ಸೋಮವಾರಪೇಟೆ, ಜು. ೨೩ : ಸೋಮವಾರಪೇಟೆ -ಮಡಿಕೇರಿ ರಾಜ್ಯ ಹೆದ್ದಾರಿಯ ಮಾದಾಪುರ ಬಳಿ ಭಾರೀ ಮಳೆ ಗಾಳಿಗೆ ಬೃಹತ್ ಮರವೊಂದು ರಸ್ತೆಗಡ್ಡಲಾಗಿ ಬಿದ್ದಿದ್ದು, ತೆರವು ಕಾರ್ಯದಲ್ಲಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸ್ಥಳೀಯರೊಂದಿಗೆ ನೆರವಾದರು.
ಮರ ಬಿದ್ದ ಹಿನ್ನೆಲೆ ವಾಹನಗಳ ಸಂಚಾರಕ್ಕೆ ತಡೆಯಾಗಿ, ರಸ್ತೆಯ ಎರಡೂ ಬದಿಯಲ್ಲಿ ಸರ್ಕಾರಿ ಬಸ್ ಸೇರಿದಂತೆ ಇನ್ನಿತರ ವಾಹನಗಳು ನಿಲುಗಡೆಗೊಂಡಿದ್ದವು. ನಂತರ ಸ್ಥಳೀಯರು ಯಂತ್ರಗಳ ಮೂಲಕ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಾರ್ಯಾಚರಣೆಯ ಮುಕ್ತಾಯದವರೆಗೂ ಅಪ್ಪಚ್ಚು ರಂಜನ್ ಅವರು ಸ್ಥಳದಲ್ಲೇ ಇದ್ದು, ನೆರವಾದರು.