ವೀರಾಜಪೇಟೆ, ಜು. ೨೩: ತಾಲೂಕು ಕೇಂದ್ರವಾಗಿರುವ ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಒಳರೋಗಿಗಳ ಹಾಸಿಗೆಗಳಿದ್ದು ಸುಸ್ವಜಿತ ಕಟ್ಟಡದಲ್ಲಿ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನುರಿತ ಸಿಬ್ಬಂದಿಗಳ ಕೊರತೆಯಿಂದಾಗಿ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದ್ದು, ಸರಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಕಮ್ಯುನಿಸ್ಟ್ ಪಕ್ಷದ ವೀರಾಜಪೇಟೆ ಶಾಖೆ ಕಾರ್ಯದರ್ಶಿ ಶಾಜಿ ರಮೇಶ್ ಒತ್ತಾಯಿಸಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ವೀರಾಜಪೇಟೆ ಶಾಖೆ ವತಿಯಿಂದ ಪಕ್ಷದ ಕಚೇರಿಯಲ್ಲಿ ನಡೆದ ಮುಖಂಡರುಗಳ ಸಭೆಯಲ್ಲಿ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಯಲ್ಲಿ ಸ್ತಿçà ರೋಗ ತಜ್ಞರು ಖಾಯಂ ಆಗಿ ಬೇಕಿದ್ದರೂ ಅವರು ನಿರ್ದಿಷ್ಟ ದಿನಗಳಲ್ಲಷ್ಟೇ ಬರುವುದರಿಂದ ಗರ್ಭಿಣಿಯರು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ಬಂದಿದೆ. ವೈದ್ಯರ ಕೊರತೆಯಿಂದ ಇರುವ ವೈದ್ಯರನ್ನು ಕಾಣಲು ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ಕಾದು ನಿಲ್ಲುವಂತಾಗಿದೆ. ಈ ಸಮಸ್ಯೆಗಳನ್ನು ಸರಕಾರ ಬಗೆಹರಿಸದಿದ್ದರೆ ಪಕ್ಷದ ವತಿಯಿಂದ ಪ್ರತಿಭಟನೆಗೆ ಮುಂದಾಗುವುದಾಗಿ ತಿಳಿಸಿದರು.
ಸಿಪಿಐ(ಎಂ) ಜಿಲ್ಲಾ ಸಂಘಟನೆಯ ಎ.ಸಿ. ಸಾಬು ಮಾತನಾಡಿ, ಸರಕಾರಿ ಆಸ್ಪತ್ರೆಗೆ ತುರ್ತು ಚಿಕೆತ್ಸೆಗೆಂದು ಬಂದಾಗ ಶನಿವಾರ ಮತ್ತು ಭಾನುವಾರ ವೈದ್ಯರುಗಳು ರಜೆಯಲ್ಲಿರುತ್ತಾರೆ. ಹತ್ತಾರು ವರ್ಷಗಳಿದಲೂ ಈ ಸಮಸ್ಯೆಗಳು ಮುಗಿದಿಲ್ಲ. ಆಸ್ಪತ್ರೆಯ ಆವರಣದಲ್ಲಿ ಕುಡಿಯುವ ನೀರು ಮತ್ತು ಕ್ಯಾಂಟಿನ್ ವ್ಯವಸ್ಥೆ ಅಗತ್ಯವಾಗಿದೆ. ಈ ಹಿಂದೆ ಸುಮಾರು ೩೫ ಸಿಬ್ಬಂದಿಗಳು ಸ್ವಚ್ಛತೆಗಾಗಿ ಕೆಲಸ ಮಾಡುತ್ತಿದ್ದರು. ಈಗ ಒಂದೆರಡು ನೌಕರರು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದರು.
ಸಭೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿಯ ಪಿ. ಖಾಲಿದ್, ಕೆ.ಕೆ. ಹರಿದಾಸ್, ಕೆ.ರದೀಶ್, ಕೆ. ಖಾಶಿಂ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.