ಮಡಿಕೇರಿ, ಜು. ೨೩: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಮಹಾಸಭೆ ಆಗಸ್ಟ್ ೧೧ ರಂದು ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೊಟ್ಟುಕುತ್ತಿರ ಪಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭ ೧೯೬೨ ಭಾರತ-ಚೈನಾ ಯುದ್ಧ, ೧೯೬೫ರ ಇಂಡೋ-ಪಾಕ್ ಹಾಗೂ ೧೯೭೧ರ ಬಾಂಗ್ಲ ವಿಮೋಚನ ಯುದ್ಧಗಳಲ್ಲಿ ಭಾಗವಹಿಸಿದ್ದ ಕರ್ನಲ್ ಕೆ.ಸಿ. ಸುಬ್ಬಯ್ಯ, ಲೆ.ಕ. ಪಿ.ಸಿ. ಕರುಂಬಯ್ಯ, ಪಿ.ಎಂ. ಕುಶಾಲಪ್ಪ, ಡಬ್ಲುö್ಯ.ಪಿ. ಸೋಮಯ್ಯ, ಬಿ.ವೈ. ಉತ್ತಯ್ಯ, ಎ.ಬಿ. ಅಣ್ಣಪ್ಪ, ಕೆ.ಎಂ. ದೇವಯ್ಯ, ಬಿ.ಎಸ್. ಉತ್ತಪ್ಪ, ಸಿ.ಎಂ. ಕಾರ್ಯಪ್ಪ, ಟಿ.ಬಿ. ತಿಮ್ಮಯ್ಯ, ಮುಂಡಚಾಡೀರ ಬೋಪಯ್ಯ, ಎಂ.ಯು. ಕುಶಾಲಪ್ಪ, ರಾಮಯ್ಯ, ಬಿ.ಎ. ಬೆಳ್ಳಿಯ್ಯಪ್ಪ, ಬಿ.ಎಸ್. ಗಣಪತಿ, ಮಂದ್ರೀರ ಸಿ. ಕರುಂಬಯ್ಯ, ಕೆ.ಬಿ. ಅಪ್ಪಯ್ಯ, ಬಿ.ಸಿ. ಮುತ್ತಣ್ಣ, ಕೆ.ಪಿ. ಸೋಮಣ್ಣ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.

ಇದರೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೧೦ ಮಾಜಿ ಸೈನಿಕರು, ಶೈಕ್ಷಣಿಕವಾಗಿ ಸಾಧನೆಗೈದ ಮಾಜಿ ಸೈನಿಕರ ಮಕ್ಕಳಿಗೆ ಸನ್ಮಾನಿಸಲಾಗುವುದು ಎಂದ ಅವರು, ಸಭೆಗೆ ಮುನ್ನ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಸಿ.ಜಿ. ತಿಮ್ಮಯ್ಯ, ಸಂಚಾಲಕರಾದ ತಳೂರು ಕಾಳಪ್ಪ, ಮಾಚಿಮಂಡ ಭವಾನಿ, ಸಹಕಾರ್ಯದರ್ಶಿ ಟಿ.ಬಿ. ಪ್ರಭಾಕರ್, ಸಹಸಂಚಾಲಕಿ ಚಂದನ್ ಹಾಜರಿದ್ದರು.