ರಾಜ್ಯ ಸರ್ಕಾರದಿಂದ ಮಾಲ್‌ಗಳಿಗೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು, ಜು. ೨೨: ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಪಂಚೆ ಧರಿಸಿ ಬಂದಿದ್ದ ರೈತನ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಮಾಲ್‌ಗಳು ಮತ್ತು ಇತರ ಸಂಸ್ಥೆಗಳಿಗೆ ಈ ಸಂಬAಧ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಘಟನೆಯ ನಂತರ ಜುಲೈ ೧೮ ರಂದು ರಾಜ್ಯ ಸರ್ಕಾರ ಜಿ ಟಿ ವರ್ಲ್ಡ್ ಮಾಲ್ ಅನ್ನು ಏಳು ದಿನಗಳ ಕಾಲ ಬಂದ್ ಮಾಡಿತ್ತು. ಮಾಲ್‌ನಲ್ಲಿ ರೈತರೊಬ್ಬರಿಗೆ ಪ್ರವೇಶ ನಿರಾಕರಿಸಿದ ಘಟನೆ ಸದನದಲ್ಲಿ ಚರ್ಚೆಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರದಿಂದಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಡಿಸಿಎಂ ಶಿವಕುಮಾರ್ ಸದನಕ್ಕೆ ತಿಳಿಸಿದರು. ಪಂಚೆ ಉಟ್ಟುಕೊಂಡು ಬಂದವರಿಗೆ ಯಾವುದೇ ಮಾಲ್‌ಗಳಲ್ಲಿ ಪ್ರವೇಶ ನಿರಾಕರಣೆ ಮಾಡಬಾರದು. ರೈತರಿಗೆ ಪ್ರವೇಶ ನೀಡದ ಮಾಲ್‌ಗೆ ನೋಟಿಸ್ ನೀಡಲಾಗಿತ್ತು. ಆ ಮಾಲ್‌ನವರು ಕ್ಷಮೆ ಯಾಚಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದಾಗಿಯೂ ಹೇಳಿದ್ದಾರೆ. ಜತೆಗೆ ಮಾಲ್‌ನ ತೆರಿಗೆ ಬಾಕಿ ಇತ್ತು. ಆ ಬಾಕಿ ಪಾವತಿಗೆ ಚೆಕ್ ಪಡೆದು ಮಾಲ್ ತೆರೆಯಲು ಅನುಮತಿ ನೀಡಲಾಗಿದೆ ಎಂದರು.

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್‌ಗೆ ಜಾಮೀನು

ಬೆಂಗಳೂರು, ಜು. ೨೨: ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೊಳೆನರಸೀಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ಸಂಬAಧಿಸಿದAತೆ ಜಾಮೀನು ಕೋರಿ ಸೂರಜ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಇಂದು ಎರಡೂ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿ ಸೂರಜ್ ರೇವಣ್ಣ ಯಾವುದೇ ರೀತಿಯಲ್ಲೂ ಸಂತ್ರಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು. ತನಿಖಾಧಿಕಾರಿ ಮುಂದೆ ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ.

ಆರ್ಥಿಕ ಸಮೀಕ್ಷೆ ಬೆಳವಣಿಗೆ ನಿರೀಕ್ಷೆ

ನವದೆಹಲಿ, ಜು. ೨೨: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ೨೦೨೩-೨೪ ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಪ್ರಕಟಿಸಿದ್ದಾರೆ. ಸಮೀಕ್ಷೆಯ ಪ್ರಕಾರ ೨೦೨೪-೨೫ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ.೬.೫-೭ ರಷ್ಟು ಬೆಳವಣಿಗೆಯನ್ನು ಅಂದಾಜಿಸಿದೆ. ಆರ್ಥಿಕ ಸಮೀಕ್ಷೆ ವಾರ್ಷಿಕ ಡಾಕ್ಯುಮೆಂಟ್ ಆಗಿದ್ದು, ಸರ್ಕಾರ ಇದನ್ನು ಆರ್ಥಿಕ ಸ್ಥಿತಿಯ ಪರಿಶೀಲನೆಗಾಗಿ ಬಜೆಟ್‌ಗೂ ಮುನ್ನ ಪ್ರಕಟಿಸುತ್ತದೆ. ಡಾಕ್ಯುಮೆಂಟ್ ಆರ್ಥಿಕತೆಯ ಅಲ್ಪಾವಧಿಯಿಂದ ಮಧ್ಯಮ ಅವಧಿಯ ಭವಿಷ್ಯದ ಅವಲೋಕನವನ್ನು ಸಹ ಒದಗಿಸುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗದಿಂದ ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸಲಾಗಿದೆ. ಮೊದಲ ಆರ್ಥಿಕ ಸಮೀಕ್ಷೆಯು ೧೯೫೦-೫೧ ರಲ್ಲಿ ಬಜೆಟ್ ದಾಖಲೆಗಳ ಭಾಗವಾಗಿ ಅಸ್ತಿತ್ವಕ್ಕೆ ಬಂದಿತ್ತು. ೧೯೬೦ರ ದಶಕದಲ್ಲಿ, ಇದನ್ನು ಕೇಂದ್ರ ಬಜೆಟ್‌ನಿಂದ ಪ್ರತ್ಯೇಕಿಸಲಾಯಿತು ಮತ್ತು ಬಜೆಟ್ ಮಂಡನೆಗೆ ಒಂದು ದಿನ ಮೊದಲು ಮಂಡಿಸಲಾಗುತ್ತದೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನ : ಮನವಿ ತಿರಸ್ಕಾರ

