ವೀರಾಜಪೇಟೆ, ಜು. ೨೩: ನಾಟಿಗೆ ಅಣಿಯಾಗಿದ್ದ ಭತ್ತದ ಗದ್ದೆಯಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಹಾನಿಗೊಳಿಸಿರುವ ಘಟನೆ ಐಮಂಗಲ ಗ್ರಾಮದಲ್ಲಿ ನಡೆದಿದೆ. ಚೆಂಬೆಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐಮಂಗಲ ಗ್ರಾಮದ ಕುಂಡ್ರAಡ ಮತ್ತು ಬೊಳ್ಳಚಂಡ ಕುಟುಂಬಕ್ಕೆ ಸೇರಿದ ಗದ್ದೆ ಮತ್ತು ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ನಷ್ಟ ಉಂಟು ಮಾಡಿವೆ.
ಮಲೆತಿರಿಕೆ ಬೆಟ್ಟದ ತಪ್ಪಲಿನಲ್ಲಿರುವ ಮತ್ತು ಬೆಟ್ಟಕ್ಕೆ ಹೊಂದಿಕೊAಡಿರುವ ಗ್ರಾಮಸ್ಥರ ತೋಟದಲ್ಲಿ ಕೆಲವು ತಿಂಗಳುಗಳಿAದ ಬೀಡು ಬಿಟ್ಟಿರುವ ಕಾಡಾನೆಗಳು ಮುಂಜಾನೆ ಬೆಟ್ಟದಿಂದ ಇಳಿದು ಸಂಜೆ ಬೆಟ್ಟಕ್ಕೆ ತೆರಳುತ್ತಿರುವುದು ಮಾಮೂಲಿಯಾಗಿದೆ. ಕಾಡಾನೆಗಳಿಂದ ತೋಟಕ್ಕೆ ತೆರಳಲು ಅಸಾಧ್ಯವಾಗಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಕಾರ್ಮಿಕರು ತೋಟದ ಮಾಲೀಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತಿದ್ದಾರೆ ಎಂದು ಕಾಫಿ ತೋಟದ ಮಾಲೀಕ ಬೊಳ್ಳಚಂಡ ಪ್ರಕಾಶ್ ತಿಳಸಿದ್ದಾರೆ.
ಗ್ರಾಮಸ್ಥರಾದ ಕುಂಡ್ರAಡ ಮುದ್ದಯ್ಯ ಮಾತನಾಡಿ, ಭತ್ತದ ಗದ್ದೆಗಳನ್ನು ನಂಬಿಕೊAಡು ಜೀವನ ಸಾಗಿಸುವ ರೈತರು ಕಾಡಾನೆಗಳ ಧಾಳಿಯಿಂದಾಗಿ ಈ ಭಾಗದಲ್ಲಿ ಗದ್ದೆಗಳನ್ನು ಹಾಗೆಯೆ ಬಿಟ್ಟಿದ್ದಾರೆ ಎಂದರು. ಕಾಡಾನೆಗಳನ್ನು ನಿಯಂತ್ರಣ ಮಾಡುವಲ್ಲಿ ಅರಣ್ಯ ಇಲಾಖೆಯು ವಿಫಲವಾಗಿದೆ.ಸರ್ಕಾರವು ರೈತರು ಕಾಡಾನೆಗಳಿಂದ ಅನುಭವಿಸುತ್ತಿರುವ ವೇದನೆಯನ್ನು ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾಡಾನೆಗಳ ಧಾಳಿಗೆ ನಡೆದ ಪ್ರದೇಶಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಇಲಾಖೆ ಶೀಘ್ರದಲ್ಲಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.