ನವದೆಹಲಿ, ಜು. ೨೩: ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ೩ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಎನ್.ಡಿ.ಎ ಸರಕಾರದ ೨೦೨೪-೨೫ನೆ ಸಾಲಿನ ಮುಂಗಡ ಪತ್ರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಖಾಂತರ ಮಂಡಿಸಿದರು.

೪೮.೨೧ ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ ಕೃಷಿ ಅಭಿವೃದ್ಧಿ, ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ, ಉತ್ಪಾದನಾ ವಲಯಕ್ಕೆ ಉತ್ತೇಜನ, ನಗರಾಭಿವೃದ್ಧಿ, ಇಂಧನ ವಲಯದ ಸುರಕ್ಷತೆ, ಮೂಲಭೂತ ಸೌಕರ್ಯ, ಆವಿಷ್ಕಾರ ಹಾಗೂ ಸಂಶೋಧನಾ ಮತ್ತು ಅಭಿವೃದ್ಧಿ ವಲಯಕ್ಕೆ ಒತ್ತು ಹಾಗೂ ಮುಂದಿನ ತಲೆಮಾರುಗಳ ದೂರದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಸುಧಾರಣೆಗಳನ್ನು ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು. ರೈತರು, ಬಡವರು, ಯುವ ಜನತೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ ‘ವಿಕಸಿತ ಭಾರತ’ ಗುರಿಯತ್ತ ಸಾಗುವ ದೃಷ್ಟಿಯಿಂದ ಈ ಬಾರಿಯ ಮುಂಗಡ ಪತ್ರವನ್ನು ತಯಾರಿಸಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಪ್ರತಿ ಬಾರಿಯ ಬಜೆಟ್‌ನಲ್ಲಿ ಬಹುನಿರೀಕ್ಷಿತವಾಗಿರುವ ತೆರಿಗೆ ಪಾವತಿ ವಿಷಯವು ಈ ಬಾರಿಯೂ ಅತಿ ಹೆಚ್ಚಾಗಿ ಚರ್ಚಿಸಲಾದ ವಿಷಯವಾಗಿತ್ತು. ನೂತನ ಬಜೆಟ್‌ನಲ್ಲಿ, ಆದಾಯ ತೆರಿಗೆ ಸಂಬAಧ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ವಾರ್ಷಿಕ ರೂ.೩ ಲಕ್ಷದವರೆಗೆ ವೇತನ ಪಡೆಯುವವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ರೂ.೩ ಲಕ್ಷದಿಂದ ೭ ಲಕ್ಷದವರೆಗೆ ಶೇ.೫, ರೂ.೭ ಲಕ್ಷದಿಂದ ೧೦ ಲಕ್ಷದವರೆಗೆ ಶೇ.೧೦, ರೂ.೧೦ ಲಕ್ಷದಿಂದÀ ೧೨ ಲಕ್ಷ ಸಂಪಾದಿಸುವವರಿಗೆ ಶೇ.೧೫, ರೂ.೧೨ ಲಕ್ಷದಿಂದ ೧೫ ಲಕ್ಷದಷ್ಟು ಆದಾಯ ಪಡೆಯುವವರಿಗೆ ಶೇ.೨೦ ಹಾಗೂ ರೂ.೧೫ ಲಕ್ಷಕ್ಕಿಂತಲೂ ಹೆಚ್ಚು ಸಂಪಾದಿಸುವವರು ಶೇ.೩೦ ರಷ್ಟು ಭಾಗವನ್ನು ಆದಾಯ ತೆರಿಗೆ ರೂಪದಲ್ಲಿ ಕಟ್ಟಬೇಕಾಗಿದೆ. ವಿದೇಶಿ ಸಂಸ್ಥೆಗಳಿಗೆ ವಿಧಿಸುವ ಕಾರ್ಪೊರೇಟ್ ಟ್ಯಾಕ್ಸ್ ಮೊತ್ತವನ್ನು ಶೇ.೪೦ ರಿಂದ ಶೇ.೩೫ಕ್ಕೆ ಇಳಿಸಲಾಗಿದೆ. ನವೋದ್ಯಮಕ್ಕೆ ಉತ್ತೇಜನ ನೀಡುವುದಲ್ಲದೆ ನಾಗರಿಕರಿಗಿರುವ ತೆರಿಗೆಯ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿರುವುದಾಗಿ ಮುಂಗಡ ಪತ್ರ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಅಭಿಪ್ರಾಯಪಟ್ಟರು.

