ಮಡಿಕೇರಿ, ಜು. ೨೨: ಸಂಘದ ರೀತಿ-ನೀತಿಯ ಉಲ್ಲಂಘನೆ ಆರೋಪದಡಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸೇರಿದಂತೆ ಕೆಲ ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಲಾಗಿದೆ ಎಂದು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ್ಚ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ವಿರುದ್ಧ ಇಲ್ಲಸಲ್ಲದ ಅಂಶಗಳನ್ನು ಒಳಗೊಂಡ ಸಂದೇಶಗಳು ಹರಿದಾಡಿದ್ದು, ಇದನ್ನು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾಡಿಸಿದ್ದಾರೆಂಬ ಆರೋಪವಿತ್ತು. ಇದರೊಂದಿಗೆ ‘ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮತ್ತು ಬಡಗಲಪುರ ನಾಗೇಂದ್ರ ಅವರುಗಳು ಕಾಂಗ್ರೆಸ್ ಪರ ವಾಲಿದ್ದಾರೆ’ ಎಂದು ಕಾರ್ಯಾಧ್ಯಕ್ಷ ವೀರಸಂಗಯ್ಯ ಜೊತೆ ಮನು ಸೋಮಯ್ಯ ಮಾತನಾಡಿರುವುದು ತಿಳಿದು ಬಂದಿದೆ.