ಮಡಿಕೇರಿ, ಜು. ೨೩: ತಾ.೨೧ ರಂದು ಮೈಸೂರಿನಲ್ಲಿ ನಡೆದ ಪಿ.ಕೆ.ಡಿ ಮುಕ್ತ ರಾಷ್ಟಿçÃಯ `ಸಬ್ಮಿಷನ್ ಗ್ರಾಪ್ಲಿಂಗ್' ಕ್ರೀಡೆಯಲ್ಲಿ ಕೊಡಗಿನ ಕ್ರೀಡಾಪಟುಗಳು ಸಾಧನೆ ಗೈದಿದ್ದಾರೆ. ಕೂಡಮಂಗಳೂರು ಗ್ರಾಮದ ಕಿಕ್ ಬಾಕ್ಸಿಂಗ್ ತರಬೇತುದಾರ ಅಮಿತ್ ಹಾಗೂ ದಿವ್ಯಾ ದಂಪತಿಯ ಪುತ್ರಿ ಆಜ್ಜಾ ಚಿನ್ನದ ಪದಕ ಗಳಿಸಿದ್ದಾರೆ. ಕೊಪ್ಪ ಗ್ರಾಮದ ಕೆ. ಚಂದ್ರು ಹಾಗೂ ಕೆ.ಆರ್. ಉಷಾ ದಂಪತಿಯ ಪುತ್ರ ವೇಣು ವರ್ಧನ್ ಬೆಳ್ಳಿ ಪದಕ, ಮುಳ್ಳುಸೋಗೆಯ ಚಂದ್ರಾಚಾರಿ ಹಾಗೂ ಸುಜಾತ ದಂಪತಿಯ ಪುತ್ರ ವರುಣ್ ಎಂ.ಸಿ. ಅವರು ಬೆಳ್ಳಿಯ ಪದಕ ಹಾಗೂ ಹುದುಗೂರಿನ ಆಲಿ ಹಾಗೂ ಮರಿಯಾ ದಂಪತಿಯ ಪುತ್ರ ಮೊಹಮ್ಮದ್ ಶಫಿ ಕಂಚಿನ ಪದಕವನ್ನು ಗಳಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಡೆಹ್ರಾಡೂನ್ನಲ್ಲಿ ನಡೆಯಲಿ ರುವ ರಾಷ್ಟಿçÃಯ ಕಿಕ್ ಬಾಕ್ಸಿಂಗ್ ಕ್ರೀಡಾಕೂಟಕ್ಕೆ ಈ ಎಲ್ಲ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇವರುಗಳು ಕುಶಾಲನಗರದ ಕೂರ್ಗ್ ಕಾಂಬ್ಯಾಟ್ ಕ್ಲಬ್ನಲ್ಲಿ ಅಮಿತ್ ವಿಶ್ವನಾಥ್ ಅವರಲ್ಲಿ ತರಬೇತಿ ಪಡೆದಿದ್ದಾರೆ.