ದೆಹಲಿ, ಜು. ೨೨: ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಎನ್‌ಡಿಎ ಸೇರಿರುವ ಹಲವು ರಾಜಕೀಯ ಪಕ್ಷಗಳು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಬೆಂಬಲಿಸಿದ್ದವು. ಅಲ್ಲದೆ ಇಂದು ಜೆಡಿಯುನ ರಾಮ್‌ಪ್ರೀತ್ ಮಂಡಲ್ ಅವರು ಸಂಸತ್ತಿನಲ್ಲಿ ಈ ಕುರಿತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದಾಗ, ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಯಾವುದೇ ಮಾನದಂಡದಲ್ಲಿ ಬಿಹಾರ ಹೊಂದಿಕೆಯಾಗುವುದಿಲ್ಲ ಎಂದು ಹಣಕಾಸು ರಾಜ್ಯ ಸಚಿವರು ಹೇಳಿದ್ದಾರೆ. ಆರ್ಥಿಕ ಅಭಿವೃದ್ಧಿ ಮತ್ತು ಕೈಗಾರಿಕೀಕರಣವನ್ನು ಉತ್ತೇಜಿಸಲು ಹೊರ ರಾಜ್ಯಗಳು ಮತ್ತು ಇತರ ಅತ್ಯಂತ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲು ಸರ್ಕಾರ ಪ್ರಸ್ತಾಪಿಸುತ್ತದೆಯೇ, ಹಾಗಿದ್ದರೆ ವಿವರಗಳನ್ನು ನೀಡಿ ಎಂದು ಕೇಳಿದ್ದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಈ ಹಿಂದೆ, ರಾಷ್ಟಿçÃಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಹಲವು ಗುಣಲಕ್ಷಣಗಳನ್ನು ಹೊಂದಿರುವ ಕೆಲವು ರಾಜ್ಯಗಳಿಗೆ ವಿಶೇಷ ಗಮನ ನೀಡಬೇಕಾದ ವಿಶೇಷ ವರ್ಗದ ಸ್ಥಾನಮಾನವನ್ನು ನೀಡಿತ್ತು. ಈ ವೈಶಿಷ್ಟö್ಯಗಳಲ್ಲಿ ಗುಡ್ಡಗಾಡು ಮತ್ತು ಕಷ್ಟಕರವಾದ ಭೂಪ್ರದೇಶ, ಕಡಿಮೆ ಜನಸಂಖ್ಯೆ ಅಥವಾ ಬುಡಕಟ್ಟು ಜನಸಂಖ್ಯೆಯ ಹೆಚ್ಚಿನ ಪಾಲು, ನೆರೆಯ ದೇಶಗಳೊಂದಿಗೆ ಗಡಿಗಳ ಆಯಕಟ್ಟಿನ ಸ್ಥಳ, ಆರ್ಥಿಕ ಮತ್ತು ಮೂಲಸೌಕರ್ಯ ಹಿಂದುಳಿದಿರುವಿಕೆ ಮತ್ತು ರಾಜ್ಯದ ಹಣಕಾಸಿನ ಆರ್ಥಿಕತೆಯ ಅಸಮರ್ಥತೆ ಈ ಕಾರಣಗಳಿದ್ದಾಗ ಮಾತ್ರ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಈ ಹಿಂದೆ, ವಿಶೇಷ ವರ್ಗದ ಸ್ಥಾನಮಾನಕ್ಕಾಗಿ ಬಿಹಾರದ ಮನವಿಯನ್ನು ಇಂಟರ್-ಮಿನಿಸ್ಟಿçಯಲ್ ಗ್ರೂಪ್ (Iಒಉ) ಪರಿಗಣಿಸಿತ್ತು. ಅದು ೨೦೧೨ರಲ್ಲಿ ವರದಿಯನ್ನು ಸಲ್ಲಿಸಿತು. Iಒಉ ಅಸ್ತಿತ್ವದಲ್ಲಿರುವ ಓಆಅ ಮಾನದಂಡಗಳು ಈ ಆಧಾರದ ಮೇಲೆ, ಅಲ್ಲಿ ತೀರ್ಮಾನಿಸಿದೆ. ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನಕ್ಕೆ ಯಾವುದೇ ಸಂದರ್ಭವಿಲ್ಲ ಎಂದು ಹೇಳಿದರು. ಹಣಕಾಸು ಖಾತೆ ರಾಜ್ಯ ಸಚಿವರ ಈ ಹೇಳಿಕೆಗೆ ರಾಷ್ಟಿçÃಯ ಜನತಾ ದಳ (ಆರ್‌ಜೆಡಿ) ತಿರುಗೇಟು ನೀಡಿದೆ.

