ಮಡಿಕೇರಿ, ಜು. ೨೩: ಬೆಂಗಳೂರಿನಲ್ಲಿ ಕಳೆದ ರಾತ್ರಿ ಸಂಭವಿಸಿರುವ ಅವಘಡವೊಂದರಲ್ಲಿ ಜಿಲ್ಲೆಯ ಯುವಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.
ಮೂಲತಃ ಆರ್ಜಿ ಗ್ರಾಮದವರಾದ ಬೆಂಗಳೂರಿನ ಮಾರತÀಹಳ್ಳಿಯಲ್ಲಿ ನೆಲೆಸಿರುವ ಬಲ್ಲಚಂಡ ಸಂಪತ್ ಅಪ್ಪಯ್ಯ ಹಾಗೂ ಪ್ರಿಯ (ತಾಮನೆ : ಚೋನಿರ) ದಂಪತಿಯ ಪುತ್ರ ಆಯುಷ್ (೨೧) ದ್ವಿಚಕ್ರ ವಾಹನ ಅವಘಡದಲ್ಲಿ ಸಾವಿಗೀಡಾಗಿದ್ದಾರೆ.
ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆ ಸನಿಹ ಈ ದುರಂತ ಸಂಭವಿಸಿದೆ. ಖಾಸಗಿ ಸಂಸ್ಥೆಯೊAದರಲ್ಲಿ ಉದ್ಯೋಗದಲ್ಲಿದ್ದ ಆಯುಷ್ ಕಳೆದ ರಾತ್ರಿ ೯.೩೦ರ ಸುಮಾರಿಗೆ ಮನೆಯತ್ತ ತೆರಳುತ್ತಿದ್ದಾಗ ಸ್ಕೂಟರ್ ಡಿವೈಡರ್‌ಗೆ ಡಿಕ್ಕಿಯಾಗಿದ್ದು, ರಸ್ತೆಗೆ ಬಿದ್ದ ಆಯುಷ್ ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ.
ರಾತ್ರಿ ವೇಳೆಯಾದ್ದರಿಂದ ಆಸ್ಪತ್ರೆಗೆ ಸಾಗಿಸುವುದು ತಡವಾಗಿದ್ದು, ಇವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಕೂಟರ್‌ಗೆ ಯಾವುದೋ ವಾಹನ ಡಿಕ್ಕಿಯಾಗಿ ಬಳಿಕ ಸ್ಕೂಟರ್ ಡಿವೈಡರ್‌ಗೆ ಅಪ್ಪಳಿಸಿದೆ ಎಂಬ ಸಂಶಯವೂ ಉಂಟಾಗಿದೆ. ಈ ಬಗ್ಗೆ ಪೊಲೀಸ್ ತನಿಖೆಯಿಂದಷ್ಟೆ ವಿವರ ತಿಳಿದು ಬರಬೇಕಿದೆ. ಘಟನೆ ಬಗ್ಗೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.