ಸೋಮವಾರಪೇಟೆ, ಜು. ೨೨: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿAದ ಪಟ್ಟಣದ ರಾಮಮಂದಿರದಲ್ಲಿ ಶ್ರೀ ಗುರು ಪೂರ್ಣಿಮ ಉತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸತ್ಸಂಗ ಕಾರ್ಯಕ್ರಮ ನಡೆಯಿತು. ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹಿರಿಯ ಶಿಕ್ಷಕ ಮಹದೇವಪ್ರಸಾದ್ ಸತ್ಸಂಗ ಮತ್ತು ಗುರು ಪೂರ್ಣಿಮ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರು ಮತ್ತು ಮಾರ್ಗದರ್ಶಕರಿಗೆ ಗೌರವವನ್ನು ಸಮರ್ಪಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಗುರು ಮತ್ತು ಅವರ ಶಿಷ್ಯರ ನಡುವಿನ ಪವಿತ್ರ ಬಂಧವನ್ನು ಗೌರವಿಸಲಾಗುತ್ತದೆ. ಇದು ನಮ್ಮ ಜೀವನದಲ್ಲಿ ಜ್ಞಾನ, ಬುದ್ದಿವಂತಿಕೆ ಮತ್ತು ಮಾರ್ಗದರ್ಶನದ ಮಹತ್ವವನ್ನು ನೆನಪಿಸುತ್ತದೆ ಎಂದರು.
ಜೀವನದಲ್ಲಿ ಅಧ್ಯಾತ್ಮಿಕತೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಮಕ್ಕಳಿಗೆ ಚಿಕ್ಕಂದಿನಿAದಲೇ ಗುರು ಹಿರಿಯರಿಗೆ ಗೌರವ ನೀಡುವ ಅಭ್ಯಾಸವನ್ನು ಪೋಷಕರು ಹೇಳಿಕೊಡಬೇಕು. ಆರ್ಟ್ ಆಫ್ ಲಿವಿಂಗ್ ವತಿಯಿಂದ ನಡೆಯುವ ಯುವ ನಾಯಕತ್ವ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಿದಲ್ಲಿ, ಅವರಲ್ಲಿ ನಾಯಕತ್ವ ಗುಣಗಳು ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ರಾಗಿಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇವಾಲಯದ ಅರ್ಚಕ ಮೋಹನ್‌ಕುಮಾರ್ ಶಾಸ್ತಿç ಅವರು ಶ್ರೀ ಸತ್ಯನಾರಾಯಣ ಪೂಜೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಹಿರಿಯ ಶಿಕ್ಷಕರುಗಳಾದ ಶ್ವೇತ ಲಮಣಿ, ಚನ್ನವೀರಪ್ಪ, ವಾಣಿಶ್ರೀ ಮತ್ತಿತರರು ಉಪಸ್ಥಿತರಿದ್ದರು.