ಮಡಿಕೇರಿ, ಜು. ೨೩: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಎಸ್. ಅಳವಡಿಸುವ ಸರಕಾರದ ಆದೇಶವನ್ನು ಖಂಡಿಸಿ ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೇಷನ್ ಕೊಡಗು ಜಿಲ್ಲಾ ಘಟಕ ನೇತೃತ್ವದಲ್ಲಿ ವಿವಿಧ ವಾಹನ ಚಾಲಕ, ಮಾಲೀಕರ ಸಂಘಗಳÀ ಸಹಯೋಗದೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಯಿತು.
ಫೀ.ಮಾ. ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾ ಕಾರರು ಜನರಲ್ ತಿಮ್ಮಯ್ಯ ವೃತ್ತದಿಂದ ಸಾಗಿ ಇಂದಿರಾಗಾAಧಿ ವೃತ್ತದ ತನಕ ತೆರಳಿ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡರು. ಜಿಲ್ಲೆಯ ವಿವಿಧೆಡೆಯ ನೂರಾರು ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರದ ಕ್ರಮದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ ರಾಜ್ಯದ ಸಾರಿಗೆ ಇಲಾಖೆಯು ನೀಡಿರುವ ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಎಂಬ ಅವೈಜ್ಞಾನಿಕ ಸಾಧನ ಅಳವಡಿಸಲು ಆದೇಶ ಹೊರಡಿಸಿ ರುವುದು ಸರಿಯಲ್ಲ. ಇದರಿಂದ ಚಾಲಕರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರ ಸಾಧನ ಅಳವಡಿಕೆಗೆ ರೂ. ೭,೮೯೦ ಸಾವಿರ ನಿಗದಿಗೊಳಿಸಿದೆ. ಆದರೆ, ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ರೂ. ೧೩ ಸಾವಿರದಿಂದ ೧೫ ಸಾವಿರ ತನಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ಚಾಲಕರಿಗೆ ಸಮಸ್ಯೆ ಉಂಟಾಗಿದೆ. ಜೊತೆಗೆ ರಾಜ್ಯದ
(ಮೊದಲ ಪುಟದಿಂದ) ಸಾರಿಗೆ ಸಚಿವರು ಸಾಧನ ಅಳವಡಿಸದಿದ್ದರು ವಾಹನಗಳಿಗೆ ಎಫ್.ಸಿ. ಮಾಡುವಂತೆ ತಿಳಿಸಿದ್ದರೂ ಅಧಿಕಾರಿಗಳು ಸಚಿವರ ಆದೇಶಕ್ಕೆ ಬೆಲೆ ನೀಡದೆ ಎಫ್.ಸಿ. ಮಾಡಲು ಸಾಧನ ಅಳವಡಿಕೆ ಕಡ್ಡಾಯ ಎಂದು ಹೇಳುತ್ತಿದ್ದಾರೆ. ಯಾವುದೇ ಪೂರ್ವ ತಯಾರಿ ಇಲ್ಲದೆ, ಕಂಟ್ರೋಲ್ ರೂಂ ಸ್ಥಾಪಿಸದೆ ತರಾತುರಿಯಲ್ಲಿ ಈ ನಿಯಮ ಜಾರಿಗೊಳಿಸಲಾಗುತ್ತಿದೆ. ಈ ಸಾಧನಗಳ ಅಳವಡಿಕೆಯಿಂದ ಏನೂ ಪ್ರಯೋಜನವಿಲ್ಲ ಎಂದು ಸಂಘಟನೆ ಪ್ರಮುಖರು ಆರೋಪಿಸಿದರು.
