ಗೋಣಿಕೊಪ್ಪ ವರದಿ, ಜು. ೨೩: ಬಾಸ್ಕೆಟ್ ಬಾಲ್ ಕ್ಲಬ್ ೫೦ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸ್ಥಾಪಕ ಚೆಪ್ಪುಡೀರ ಸುಭಾಷ್ ಮುತ್ತಣ್ಣ ಅವರನ್ನು ಸನ್ಮಾನಿಸ ಲಾಯಿತು. ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

ಪ್ರತಿಭಾನ್ವಿತ ಬಾಸ್ಕೆಟ್ ಬಾಲ್ ಹಾಗೂ ಹಾಕಿ ಆಟಗಾರರಿಗೆ ತರಬೇತಿ ನೀಡುತ್ತಾ ಬಂದಿರುವ ಬಗ್ಗೆ ಮಾಹಿತಿ ನೀಡಲಾಯಿತು. ಲೆ. ಕರ್ನಲ್ ಬಾಳೆಯಡ ಸುಬ್ರಮಣಿ, ಬುಟ್ಟಿಯಂಡ ಚಂಗಪ್ಪ, ಕುಪ್ಪಂಡ ನಾಚಪ್ಪ, ರಾಜ್ಯ ಹಾಗೂ ರಾಷ್ಟಿçÃಯ ತಂಡಕ್ಕೆ ಆಡುವಂತಹ ಪ್ರತಿಭಾವಂತ ಆಟಗಾರರನ್ನು ಹೊರ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಬಿರುನಾಣಿಯಲ್ಲಿ ಬೇಸಿಗೆ ಶಿಬಿರ ನಡೆಸಿದಂತೆ ಮುಂದಿನ ವರ್ಷ ೫೦ನೇ ವಾರ್ಷಿಕೋತ್ಸವದ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ಉಚಿತವಾಗಿ ಆಯೋಜಿಸಬೇಕು ಎಂಬ ಸಲಹೆ ವ್ಯಕ್ತವಾಯಿತು.

ಪುಚ್ಚಿಮಾಡ ಹರೀಶ್ ದೇವಯ್ಯ, ಮುಂಡುಮಾಡ ರಾಮು, ಮನೆಯಪಂಡ ಸುಬ್ಬಯ್ಯ, ಮೋತಿ, ಕೊಳುವಂಡ ಸುಬ್ರಮಣಿ, ಕಂಜಿತAಡ ಪೊನ್ನು, ಒಲಿಂಪಿಯನ್ ರಘುನಾಥ್ ಅವರ ತಂದೆ ರಾಮಚಂದ್ರ, ಚೆಪ್ಪುಡೀರ ಸುಭಾಷ್ ಮುತ್ತಣ್ಣ ಅವರ ಪತ್ನಿ ಕುಸುಮ ಸುಭಾಷ್ ಹಾಗೂ ಚೆಪ್ಪುಡೀರ ತಮ್ಮಿ ಮಾದಯ್ಯ ಅವರ ಪತ್ನಿ ಅಕ್ಕಮ್ಮ ಮಾದಯ್ಯ ಹಾಜರಿದ್ದರು. ಬಾಸ್ಕೆಟ್ ಬಾಲ್ ಆಟಗಾರರಾದ ರವಿ, ವಾಣಿ, ಗೌರು, ವಿಶ್ವನಾಥ್, ಜ್ಯೋತಿ, ಪಳಂಗAಡ ಸುರೇಶ್, ದೇವಯ್ಯ ಹಾಗೂ ವೀಕ್ಷಕ ವಿವರಣೆಗಾರರಾದ ಚೆಪ್ಪುಡೀರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್ ಉಪಸ್ಥಿತರಿದ್ದರು.