ಪ್ರಮುಖ ಯೋಜನೆಗಳು

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ರೂ.೮೬ ಸಾವಿರ ಕೋಟಿ, ಸಂಶೋಧನಾ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ರೂ.೧,೨೦೦ ಕೋಟಿ, ಪರಮಾಣು ಸಂಬAಧಿ ಯೋಜನೆಗಳಿಗೆ ರೂ.೨,೨೨೮ ಕೋಟಿ, ಔಷಧೀಯ ವಲಯಕ್ಕೆ ರೂ.೨,೧೪೩ ಕೋಟಿ, ಫೋನ್ ಇತ್ಯಾದಿ ಆಧುನಿಕ ವಿದ್ಯುತ್ ಯಂತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಸೆಮಿಕಂಡಕ್ಟರ್ ಹಾಗೂ ಸ್ಕಿçÃನ್‌ಗಳ ಉತ್ಪಾದನೆಗಾಗಿ ರೂ.೬,೯೦೩ ಕೋಟಿ, ಸೌರ ವಿದ್ಯುತ್ ವಲಯಕ್ಕೆ ರೂ.೧೦ ಸಾವಿರ ಕೋಟಿ ಮೀಸಲಿಡಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಳ ಅನುಷ್ಠಾನ ಸಂಬAಧ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಕೃಷಿಗೆ ರೂ.೧.೫೨ ಲಕ್ಷ ಕೋಟಿ - ನೈಸರ್ಗಿಕ ಕೃಷಿಗೆ ಒತ್ತು

ಮುಂದಿನ ೨ ವರ್ಷಗಳ ಅವಧಿಯಲ್ಲಿ ೧ ಕೋಟಿ ರೈತರನ್ನು ನೈಸರ್ಗಿಕ ಕೃಷಿಯತ್ತ ಗಮನ ಸೆಳೆದು ಅವರುಗಳು ಬೆಳೆಯುವ

(ಮೊದಲ ಪುಟದಿಂದ) ಬೆಳೆಗಳಿಗೆ ಬ್ರಾö್ಯಂಡಿAಗ್ ಹಾಗೂ ಪ್ರಮಾಣ ಪತ್ರಗಳ ಮುಖಾಂತರ ಬೆಂಬಲ ನೀಡಲಾಗುವುದು. ಈ ನೈಸರ್ಗಿಕ ಕೃಷಿಗೆ ಅಗತ್ಯವಿರುವ ಜೈವಿಕ ಸಂಪನ್ಮೂಲಗಳನ್ನು ದೇಶಾದ್ಯಂತ ಸುಮಾರು ೧೦,೦೦೦ ಕೇಂದ್ರಗಳನ್ನು ಸ್ಥಾಪಿಸಿ ಅವುಗಳ ಮೂಲಕ ರೈತರಿಗೆ ನೀಡಲಾಗುವುದು. ಎಲ್ಲಾ ಹವಾಮಾನಗಳಿಗೂ ಹೊಂದಿಕೊಳ್ಳುವ ೩೨ ತೋಟಗಾರಿಕಾ ಹಾಗೂ ಇತರ ಬೆಳೆಗಳ ೧೦೯ ನೂತನ ತಳಿಗಳನ್ನು ಬಿಡುಗಡೆ ಮಾಡಿ ರೈತರಿಗೆ ವಿತರಣೆ ಮಾಡಲಾಗುವುದು. ಸಹಕಾರ ಸಂಘಗಳು ಹಾಗೂ ನವೋದ್ಯಮಗಳ ಮೂಲಕ ರೈತರು ಬೆಳೆಯುವ ತರಕಾರಿಗಳ ಸಂಗ್ರಹ, ಪ್ರಚಾರ ಹಾಗೂ ಮಾರಾಟಕ್ಕೆ ಉತ್ತೇಜನ ನೀಡಲಾಗುವುದು. ಡಿಜಿಟಲ್ ಪಬ್ಲಿಕ್ ಇನ್ಫಾçಸ್ಟçಕ್ಚರ್ ಮೂಲಕ ೪೦೦ ಜಿಲ್ಲೆಗಳಲ್ಲಿ ರೈತರ ಜಮೀನುಗಳ ಡಿಜಿಟಲ್ ಸರ್ವೆಯನ್ನು ನಡೆಸಲಾಗುವುದು.