ದುಬಾರಿ ತೆರಿಗೆ, ಸ್ಪೀಡ್ ಗವರ್ನರ್, ದುಬಾರಿ ವಿಮೆ ಮುಂತಾದ ಸರಕಾರಿ ವೆಚ್ಚಗಳಿಂದ ಮತ್ತು ಬಾಡಿಗೆ ಮಾಡುವ ಖಾಸಗಿ ವಾಹನಗಳಿಂದ ಹೈರಾಣಾಗಿರುವ ಚಾಲಕರಿಗೆ ಪೂರಕ ವಾಗಿರುವ ಅನೇಕ ಕಾಯಿದೆಗಳಿದ್ದರೂ ಅವುಗಳನ್ನು ಅನುಷ್ಠಾನಗೊಳಸಿ ಸ್ವಉದ್ಯೋಗವಾದ ಟ್ಯಾಕ್ಸಿ ಉದ್ಯಮವನ್ನು ಪ್ರೋತ್ಸಾಹಿಸುವ ಬದಲು ನಿರ್ನಾಮ ಮಾಡುವ ಹುನ್ನಾರ ಇದಾಗಿದೆ ಎಂದು ದೂರಿದ ಚಾಲಕರು, ಈ ಆದೇಶ ಹಿಂಪಡೆ ಯಬೇಕೆಂದು ಒತ್ತಾಯಿಸಿದರು. ಇದರೊಂದಿಗೆ ಬಾಡಿ ಗೆಗೆ ವಾಹನ ಸೇವೆ ನೀಡುತ್ತಿರುವುದು ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ಚಾಲಕರು ಕಷ್ಟಪಡುವ ಪರಿಸ್ಥಿತಿ ತಲೆದೋರಿದೆ. ವೈಟ್ ಬೋರ್ಡ್ ವಾಹನಗಳು ಬಾಡಿಗೆ ಮಾಡಿ ತೆರಿಗೆ ವಂಚಿಸುತ್ತಿದೆ. ಈ ಬಗ್ಗೆ ಕ್ರಮವಹಿಸು ವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗ ಧಿಕಾರಿ ವಿನಾಯಕ ನರ್ವಾಡೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಅಸೋಸಿ ಯೇಷನ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಜಿಲ್ಲಾಧ್ಯಕ್ಷ ಎಂ.ಜೆ. ವಿನೋದ್, ಗೌರವಾಧ್ಯಕ್ಷ ಕಳ್ಳಿಚಂಡ ಪರಶುರಾಮ್, ಉಪಾಧ್ಯಕ್ಷರುಗಳಾದ ತಿರುಪತಿ, ಅಖಿಲ್ ಶಿವಾಜಿ, ಸ್ಟಾö್ಯನ್ಲಿ, ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ಕಿರಣ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ.ಬಿ. ರವಿ, ಕುಶಾಲನಗರ ತಾಲೂಕು ಅಧ್ಯಕ್ಷ ಪ್ರಕಾಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಹೇಮಂತ್, ಮಡಿಕೇರಿ ತಾಲೂಕು ಅಧ್ಯಕ್ಷ ಶಬೀರ್ ಶೇಕ್, ಪ್ರವಾಸಿ ವಾಹನ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ತೆಕ್ಕಡ ಸಂತು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು. ಜಿಲ್ಲಾಧ್ಯಕ್ಷ ಎಂ.ಜೆ. ವಿನೋದ್, ಗೌರವಾಧ್ಯಕ್ಷ ಕಳ್ಳಿಚಂಡ ಪರಶುರಾಮ್, ಉಪಾಧ್ಯಕ್ಷರುಗಳಾದ ತಿರುಪತಿ, ಅಖಿಲ್ ಶಿವಾಜಿ, ಸ್ಟಾö್ಯನ್ಲಿ, ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ಕಿರಣ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ.ಬಿ. ರವಿ, ಕುಶಾಲನಗರ ತಾಲೂಕು ಅಧ್ಯಕ್ಷ ಪ್ರಕಾಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಹೇಮಂತ್, ಮಡಿಕೇರಿ ತಾಲೂಕು ಅಧ್ಯಕ್ಷ ಶಬೀರ್ ಶೇಕ್, ಪ್ರವಾಸಿ ವಾಹನ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ತೆಕ್ಕಡ ಸಂತು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.