ಮುಡಾ, ವಾಲ್ಮೀಕಿ ನಿಗಮ ಹಗರಣ: ಸಿ.ಬಿ.ಐ ತನಿಖೆಗೆ ಆಗ್ರಹ

ಬೆಳಗಾವಿ, ಜು. ೨೨: ಕಾಂಗ್ರೆಸ್ ಪಕ್ಷದ ಡಿಎನ್‌ಎಯಲ್ಲಿ ಭ್ರಷ್ಟಾಚಾರ ಇದೆ. ಇದು ದೇಶದಲ್ಲಿ ರಕ್ತ- ಬಿಜಾಸುರ ರೀತಿಯಲ್ಲಿ ಪ್ರಾರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಡಿಎನ್‌ಎ ಹೊಂದಿದ್ದಾರೆ. ಅವರು ಮೊದಲು ರಾಜೀನಾಮೆ ನೀಡಬೇಕು ಮತ್ತು ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ದೇಶದ ಎಲ್ಲ ಕಾಂಗ್ರೆಸ್ ಪ್ರಧಾನಿಗಳ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರವನ್ನು ಈಗ ಹಗರಣಗಳು ಎಂದು ಕರೆಯಲಾಗುತ್ತಿದೆ. ಈಗ ಸಿದ್ದರಾಮಯ್ಯನವರ ಅವಧಿಯಲ್ಲಿ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ. ಆದರೆ, ಸಿದ್ದರಾಮಯ್ಯ ಯಾವುದೇ ಹಿಂಜರಿಕೆ ಮತ್ತು ನಾಚಿಕೆ ಇಲ್ಲದೆ ತಮ್ಮನ್ನು ಮತ್ತು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ ಎಂದರು.

ಉತ್ತರ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಆದೇಶ

ನವದೆಹಲಿ, ಜು. ೨೨: ನೀಟ್-ಯುಜಿ ಪರೀಕ್ಷೆಯಲ್ಲಿನ ವಿವಾದಿತ ಪ್ರಶ್ನೆಗೆ ಸರಿಯಾದ ಉತ್ತರವನ್ನು ಮೌಲ್ಯಮಾಪನ ಮಾಡಲು ಮತ್ತು ನಿರ್ಧರಿಸಲು ಮಂಗಳವಾರ ಮಧ್ಯಾಹ್ನದೊಳಗೆ ಮೂವರು ವಿಷಯ ತಜ್ಞರ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಐಐಟಿ ದೆಹಲಿಯ ನಿರ್ದೇಶಕರಿಗೆ ಸೂಚನೆ ನೀಡಿದೆ. ಒಂದೇ ಪ್ರಶ್ನೆಗೆ ಎರಡು ಸಂಭವನೀಯ ಉತ್ತರಗಳಿಗೆ ಅಂಕಗಳನ್ನು ನೀಡುವ ರಾಷ್ಟಿçÃಯ ಪರೀಕ್ಷಾ ಸಂಸ್ಥೆ (ಓಖಿಂ) ನಿರ್ಧಾರದ ವಿರುದ್ಧ ಕೆಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಈ ನಿರ್ದೇಶನ ನೀಡಿದೆ. ಪರೀಕ್ಷೆಯಲ್ಲಿ ಒಂದೇ ಪ್ರಶ್ನೆಗೆ ಎರಡು ಸರಿಯಾದ ಉತ್ತರಗಳಿವೆ ಎಂದು ಕೆಲವು ಅರ್ಜಿದಾರರು ತಿಳಿಸಿದ ನಂತರ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ. ಹಳೆಯ ಮತ್ತು ಹೊಸ ಓಅಇಖಖಿ ಪಠ್ಯಕ್ರಮಗಳ ಪ್ರಕಾರ, ಓಖಿಂ, "ಸರಿಯಾದ" ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಿದೆ. ಎನ್‌ಟಿಎ ನಿರ್ಧಾರವು ಅಸಮಂಜಸ ಮತ್ತು ಅನ್ಯಾಯವಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.