ಕುಶಾಲನಗರ, ಜು. ೨೩: ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮದಿAದ ಕುಶಾಲನಗರ ಹಾರಂಗಿ ಸಂಗಮ ತನಕ ಏಕಕಾಲದಲ್ಲಿ ೧೪ ಕಡೆ ಜೀವನದಿ ಕಾವೇರಿಗೆ ನಮಾಮಿ ಕಾವೇರಿ ತಂಡದ ಮೂಲಕ ಮಹಾ ಆರತಿ ಬೆಳಗುವ ಕಾರ್ಯಕ್ರಮ ಭಾನುವಾರ ನಡೆಯಿತು.
ಭಾಗಮಂಡಲ, ಚೆಟ್ಟಿಮಾನಿ, ನಾಪೋಕ್ಲು, ಸಿದ್ದಾಪುರ, ಕರಡಿಗೋಡು ಕಕ್ಕಬೆ, ಕುಶಾಲನಗರ, ಮುಳ್ಳುಸೋಗೆ, ಕೂಡ್ಲೂರು, ಕೊಪ್ಪ, ಮಾದಾಪಟ್ಟಣ, ಚಿಕ್ಕಹೊಸೂರು, ಗಿರಗೂರು ಸೇರಿದಂತೆ ಕಾವೇರಿ ನದಿ ತಟದ ಉದ್ದಕ್ಕೂ ತುಂಬಿ ಹರಿಯುತ್ತಿದ್ದ ಕಾವೇರಿಗೆ ಒಟ್ಟು ೧೪ ಕಡೆ ಆರತಿ ಕಾರ್ಯಕ್ರಮಗಳು ನಡೆದವು.
ಕಳೆದ ಒಂದು ವಾರದಿಂದ ಉಕ್ಕಿ ಹರಿಯುತ್ತಿದ್ದ ಕಾವೇರಿ ಶಾಂತವಾಗಿ ಹರಿದು ನಾಡು ಸುಭಿಕ್ಷವಾಗಲಿ ಎಂದು ಪ್ರಸ್ತಾಪಿಸಲಾಯಿತು. ನಮಾಮಿ ಕಾವೇರಿ ತಂಡದ ಮುಖ್ಯಸ್ಥೆ ವನಿತಾ ಚಂದ್ರಮೋಹನ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಜರಗಿದವು.
ಕುಶಾಲನಗರದ ಆರತಿ ಕ್ಷೇತ್ರದಲ್ಲಿ ಹುಣ್ಣಿಮೆ ಅಂಗವಾಗಿ ೧೬೧ನೇ ಮಹಾ ಆರತಿ ಕಾರ್ಯಕ್ರಮ ಜರುಗಿತು.