ಮಡಿಕೇರಿ, ಜು. ೨೩ : ೨೦೨೩-೨೪ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ/ ಪರಸ್ಪರ ವರ್ಗಾವಣೆ/ ಕನಿಷ್ಟ ಅವಧಿ ಮುಗಿದ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರ ಆನ್ಲೈನ್ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕಿರುತ್ತದೆ.
ಅದರಂತೆ ಕೊಡಗು ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ /ಪರಸ್ಪರ ವರ್ಗಾವಣೆ/ಕನಿಷ್ಟ ಅವಧಿ ಮುಗಿದ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರುಗಳಿಗೆ ಆನ್ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆಯು ತಾ.೨೪ ರಿಂದ ೩೦ ರ ವರೆಗೆ ನಡೆಯಲಿದೆ.
ವೇಳಾಪಟ್ಟಿ ಅನುಸಾರ ಸಂಬAಧಿಸಿದ ಶಿಕ್ಷಕರು ನಿಗದಿತ ದಿನಾಂಕದAದು ಕೌನ್ಸಿಲಿಂಗ್ಗೆ ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳೊಂದಿಗೆ ತಪ್ಪದೇ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗಧಾಮಪ್ಪ ಅವರು ತಿಳಿಸಿದ್ದಾರೆ.