ಕೂಡಿಗೆ, ಜು. ೨೩: ಜಿಲ್ಲೆಯ ಪ್ರಮುಖ ಅಣೆಕಟ್ಟೆ ಯಾದ ಹಾರಂಗಿ ಅಣೆಕಟ್ಟೆಯ ಹಿನ್ನೀ ರಿನ ತಟದಲ್ಲಿ ರುವ ಸಾಕಾನೆ ಶಿಬಿರ ಜಿಲ್ಲೆಯ ಮೂರನೆಯ ಸಾಕಾನೆ ಶಿಬಿರವಾ ಗಿದ್ದು, ಇದೀಗ ಕಳೆದ ನಾಲ್ಕು ದಿನಗ ಳಿಂದ ಪ್ರವಾಸಿಗರಿಗೆ ಸಾಕಾನೆ ಗಳ ವೀಕ್ಷಣೆಗೆ ಅವಕಾಶ ಇಲ್ಲದಂತಾ ಗಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಹಾರಂಗಿಯ ಜಲಾಶಯದ ಬಲದಂಡೆಯ ಮೇಲಿನ ೪೦ ಎಕರೆ ಗಳಷ್ಟು ಪ್ರದೇಶದಲ್ಲಿ ನಿರ್ಮಿಸಿರುವ ವೃಕ್ಷೋದ್ಯಾನ ಹಾಗೂ ಸಾಕಾನೆಗಳ ಶಿಬಿರದಲ್ಲಿರುವ ಒಟ್ಟು ೭ ಸಾಕಾನೆಗಳ ವೀಕ್ಷಣೆಗೆ ಪ್ರವಾಸಿಗರಿಗೆ ಬೆಳಿಗ್ಗೆ ಮತ್ತು ಸಂಜೆಯ ಸಮಯವನ್ನು ಅರಣ್ಯ ಇಲಾ ಖೆಯ ನಿಯಮಾನುಸಾರ ನಿಗದಿಪಡಿ ಸಲಾಗಿದೆ, ಆದರೆ ಕಳೆದ ೧೫ ದಿನಗ ಳಿಂದ ಸುರಿಯುತ್ತಿರುವ ಮಳೆ ಮತ್ತು ಹಾರಂಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಳದಿಂದಾಗಿ ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ತಟದಲ್ಲಿರುವ ಸಾಕಾನೆ ಶಿಬಿರದಲ್ಲಿ ಅತಿಯಾದ ಗಾಳಿ ಮಳೆಯಿಂದಾಗಿ ಸಾಕಾನೆಗಳ ಆರೋಗ್ಯದಲ್ಲಿ ಏರುಪೇರು ಆಗಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ನಾಲ್ಕು ದಿನಗಳಿಂದ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಮತ್ತು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುತ್ತಿರುವ ಪ್ರವಾಸಿಗರಿಗೆ ನಿರಾಸೆ ಉಂಟಾಗುತ್ತಿದೆ.
ಸಾಕಾನೆ ಶಿಬಿರವು ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ತಟದಲ್ಲಿರು ವುದರಿಂದಾಗಿ ಅತಿಯಾದ ಗಾಳಿ ಮಳೆಯಿಂದಾಗಿ ಸಾಕಾನೆಗಳು ಸಹ ನಡುಗುವಂತಹ ಪ್ರಸಂಗ ಎದುರಾಗಿದೆ. ಶಿಬಿರದಲ್ಲಿರುವ ೭ಸಾಕಾನೆಗಳಲ್ಲಿ ವಿಜಯ (೬೦) ಎಂಬ ಒಂದು ಆನೆಯನ್ನು ಈಗಾಗಲೇ ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.
ತಾತ್ಕಾಲಿಕ ಬದಲಿ ವ್ಯವಸ್ಥೆ
ಶಿಬಿರದಲ್ಲಿ ಶೀತ ಗಾಳಿಯಿಂ ದಾಗಿ ಸಾಕಾನೆಗಳು ನಡುಗುತ್ತಿರುವ ಹಿನ್ನೆಲೆಯಲ್ಲಿ ಸಾಕಾನೆ ಶಿಬಿರದ ಸಸ್ಯ ಕ್ಷೇತ್ರದ ಸಮೀಪದಲ್ಲೇ ಸಾಕಾನೆಗಳ ಸುರಕ್ಷತಾ ದೃಷ್ಟಿಯಿಂದ ಬದಲಿ ವ್ಯವಸ್ಥೆಗೆ ಶೆಡ್ಗಳ ನಿರ್ಮಾಣವು ಮಾಡಲಾಗುತ್ತಿದೆ.
-ಕೆ.ಕೆ.ನಾಗರಾಜಶೆಟ್ಟಿ