿಶೇಷ ಕಾರ್ಯಕ್ರಮ: ಪ್ರಗತಿ ಶಾಲಾ ಮಕ್ಕಳಿಂದ ಪ್ರಾಯೋಗಿಕ ಗದ್ದೆ ನಾಟಿ ಮಾಡುವುದು. ಪೆರುವನಾಡ್‌ಗೆ ಸಂಬAಧಪಟ್ಟ ಸತತವಾಗಿ ಭತ್ತದ ಕೃಷಿ ಮಾಡುತ್ತಿರುವ ೩ ರೈತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಟಗ್ ಆಫ್ ವಾರ್ ಕ್ರೀಡೆಯಲ್ಲಿ ಭಾಗವಹಿಸುವ ಮೊದಲ ೧೨ ತಂಡಗಳಿಗೆ ಮಾತ್ರ ಪ್ರಶಸ್ತಿ ಇರುವುದರಿಂದ ತಾ. ೦೫.೦೮.೨೦೨೪ರ ಒಳಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಳುವಂಗಡ ಲೋಹಿತ್ ಭೀಮಯ್ಯ ಮೊ.೯೪೮೦೭೩೧೮೭೬ ಹಾಗೂ ಚೇಂದAಡ ಶಮಿ ಬೆಳ್ಯಪ್ಪ ೯೯೪೫೯೯೯೩೬೬ ಸಂಪರ್ಕಿಸಲು ಕೋರಿದೆ.