ಹೊಸದಾಗಿ ಉದ್ಯೋಗ ಪಡೆಯುವವರಿಗೆ ತಿಂಗಳ ವೇತನ ರೂ.೧೫,೦೦೦ ಪಾವತಿ

೨೦ ಲಕ್ಷ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ

ಸರಕಾರಕ್ಕೆ ತೆರಿಗೆ ಪಾವತಿಸುವ ವಲಯದಲ್ಲಿ (‘ಫಾರ್ಮಲ್ ಸೆಕ್ಟರ್’) ಹೊಸದಾಗಿ ಉದ್ಯೋಗ ಪಡೆಯುವವರಿಗೆ ಒಂದು ತಿಂಗಳ ವೇತನ ರೂ.೧೫,೦೦೦ದವರೆಗೆ ನೀಡಿ ಪ್ರೋತ್ಸಾಹ ಕೊಡಲಾಗುವುದು. ೨೧೦ ಲಕ್ಷ ಮಂದಿ ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ೨೦ ಲಕ್ಷ ಯುವಜನರಿಗೆ ೫ ವರ್ಷ ಅವಧಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ಇದಕ್ಕಾಗಿ ೧,೦೦೦ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಮಹಿಳೆಯರನ್ನು ಉದ್ಯೋಗದತ್ತ ಆಕರ್ಷಿಸಲು ಉದ್ಯೋಗಸ್ತ ಮಹಿಳೆಯರ ಹಾಸ್ಟೆಲ್‌ಗಳನ್ನು ಸ್ಥಾಪಿಸಲಾಗುವುದು. ೨೫,೦೦೦ ವಿದ್ಯಾರ್ಥಿಗಳಿಗೆ ತಲಾ ರೂ.೭.೫ ಲಕ್ಷ ಸಾಲದ ಸೌಲಭ್ಯ ಹಾಗೂ ಉನ್ನತ ಶಿಕ್ಷಣ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಸರಕಾರಿ ಬೆಂಬಲಿತ ರೂ.೧೦ ಲಕ್ಷದವರೆಗೆ ಸಾಲ ನೀಡುವ ಸೌಲಭ್ಯವನ್ನು ನೀಡಲಾಗುವುದು. ಇ.ಪಿ.ಎಫ್.ಒ ಮೂಲಕ ಉದ್ಯೋಗದಾತರು ನೀಡುತ್ತಿರುವ ಕೊಡುಗೆಯನ್ನು ಅವರುಗಳ ಸಂಸ್ಥೆಗೆ ಹೊಸದಾಗಿ ಸೇರುವ ಉದ್ಯೋಗಸ್ಥರ ಸಂಖ್ಯೆ ಆಧಾರದಲ್ಲಿ, ಕೆಲಸಕ್ಕೆ ಸೇರಿ ೨ ವರ್ಷಗಳ ಅವಧಿವರೆಗೆ ರೂ.೩,೦೦೦ ಹಣವು ಸರಕಾರದಿಂದ ಉದ್ಯೋಗದಾತರಿಗೆ ಮರುಪಾವತಿಯಾಗಲಿದೆ.

ಕೈಗಾರಿಕಾ ವಲಯಕ್ಕೆ ಒತ್ತು - ೧ ಕೋಟಿ ಯುವಜನತೆಗೆ ಇಂಟರ್ನ್ಶಿಪ್ ೫ ವರ್ಷಗಳಲ್ಲಿ ೫೦೦ ವಿವಿಧ ಸಂಸ್ಥೆಗಳಲ್ಲಿ ಒಟ್ಟು ೧ ಕೋಟಿ ಯುವಜನತೆಗೆ ಇಂಟರ್ನ್ಶಿಪ್ ನೀಡಲಾಗುವುದು. ಈ ಸಂದರ್ಭ ರೂ.೫,೦೦೦ ಮಾಸಿಕ ಸಂಭಾವನೆಯನ್ನು ನೀಡುವುದಲ್ಲದೆ ಸಿ.ಎಸ್.ಆರ್ ನಿಧಿ ಮೂಲಕ ರೂ.೬,೦೦೦ ಪ್ರೋತ್ಸಾಹಧನ (ಒಂದು ಬಾರಿಗೆ ಮಾತ್ರ) ನೀಡಲಾಗುವುದು. ಉತ್ಪಾದನೆ ವಲಯದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಕ್ರ‍್ರೆಡಿಟ್ ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ರಾಷ್ಟಿçÃಯ ಕೈಗಾರಿಕಾ ಅಭಿವೃದ್ಧಿ ಕಾರ್ಯಕ್ರಮದಡಿ ೧೨ ಕೈಗಾರಿಕಾ ಉದ್ಯಾನಗಳನ್ನು ದೇಶದ ವಿವಿಧೆಡೆ ಸ್ಥಾಪಸಿಲಾಗುವುದು.

ನಗರಾಭಿವೃದ್ಧಿಗೆ ಒತ್ತು - ೧ ಕೋಟಿ ಬಡ ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯ

ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ನಗರ ಪ್ರದೇಶಗಳಲ್ಲಿನ ೧ ಕೋಟಿ ಬಡ ಹಾಗೂ ಮಧ್ಯಮ ವರ್ಗದ ಜನರ ಮೂಲಭೂತ ಸೌಕರ್ಯಗಳಿಗಾಗಿ ರೂ.೧೦ ಲಕ್ಷ ಕೋಟಿ ಮೀಸಲಿಡಲಾಗುವುದು. ಮಹಿಳೆಯರು ಖರೀದಿಸುವ ಆಸ್ತಿಗಳ ಮೇಲಿನ ಸ್ಟಾö್ಯಂಪ್ ಡ್ಯೂಟಿಯನ್ನು ಕಡಿತಗೊಳಿಸಲು ರಾಜ್ಯಗಳಿಗೆ ಸೂಚಿಸಲಾಗುವುದು. ಪ್ರಮುಖ ಆಯ್ದ ನಗರಗಳಲ್ಲಿ ೧೦೦ ‘ಸ್ಟಿçÃಟ್ ಫುಡ್ ಹಬ್ಸ್’ ಸ್ಥಾಪಿಸುವ ಮೂಲಕ ‘ಸ್ಟಿçÃಟ್ ಮಾರ್ಕೆಟ್’ ಗಳಿಗೆ ಪ್ರೋತ್ಸಾಹ ನೀಡಲಾಗುವುದು. ೧೦೦ ಅತಿದೊಡ್ಡ ನಗರಗಳಲ್ಲಿ ಸೂಕ್ತ ನೀರು ಸರಬರಾಜು, ಕೊಳಚೆ ನೀರು ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆಯನ್ನು ವಿವಿಧ ನಗರಾಭಿವೃದ್ಧಿ ಯೋಜನೆಗಳ ಮೂಲಕ ನೆರವೇರಿಸುವುದಕ್ಕೆ ಒತ್ತು ನೀಡಲಾಗಿದೆ.

ಮೂಲಭೂತ ಸೌಕರ್ಯಕ್ಕೆ ರೂ.೧೧ ಲಕ್ಷ ಕೋಟಿ

ದೇಶದ ಜಿ.ಡಿಪಿಯ ಶೇ.೩.೪ ನಷ್ಟು, ಅಂದರೆ, ರೂ.೧೧,೧೧,೧೧೧ ಕೋಟಿಯಷ್ಟು ಹಣವನ್ನು ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲು ಮೀಸಲಿಡಲಾಗಿದೆ. ರೂ.೧.೫ ಲಕ್ಷ ಕೋಟಿ ಸಾಲವನ್ನು ರಾಜ್ಯಗಳಿಗೆ ಬಡ್ಡಿ ರಹಿತವಾಗಿ ನೀಡಿ ಸಂಪನ್ಮೂಲ ಹಂಚಿಕೆ ಸಂಬAಧ ನೀಡುವ ಸೌಲಭ್ಯ ನೀಡಲಾಗುವುದು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ೨೫,೦೦೦ ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಂಪರ್ಕ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಬುಡಕಟ್ಟು ಜನಾಂಗಕ್ಕೆ ಸಾಮಾಜಿಕ ಭದ್ರತೆ

ಪ್ರಧಾನಮಂತ್ರಿ ಜನ್‌ಜತಿಯ ಉನ್ನತ ಗ್ರಾಮ ಅಭಿಯಾನದ ಮೂಲಕ ೬೩,೦೦೦ ಗ್ರಾಮಗಳಲ್ಲಿ ನೆಲೆಸಿರುವ ೫ ಕೋಟಿ ಬುಡಕಟ್ಟು ಜನಾಂಗದವರ ಸಾಮಾಜಿಕ ಭದ್ರತೆಗೆ ಒತ್ತು ನೀಡಲಾಗುವುದು. ಈಶಾನ್ಯ ರಾಜ್ಯಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ೧೦೦ಕ್ಕೂ ಅಧಿಕ ಶಾಖೆಗಳನ್ನು ತೆರೆಯಲಾಗುವುದು.